Honey Trap – ಯುವಕರೇ ಈಕೆಯ ಟಾರ್ಗೆಟ್, ಮಿಸ್ ಕಾಲ್ ಕೊಡ್ತಾಳೆ, ಯುವಕರನ್ನು ಪಟಾಯಿಸುತ್ತಾಳೆ, ಬಳಿಕ ಅವರನ್ನು ಹನಿಟ್ಯ್ರಾಪ್ ಮಾಡಿ ಅವರಿಗೆ ವಂಚನೆ ಮಾಡುತ್ತಾಳೆ. ಈ ಗ್ಯಾಂಗ್ ಅನ್ನು ಬೆಂಗಳೂರಿನ ಸಂಪಿಗೆ ಹಳ್ಳಿ ಪೊಲೀಸರು (Honey Trap) ಬಂಧಿಸಿದ್ದಾರೆ. ಐಷಾರಾಮಿ ಜೀವನ ನಡೆಸುವ ಸಲುವಾಗಿ ಈ ಗ್ಯಾಂಗ್ ಯುವಕರನ್ನು ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿತ್ತು. ಈ ಸಂಬಂಧ ನಜ್ಮಾ ಕೌಸರ್, ಮಹಮ್ಮದ್ ಆಶಿಕ್, ಖಲೀಲ್ (Honey Trap) ಎಂಬುವವರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಯುವಕರನ್ನು ಗುರಿಯಾಗಿಸಿಕೊಂಡ ನಜ್ಮಾ ಕೌಸರ್ ಯುವಕರ ನಂಬರ್ ಸಂಗ್ರಹಿಸಿ ಮಿಸ್ ಕಾಲ್ ಕೊಡುತ್ತಿದ್ದಳಂತೆ. ಬಳಿಕ ಅವರು ಕರೆ ಮಾಡಿದಾಗ ನಯವಾಗಿ ಮಾತನಾಡಿ (Honey Trap) ಅವರೊಂದಿಗೆ ಸ್ನೇಹ ಬೆಳೆಸುತ್ತಿದ್ದಳಂತೆ. ಅದರಲ್ಲೂ ಪರಿಚಯವಾದ ಯುವಕರು ಬೆಂಗಳೂರಿನವರು ಎಂದು ಗೊತ್ತಾಗುತ್ತಿದ್ದಂತೆ ತುಂಬಾ ಸಲುಗೆಯಿಂದ ಅವರೊಂದಿಗೆ ಮಾತನಾಡುತ್ತಿದ್ದಳಂತೆ. ಮೊದ ಮೊದಲಿಗೆ ನಜ್ಮಾ ತನ್ನ ಕಷ್ಟಗಳನ್ನು ಹೇಳಿಕೊಂಡು ಯುವಕರಿಂದ ಹಣ ಪಡೆಯುತ್ತಿದ್ದಳಂತೆ. (Honey Trap) ಬಳಿಕ ಅದನ್ನು ವಾಪಸ್ ನೀಡುತ್ತಿದ್ದಳಂತೆ. ಈ ರೀತಿಯಾಗಿ ಯುವಕರಿಗೆ ನಂಬಿಕೆ ತರಿಸುತ್ತಿದ್ದಳು ಎನ್ನಲಾಗಿದೆ. ಬಳಿಕ ಯುವಕರನ್ನು ಖೆಡ್ಡಾಗೆ ಕೆಡವಲು ಪ್ಲಾನ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನೂ ಪರಿಚಯವಾದ (Honey Trap) ಯುವಕರೊಂದಿಗೆ ರೊಮ್ಯಾಂಟಿಕ್ ಆಗಿ ಮಾತನಾಡುತ್ತಾ, ಅವರು ಕಾಮ ಪ್ರಚೋದನೆಗೆ ಒಳಗಾಗುವಂತೆ ಮಾಡುತ್ತಿದ್ದಳು ಈ ನಜ್ಮಾ, ಮನೆಯಲ್ಲಿ ಯಾರೂ ಇಲ್ಲ, ಏಕಾಂತವಾಗಿ ಕಾಲ ಕಳೆಯೋಣ ಬಾ ಎಂದು ಹೇಳುತ್ತಿದ್ದಳು. ಅದನ್ನು ನಂಬಿದ ಯುವಕರು ಆಕೆಯ ಮನೆಗೆ ಹೋಗುತ್ತಿದ್ದರು. ಸೀದಾ ಮನೆಯ ಬೆಡ್ ರೂಂ ಗೆ (Honey Trap) ಅವರನ್ನು ಕರೆದುಕೊಂಡು ಹೋಗುತ್ತಿದ್ದಳು. ಬೆಡ್ ರೂಂಗೆ ಹೋಗುತ್ತಿದ್ದಂತೆ ನಜ್ಮಾ ಗ್ಯಾಂಗ್ ಎಂಟ್ರಿಯಾಗುತ್ತಿತ್ತು. ಯಾರೋ ನೀನು, (Honey Trap) ರೇಪ್ ಮಾಡೋಕೆ ಬಂದಿದ್ದೀಯಾ ಎಂದು ಅವಾಜ್ ಹಾಕಿ ಯುವಕರಿಗೆ ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. (Honey Trap) ಹಣ ನೀಡದೇ ಇದ್ದರೇ ರೇಪ್ ಕೇಸ್ ಹಾಕುತ್ತೇವೆ ಎಂದು ಧಮ್ಕಿ ಹಾಕುತ್ತಿದ್ದರಂತೆ.
ಇನ್ನೂ ಇದೇ ಮಾದರಿಯಲ್ಲಿ ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಯುವಕನೋರ್ವನಿಗೆ ಇದೇ ಗ್ಯಾಂಗ್ (Honey Trap) ವಂಚನೆ ಮಾಡಿತ್ತು. ಆದರೆ ಸಂತ್ರಸ್ತ ಯುವಕ ಸಂಪಿಗೆ ಹಳ್ಳಿ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದ. ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. (Honey Trap) ಬಳಿಕ ನಜ್ಮಾ ಅಂಡ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.