Karnataka Politics – ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಮುಡಾ ಸೈಟ್ ಹಂಚಿಕೆ ಹಗರಣದ ಸಂಬಂಧ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯನವರ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದೆ. ಈ ಸಂಬಂಧ ರಾಜ್ಯದಾದ್ಯಂತ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ಸಹ ನಡೆಯುತ್ತಿದೆ. (Karnataka Politics) ಈ ನಡುವೆ ಕಾಂಗ್ರೇಸ್ ಹೈಕಮಾಂಡ್ ರಹಸ್ಯ ಸಭೆಯೊಂದು ನಡೆಸಿದೆ ಎನ್ನಲಾಗಿದೆ. ಈ ಸಭೆಯಲ್ಲಿ ಒಂದು ವೇಳೆ ಸಿಎಂ ರಾಜಿನಾಮೆ ನೀಡಿದರೇ ಮುಂದಿನ ಸಿಎಂ ಸ್ಥಾನಕ್ಕಾಗಿ ಐವರು ಪ್ರಭಾವಿಗಳ ಹೆಸರುಗಳು ಕೇಳಿಬರುತ್ತಿವೆ (Karnataka Politics)ಎಂಬ ಸುದ್ದಿ ಕೇಳಿಬರುತ್ತಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ (Karnataka Politics)ಸಿಎಂ ಸಿದ್ದರಾಮಯ್ಯನವರ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಯಾಗಿದೆ. ಸಿಎಂ ಪರ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯನವರ ವಿರುದ್ದದ ಪ್ರಾಸಿಕ್ಯೂಷನ್ ವಿರುದ್ದ ಹೈಕಮಾಂಡ್ ಸಹ (Karnataka Politics) ಸಿದ್ದು ಬೆನ್ನಿಗೆ ನಿಂತಿದೆ. ಈ ನಡುವೆ ದೆಹಲಿಯಲ್ಲಿ ಕಾಂಗ್ರೇಸ್ ಹೈಕಮಾಂಡ್ ರಹಸ್ಯ ಸಭೆಯನ್ನು ನಡೆಸಿದೆ ಎನ್ನಲಾಗಿದೆ. ಒಂದು ವೇಳೆ ಸಿಎಂ ಸಿದ್ದರಾಮಯ್ಯ ರಾಜಿನಾಮೆ ನೀಡಿದರೇ ಯಾರನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಯಾರನ್ನು (Karnataka Politics)ಆಯ್ಕೆ ಮಾಡಬೇಕೆಂಬ ಚರ್ಚೆ ನಡೆದಿದೆ ಎನ್ನಲಾಗಿದೆ. ಜೊತೆಗೆ ಸಿಎಂ ವಿರುದ್ದ FIR ದಾಖಲಾದರೇ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂದು ಕಾನೂನು ತಜ್ಞರಿಂದ ಸಲಹೆ ಸಹ (Karnataka Politics)ಪಡೆಯಲಾಗುತ್ತಿದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿದೆ.
ಸದ್ಯ (Karnataka Politics)ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ಅಥವಾ ಕೊಡಬೇಕಾಗುತ್ತಾ ಎಂಬುದು ಬಹುತೇಕರ ಅನುಮಾನ ಹಾಗೂ ಪ್ರಶ್ನೆಯಾಗಿದೆ. ಈ ಸಂಬಂಧ ಕೈ ಹೈಕಮಾಂಡ್ ರಹಸ್ಯ ಸಭೆ ನಡೆಸುತ್ತಿದೆ. ಈ ಸಭೆಯಲ್ಲಿ ಸಿಎಂ ರಾಜಿನಾಮೆ ಕೊಟ್ರೆ ಯಾರನ್ನು ಸಿಎಂ ಮಾಡಬೇಕೆಂಬ ಚರ್ಚೆ ನಡೆದಿದೆಯಂತೆ. (Karnataka Politics)ಸಿಎಂ ಸಿದ್ದರಾಮಯ್ಯ ರಾಜಿನಾಮೆ ಕೊಟ್ರೆ ಸಿಎಂ ಆಗಿ ಯಾರನ್ನು ಮಾಡಬೇಕು ಎಂಬ ಪ್ರಶ್ನೆ ಉದ್ಬವಿಸಿದೆ. (Karnataka Politics)ಈ ಸಂಬಂಧ ಐವರು ಮಂದಿಯ ಹೆಸರುಗಳು ಕೇಳಿಬರುತ್ತಿವೆ ಎನ್ನಲಾಗಿದೆ. ಈ ಪೈಕಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಕೆ.ಜೆ.ಜಾರ್ಜ್, ಸತೀಶ್ ಜಾರಕೀಹೊಳಿ, ಜಿ.ಪರಮೇಶ್ವರ್ ಸೇರಿದಂತೆ ಮತ್ತೊಬ್ಬರ ಹೆಸರು ಕೇಳಿಬರುತ್ತಿದೆಯಂತೆ.
ಇನ್ನೂ ಈಗಾಗಲೇ ಡಿ.ಕೆ.ಶಿವಕುಮಾರ್ (Karnataka Politics)ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆದರೆ ಸಿದ್ದರಾಮಯ್ಯನವರಿಗೆ ಕೆಟ್ಟ ಹೆಸರು ತಂದು ಸಿಎಂ ಕುರ್ಚಿ ಏರುವ ಮನಸ್ಥಿತಿ ಅವರಿಗಿಲ್ಲ ಎನ್ನಲಾಗಿದೆ. ಆದರೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ತರುವಲ್ಲಿ ಡಿಕೆಶಿ ತುಂಬಾನೆ ಕಷ್ಟಪಟ್ಟಿದ್ದು, ಅವರ ಹೆಸರು ಕೇಳಿಬರುತ್ತಿದೆ. ಜೊತೆಗೆ ಕಾಂಗ್ರೇಸ್ ವರಿಷ್ಟೆ(Karnataka Politics) ಸೋನಿಯಾ ಗಾಂಧಿಯವರ ಪರಮಾಪ್ತ ಕೆ.ಜೆ.ಜಾರ್ಜ್ ರವರ ಹೆಸರು ಸಹ ಕೇಳಿಬರುತ್ತಿದೆ. ಕೆ.ಜೆ.ಜಾರ್ಜ್ ಕ್ರಿಶ್ಚಿಯನ್ ಸಮುದಾಯದ ಪ್ರಬಲ ನಾಯಕ ಸಹ ಆಗಿದ್ದಾರೆ. ಇನ್ನೂ ವಾಲ್ಮೀಕಿ ಸಮುದಾಯದ ಮುಖಂಡ (Karnataka Politics)ಸತೀಶ್ ಜಾರಕಿಹೊಳಿ ಹೆಸರು ಸಹ ಕೇಳಿಬರುತ್ತಿದೆ. ಸಿಎಂ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರ್ತಿಸಿಕೊಂಡ ಸಚಿವ ಸಹ ಹೌದು. ದಲಿತ ಸಿಎಂ ಎಂಬ ಕೂಗು ಕೇಳಿಬಂದ ಸಮಯದಲ್ಲಿ ಸತೀಶ್ ಜಾರಕೀಹೊಳಿ ಹೆಸರು ಸಹ ಕೇಳಿಬಂದಿತ್ತು. (Karnataka Politics) ಇದರ ಜೊತೆಗೆ ಸಿದ್ದರಾಮಯ್ಯ ಸೂಚಿಸಿದ ವ್ಯಕ್ತಿಯನ್ನು ಸಿಎಂ ಮಾಡುವ ಸಾಧ್ಯತೆ ಸಹ ತುಂಬಾನೆ ಇದೆ ಎನ್ನಲಾಗುತ್ತಿದೆ. ಇವರ ಜೊತೆಗೆ ಮತ್ತಿಬ್ಬರು ಪ್ರಭಾವಿಗಳ ಹೆಸರುಗಳು ಸಹ ಕೇಳಿಬರುತ್ತಿದ್ದು, ಯಾರೂ ಊಹಿಸದ ವ್ಯಕ್ತಿ ಸಿಎಂ ಆದರೂ ಆಶ್ಚರ್ಯಪಡಬೇಕಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.