Local News: ವರ್ಗಾವಣೆಗೊಂಡ ಅಧಿಕಾರಿಗೆ ಆತ್ಮೀಯ ಬೀಳ್ಕೊಡುಗೆ…!

Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಹಾಗೂ ಪ್ರಸ್ತುತ ಶಿಕ್ಷಣ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್ ಬಾಗೇಪಲ್ಲಿಗೆ ವರ್ಗಾವಣೆಯಾಗಿದ್ದು, ಇಂದು ಗುಡಿಬಂಡೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಅವರಿಗೆ ಆತ್ಮೀಯವಾಗಿ ಬೀಳ್ಕೊಡುಗೆ (Local News) ನೀಡಲಾಯಿತು. ತಾಲ್ಲೂಕಿನ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳು , BRC, CRP ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ವೃಂದಗಳ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಂದ್ರಶೇಖರ್ ರವರಿಗೆ ಶುಭಾಶಯ ತಿಳಿಸಿ ಸನ್ಮಾನಿಸಿದರು.

ECO send off programme 1
ಈ ಕಾರ್ಯಕ್ರಮದಲ್ಲಿ (Local News) ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ ಚಂದ್ರಶೇಖರ್ ರವರ ಕಾರ್ಯವೈಖರಿ, ಶಿಕ್ಷಕರೊಂದಿಗಿನ ಒಡನಾಟ ಹಾಗೂ ದಕ್ಷತೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ತಾಲ್ಲೂಕಿನ ಎಲ್ಲಾ ಶಿಕ್ಷಕ ಹಾಗೂ ಅಧಿಕಾರಿಗಳದಿಗೆ ಸಮನ್ವಯದಿಂದ ಮನಗೆದ್ದ ಶ್ರೀಯುತರ ಮುಂದಿನ ಔದ್ಯೋಗಿಕ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು. ಬಳಿಕ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ ಮಾತನಾಡಿ. ತಮ್ಮ ಸೌಜನ್ಯಯುತವಾದ ನಡೆಯಿಂದ ಶ್ರೀಯುತರು ನಿಜಕ್ಕೂ ಮನ ಗೆದ್ದಿದ್ದಾರೆ. ಅದಕ್ಕೆ ಇಂದಿನ ಕಾರ್ಯಕ್ರಮದಲ್ಲಿ ಸೇರಿರುವ ಅವರ ಸಹೋದ್ಯೋಗಿಗಳ ಹಾಜರಿಯೇ ಸಾಕ್ಷಿ ಎಂದರು.

ECO send off programme 2
ನಂತರ ವರ್ಗಾವಣೆಗೊಂಡಿರುವ (Local News) ಚಂದ್ರಶೇಖರ್ ಗುಡಿಬಂಡೆ ಶಿಕ್ಷಣ ಇಲಾಖೆಯೊಂದಿಗಿನ ತಮ್ಮ ಆರು ವರ್ಷಗಳ ಅನುಭವ ಸಂಬಂಧಗಳ ಕುರಿತು ತಿಳಿಸಿದರು. ಈ ವೇಳೆ (Local News) ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ.ಅಧ್ಯಕ್ಷ ಬಾಲಾಜಿ, ಪ್ರಧಾನ ಕಾರ್ಯದರ್ಶಿ ವಿ ಶ್ರೀರಾಮಪ್ಪ, ಉಪಾಧ್ಯಕ್ಷ ಶ್ರೀರಾಮರೆಡ್ಡಿ, ಖಜಾಂಚಿ ಸಿ ಆರ್ ಶ್ವೇತ, ಗೌರವಾಧ್ಯಕ್ಷ ವಿ ಆದಿನಾರಾಯಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸುಮಿತ್ರ, ರಾಜಪ್ಪ , ಎಸ್ಸಿ ಎಸ್ಟಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಆಂಜನೇಯಲು, ಇಸಿಓ ನಂಜುಂಡಪ್ಪ ಸೇರಿದಂತೆ ಹಲವರಿದ್ದರು.

Leave a Comment

Your email address will not be published. Required fields are marked *

Scroll to Top