ಹಿಂದೂಗಳ ಪ್ರಮುಖವಾದ ಹಬ್ಬಗಳಲ್ಲಿ ಗಣೇಶ ಚತುರ್ಥಿ ತುಂಬಾನೆ ಖ್ಯಾತಿ ಪಡೆದುಕೊಂಡಿದೆ. ಸ್ವತಂತ್ರ ಪೂರ್ವದಲ್ಲಿ ಭಾರತೀಯರನ್ನು ಸಂಘಟನೆ ಮಾಡುವ ಉದ್ದೇಶದಿಂದ ಬಾಲಗಂಗಾಧರ ತಿಲಕ್ ರವರು (Ganeshostava) ಗಣೇಶ ಉತ್ಸವವನ್ನು ಸಾರ್ವಜನಿಕವಾಗಿ ಆರಂಭಿಸಿದರು ಎಂದು ವಿಶ್ವ ಹಿಂದೂ ಪರಿಷತ್ ನ ತಾಲೂಕು ಅಧ್ಯಕ್ಷ ಎಂ.ಟಿ.ಎಸ್ ಶ್ರೀನಾಥ್ ತಿಳಿಸಿದರು.
ಯುವಕರ ಅಚ್ಚುಮೆಚ್ಚಿನ ಹಾಗೂ ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ (Ganeshostava)ಒಂದಾದ ಗೌರಿ ಗಣೇಶ ಹಬ್ಬವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಾದ್ಯಂತ ಶ್ರದ್ದಾಭಕ್ತಿಯಿಂದ ಹಾಗೂ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. 9ನೇ ವಾರ್ಡಿನಲ್ಲಿ ಬಾಲ ವಿದ್ಯಾ ಗಣಪತಿ ಯುವಕರ ಸಂಘದ ವತಿಯಿಂದ 29 ನೇ ವರ್ಷದ ಗಣೇಶ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಎಂ.ಟಿ.ಎಸ್. ಶ್ರೀನಾಥ್, (Ganeshostava) ಇಂದು ನಾವೆಲ್ಲರೂ ಆಚರಣೆ ಮಾಡುತ್ತಿರುವ ಗಣೇಶ ಚತುರ್ಥಿ ಹಿಂದೆ ದೊಡ್ಡ ಕಥೆಯಿದೆ. ಗಣೇಶ ಹಬ್ಬವನ್ನು ಸ್ವತಂತ್ರಕ್ಕೂ ಪೂರ್ವ ಸ್ವತಂತ್ರ ಹೋರಾಟಗಾರರಾದ ಬಾಲಗಂಗಾಧರ ತಿಲಕ್ ರವರು ಆರಂಭಿಸಿದಂತಹ ಆಚರಣೆಯಾಗಿದೆ. (Ganeshostava)ಅಂದಿನ ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ಯ್ರ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ಏಕೀಕರಣಗೊಳಿಸಲು ಬಾಲಗಂಗಾಧರ ತಿಲಕ್ ರವರು ಈ ಗಣೇಶ ಹಬ್ಬವನ್ನು ಆಯ್ಕೆ ಮಾಡಿಕೊಂಡಿದ್ದರು. (Ganeshostava)ಅವರ ಕರೆಗೆ ಜಾತಿ ಮತ ಭೇದವಿಲ್ಲದೇ ಬೇಗನೆ ಸ್ಪಂಧಿಸಿದರು. ದೇಶಾದ್ಯಂತ ಭಕ್ತಿಯ ಪ್ರವಾಹ ಹರಿಯುವುದರೊಂದಿಗೆ ಬ್ರಿಟಿಷರಿಗೆ ನಮ್ಮ ಏಕತೆಯ ಬಿಸಿಯನ್ನೂ ಮುಟ್ಟಿಸಿತು. ಅದೇ ರೀತಿ ಇಂದಿನ ಯುವಕರು ಸಮಾಜದಲ್ಲಿನ ಅನಿಷ್ಠಗಳ ವಿರುದ್ದ ಹೋರಾಡಲು ಮುಂದಾಗಬೇಕೆಂದರು.
ಬಳಿಕ ಕಸಾಪ ಅಧ್ಯಕ್ಷ ಬಿ.ಮಂಜುನಾಥ್ ಮಾತನಾಡಿ, ಯುವಕರಿಗೆ (Ganeshostava) ಗಣೇಶ ಹಬ್ಬವೆಂದರೇ ತುಂಬಾ ಅಚ್ಚುಮೆಚ್ಚು. ಎಲ್ಲರನ್ನೂ ಈ ಗಣೇಶ ಹಬ್ಬ ಒಗ್ಗೂಡಿಸುತ್ತದೆ. ಅದೇ ರೀತಿ ಸಮಾಜದ ಅನಿಷ್ಠ ಪದ್ದತಿಗಳು, ಭ್ರಷ್ಟಾಚಾರ ಸೇರಿದಂತೆ ದೇಶದ ಹಿತಕ್ಕೆ ಧಕ್ಕೆ ಬರುವಂತಹ ಯಾವುದೇ ವಿಚಾರವಿರಲಿ ಎಲ್ಲ ಯುವಕರು ಒಗ್ಗೂಡಬೇಕಿದೆ. (Ganeshostava) ಇನ್ನೂ ಗಣೇಶ ಉತ್ಸವಕ್ಕೆ ಸರ್ಕಾರ ಇತ್ತೀಚಿಗೆ ಅನೇಕ ನಿಬಂಧನೆಗಳನ್ನು ವಿಧಿಸುತ್ತಿದೆ. ಇದರಿಂದ ಉತ್ಸವ ಆಚರಿಸಲು ಸಮಸ್ಯೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಈ ರೀತಿಯ ನಿಬಂಧನೆಗಳನ್ನು ಸಡಿಲಿಸಬೇಕು ಎಂದರು.
ಗುಡಿಬಂಡೆ (Ganeshostava)ತಾಲ್ಲೂಕಿನ ಸೋಮೇನಹಳ್ಳಿ, ಗರುಡಾಚಾರ್ಲಹಳ್ಳಿ, ಹಂಪಸಂದ್ರ, ಬೀಚಗಾನಹಳ್ಳಿ ಕ್ರಾಸ್, ಪಟ್ಟಣದ ಕುಂಬಾರಪೇಟೆಯ ಗೌರಿಪುತ್ರ ಗೆಳೆಯರ ಬಳಗ, ಅಂಬೇಡ್ಕರ್ ನಗರದ ಈಗಲ್ ಬಾಯ್ಸ್, ವಿನಾಯಕನಗರದ ಪ್ರಸನ್ನ ಗಣಪತಿ ಯುವಕರ ಸಂಘ, ಬೆಟ್ಟದ ಕೆಳಗಿನಪೇಟೆಯ ಸಪ್ತಗಿರಿ ಯುವಕರ ಸಂಘ, ಮುತ್ಯಾಲಮ್ಮ ಗುಡಿ ಬೀದಿಯ ಶ್ರೀ ವಿನಾಯಕ ಗೆಳೆಯರ ಬಳಗ, ಬಾಪೂಜಿನಗರ ಚಾಯದೇವಿ ವಿನಾಯಕ ಗೆಳೆಯರ ಬಳಗ ವತಿಯಿಂದ ಸೇರಿದಂತೆ ಇತರೆ (Ganeshostava) ವಾರ್ಡ್ ಗಳಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿದರು.
ಇನ್ನು ಕೆಲವರು ತಮ್ಮ ತಮ್ಮ ಮನೆಗಳಲ್ಲಿಯೇ ಆಚರಿಸಿದರು. (Ganeshostava) ಸಂಜೆ ಮಹಿಳೆಯರು, ಮಕ್ಕಳು ಹೊಸ ಬಟ್ಟೆಗಳನ್ನು ದರಿಸಿಕೊಂಡು. ವಿವಿಧ ವಾರ್ಡ್ ಗಳಲ್ಲಿ ಪ್ರತಿಷ್ಠಪಿಸಿರುವ ಗಣೇಶ ಮೂರ್ತಿಗಳನ್ನು ದರ್ಶನ ಮಾಡಿ ಹೂವು ಅಚ್ಚತೆ ಕಾಳು ಹಾಕಿ ಬಸಕಿಯನ್ನು ಹೊಡೆದು ತಮ್ಮ ಕೋರಿಕೆಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವುದು ಕಂಡುಬಂತು. ಗಣೇಶ ಹಬ್ಬದ ಪ್ರಯುಕ್ತ ಮಹಿಳೆಯರು ಹುತ್ತ ಹಾಗೂ ನಾಗರ ಕಟ್ಟೆಗೆ ಹಾಲು ಹಾಕಿ, ದಾರವನ್ನು ಕಟ್ಟಿ ಪೂಜೆ ನಡೆಸಿದರು.