Protest News – ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣ ಪಂಚಾಯತಿ ವತಿಯಿಂದ ಕೈಗೊಂಡ ಕಾಮಗಾರಿಗಳು, ಇ-ಖಾತೆ ಯಲ್ಲಿ ಅವ್ಯವಹಾರದ ತನಿಖೆ ಸೇರಿದಂತೆ ವಿವಿಧ ಬೇಡಿಕೆಗಳನ್ನು (Protest News) ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನಗರ ಘಟಕದ ವತಿಯಿಂದ (Protest News) ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (Protest News) ಗುಡಿಬಂಡೆ ನಗರ ಘಟಕದ ಸಂಘಟನಾ ಸಂಚಾಲಕ ಲಕ್ಷ್ಮೀನಾರಾಯಣ ಮಾತನಾಡಿ ಸುಮಾರು ವರ್ಷಗಳ ಹಿಂದೆ ಗುಡಿಬಂಡೆ ಮುಖ್ಯ ರಸ್ತೆ ಅಗಲೀಕರಣದ ವೇಳೆ ಅನೇಕ ದಲಿತರು ಮನೆ ಕಳೆದುಕೊಂಡಿದ್ದಾರೆ. (Protest News) ಮನೆ ಕಳೆದುಕೊಂಡ ಅನೇಕರು ಊರು ಬಿಟ್ಟು ಹೋಗಿದ್ದಾರೆ. ರಸ್ತೆ ಅಭಿವೃದ್ದಿಯ ದೃಷ್ಟಿಯಿಂದ ಮನೆ ಕಳೆದುಕೊಂಡ ಅನೇಕರಿಗೆ ನಿವೇಶನ ನೀಡಲು ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. (Protest News) ಸ್ವಂತ ಮನೆ ಕಳೆದುಕೊಂಡವರು ಇದೀಗ ಬೀದಿ ಪಾಲಾಗಿದ್ದಾರೆ. ಈಗಾಗಲೇ ಅನೇಕ ಬಾರಿ ನಿವೇಶನ ನೀಡಲು ಮನವಿಗಳನ್ನು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. (Protest News) ನಿವೇಶನ ಕಳೆದುಕೊಂಡವರು ಬೇರೆ ಕಡೆಗೆ ವಲಸೆ ಹೋಗುವಂತಾಗಿದೆ. ನಿವೇಶನ ನೀಡುವಂತೆ ಕೇಳಿದರೇ ಕೊಡುತ್ತೇವೆ ಎಂದು ಸಬೂಬು ಹೇಳುತ್ತಾರೆ ಎಂದು ಆರೋಪಿಸಿದರು.
ಇನ್ನೂ ಪಟ್ಟಣದ(Protest News) ವ್ಯಾಪ್ತಿಯಲ್ಲಿ ಬರುವಂತಹ ಕರಾಬು ಜಮೀನುಗಳಲ್ಲಿ ಪ.ಪಂ. ವತಿಯಿಂದ ಅಕ್ರಮವಾಗಿ ಇ ಖಾತೆ ಮಾಡಿಕೊಟ್ಟಿದ್ದಾರೆ. ಕರಾಬು ಜಮೀನಿನಲ್ಲಿ ಅದು ಹೇಗೆ ಪ.ಪಂ ಇ ಖಾತೆ ಕೊಡಲು ಸಾಧ್ಯ. (Protest News) ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿ ಒಂದೇ ಜಾಗವನ್ನು ಅನೇಕರಿಗೆ ಇ-ಖಾತೆ ಮಾಡಿಕೊಟ್ಟಿದ್ದಾರೆ. ಜೊತೆಗೆ ಪಟ್ಟಣದಲ್ಲಿ ಕೈಗೊಂಡ ಅನೇಕ ಕಾಮಗಾರಿಗಳಲ್ಲಿ ಅವ್ಯವಹಾರವಾಗಿದೆ, (Protest News) ಜೊತೆಗೆ ಕಾಮಗಾರಿಗಳು ಕಳಪೆಯಾಗಿದೆ. ಈ ಸಂಬಂಧ ಕಳೆದ ವರ್ಷದ ನವೆಂಬರ್ ಮಾಹೆಯಲ್ಲಿಯೇ ನಾವು ಪ್ರತಿಭಟನೆಯನ್ನು ಮಾಡಿದ್ದೆವು. ಅಂದಿನ ಮುಖ್ಯಾಧಿಕಾರಿಗಳಿಗೆ ಸಮಸ್ಯೆಗಳನ್ನು ಬಗೆಹರಿಸಲು (Protest News) 15 ದಿನಗಳ ಕಾಲಾವಕಾಶ ಸಹ ನೀಡಲಾಗಿತ್ತು. ತಿಂಗಳುಗಳು ಕಳೆದರೂ ಪ.ಪಂ ಅಧಿಕಾರಿಗಳಿಂದ ಯಾವುದೇ ಸ್ಪಂದನೆಯಿಲ್ಲದ ಕಾರಣ ನಾವು ಅನಿರ್ದಿಷ್ಟಾವಧಿ ಧರಣಿಯನ್ನು ಹಮ್ಮಿಕೊಂಡಿದ್ದೇವೆ. (Protest News) ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸುವವರೆಗೂ ನಮ್ಮ ಪ್ರತಿಭಟನೆಯನ್ನು ಕೈ ಬಿಡುವುದಿಲ್ಲ ಎಂದು ತಿಳಿಸಿದರು.
ಈ ವೇಳೆ (Protest News) ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಂಜುನಾಥ್, ಕೃಷ್ಣಪ್ಪ, ಮಹೇಶ್, ತಿಮ್ಮಪ್ಪ, ವಲಿ, ಕುಮಾರ್, ರಫೀಕ್ ಸೇರಿದಂತೆ ಹಲವರು ಇದ್ದರು.