Bike Ride: ನಡುರಾತ್ರಿ ರಸ್ತೆಯಲ್ಲಿಯೇ ರೊಮ್ಯಾನ್ಸ್ ಮಾಡುತ್ತಾ ಬೈಕಿನಲ್ಲಿ ಜಾಲಿ ರೈಡ್ ಹೊಡೆದ ಜೋಡಿ…..!

ಇತ್ತೀಚಿಗೆ ಬೈಕ್ ರೈಡ್ ಗಳ ಬಗ್ಗೆ ಸುದ್ದಿಗಳು ಹೆಚ್ಚಾಗಿ ಕೇಳಿಬರುತ್ತಿದೆ. ಅದರಲ್ಲೂ ಕೆಲ ಯುವಕರ ವೀಲ್ಹಿಂಗ್ ಮಾಡುತ್ತಾ ಪುಂಡಾಟ ಮೆರೆಯುತ್ತಿದ್ದಾರೆ. ಈ ರೀತಿಯಲ್ಲಿ ಮಾಡಿದವರಿಗೆ ಪೊಲೀಸರು ದಂಡ ಹಾಕುತ್ತಿದ್ದರೂ ಸಹ ಅವರ ಪುಂಡಾಟ ನಿಂತಿಲ್ಲ ಎಂದೇ ಹೇಳಬಹುದು. ಇದೀಗ ಮಧ್ಯರಾತ್ರಿಯಲ್ಲಿ ಹೈವೇ ರಸ್ತೆಯಲ್ಲಿ ಬೈಕ್ ನಲ್ಲಿ ರೋಮ್ಯಾನ್ಸ್ ಮಾಡುತ್ತಾ ಜಾಲಿ ರೈಡ್ (Bike Ride) ಹೊರಟಿದ್ದಾರೆ. ಸಾರ್ವಜನಿಕವಾಗಿ ಅಸಭ್ಯ ವರ್ತನೆಯ ವಿಡಿಯೋ ವೈರಲ್ ಆಗುತ್ತಿದೆ. ಜೊತೆಗೆ ಈ ಲವರ್ಸ್ ವರ್ತನೆಯ ವಿರುದ್ದ ನೆಟ್ಟಿಗರು ಆಕ್ರೋಷ ಹೊರಹಾಕುತ್ತಿದ್ದಾರೆ.

lovers Romancing on Bike 0

ಇತ್ತೀಚಿಗೆ ಪ್ರೀತಿಯ ಹೆಸರಲ್ಲಿ ಪ್ರೇಮಿಗಳ ಅತಿರೇಕದ ವರ್ತನೆ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ತಾವು ರಸ್ತೆಯಲ್ಲಿದ್ದೇವೆ, ಸಾರ್ವಜನಿಕರು ಇದ್ದಾರೆ ಎಂಬುದುರ ಪರಿಜ್ಞಾನವೇ ಇಲ್ಲದಂತೆ ನಡು ರಸ್ತೆಯಲ್ಲಿ ಪ್ರೇಮಿಗಳಿಬ್ಬರು ರೊಮ್ಯಾನ್ಸ್ ಮಾಡುತ್ತಾ ಜಾಲಿ ರೈಡ್ ಹೊರಟಿದ್ದಾರೆ. ಈ ಘಟನೆ ದೆಹಲಿಯ ವಿಕಾಸಪುರಿ ಫ್ಲೈಓವರ್‍ ನಲ್ಲಿ ನಡೆದಿದೆ ಎನ್ನಲಾಗಿದೆ. ಇಲ್ಲಿ ಯುವಕನೋರ್ವ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ತನ್ನ ಪ್ರೇಯಸಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು, ರೊಮ್ಯಾನ್ಸ್ ಮಾಡುತ್ತಾ ಬೈಕ್ ರೈಡ್ ಮಾಡಿದ್ದಾನೆ. ಅವರ ಹಿಂಬದಿಯಲ್ಲಿ ಹೋಗುತ್ತಿದ್ದ ಯಾರೋ ಅದನ್ನು ವಿಡಿಯೋ ಮಾಡಿದ್ದಾರೆ. ಅದನ್ನು ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಇಂತಹ ಹುಚ್ಚಾಟಗಳಿಗೆ ಸರ್ಕಾರ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ : https://x.com/GagandeepNews/status/1835238819831873911

ಇನ್ನೂ ಈ ವಿಡಿಯೋವನ್ನು  ಗಗನ್‌ ದೀಪ್‌ ಸಿಂಗ್‌ (GagandeepNews) ಎಂಬವರು ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೈರಲ್‌ ವಿಡಿಯೋದಲ್ಲಿ ಮಧ್ಯ ರಾತ್ರಿಯಲ್ಲಿ ದೆಹಲಿಯ ಹೈವೇ ರಸ್ತೆಯಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು, ರೊಮ್ಯಾನ್ಸ್‌ ಮಾಡ್ತಾ ಜಾಲಿ ರೈಡ್‌ ಹೋಗ್ತಾ ಇರುವ ದೃಶ್ಯವನ್ನು ಕಾಣಬಹುದಾಗಿದೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೆ ಭಾರಿ ವೈರಲ್ ಆಗುತ್ತಿದೆ. ಪ್ರೇಮಿಗಳ ದುರ್ವತನೆಗೆ ಅನೇಕರು ಆಕ್ರೋಷ ಹೊರಹಾಕುತ್ತಿದ್ದಾರೆ. ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top