ಇಂದಿನ ಕಾಲದಲ್ಲಿ ಪ್ರೀತಿಸಿದ ಯುವಕ-ಯುವತಿಯರು ಕ್ಷಣದಲ್ಲೇ ಬೇರೆಯಾಗುತ್ತಿರುತ್ತಾರೆ. ಹಣ ಸೇರಿದಂತೆ ಹಲವಾರು ಕಾರಣಗಳಿಂದ ವರ್ಷಗಳಿಂದ ಪ್ರೀತಿಸಿದ್ದರೂ ಬ್ರೇಕಪ್ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಅಂತಹ ಪ್ರಕರಣಗಳು ಪೊಲೀಸ್ ಠಾಣೆವರೆಗೂ ಹೋಗುತ್ತಿರುತ್ತವೆ. ಇದೀಗ ಅಂತಹುದೇ ಪ್ರಕರಣವೊಂದು ನಡೆದಿದೆ. ಮಹಿಳೆಯೊಬ್ಬರಿಗೆ ಭ್ರೂಣ ಹತ್ಯೆ ಮಾಡಿಸಿದ ಪ್ರಿಯಕರ (Love Dhoka) ಪರಾರಿಯಾಗಿದ್ದಾನೆ ಎಂದು ಆತನ ವಿರುದ್ದ ಕ್ರಮ ತೆಗೆದುಕೊಳ್ಳದ ಪೊಲಿಸರ ವಿರುದ್ದವೇ ಮಹಿಳೆ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಈ ಘಟನೆ ರಾಮನಗರದಲ್ಲಿ ನಡೆದಿದೆ ಎನ್ನಲಾಗಿದೆ. ದಯಾನಂದ (24) ಎಂಬ ಯುವಕನ ವಿರುದ್ದ ಈ (Love Dhoka) ಆರೋಪ ಕೇಳಿಬಂದಿದೆ. ಪ್ರಿಯಕರ ತನಗೆ ಭ್ರೂಣ ಹತ್ಯೆ (Love Dhoka) ಮಾಡಿಸಿದ್ದಾನೆ. ಆತನ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ದೂರು ನೀಡಿದರು ಕ್ರಮ ತೆಗೆದುಕೊಂಡಿಲ್ಲ. ಪ್ರಿಯಕರ ಹಾಗೂ ಪೊಲೀಸರಿಂದ ತನಗೆ (Love Dhoka) ಅನ್ಯಾಯವಾಗಿದೆ ಎಂದು ಮಾಗಡಿ ಮೂಲದ ಮಹಿಳೆಯಿಂದ ಪ್ರಧಾನಿ ಮೋದಿಗೆ ಪತ್ರ ಸಹ ಬರೆಯಲಾಗಿದೆ. ಒಂದು ವೇಳೆ ತನಗೆ ನ್ಯಾಯ ಸಿಗದೇ ಇದ್ದರೇ ಎಸ್.ಪಿ. ಕಚೇರಿ ಎದುರಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ಸಹ ನೀಡಿದ್ದಾಳೆ ಎಂದು ತಿಳಿದುಬಂದಿದೆ.
ತನ್ನ ಪ್ರಿಯಕರ ಭ್ರೂಣ ಹತ್ಯೆ (Love Dhoka) ಮಾಡಿಸಿದ್ದಾನೆ, ಅವನ ವಿರುದ್ದ ರಾಮನಗರ ಮಹಿಳಾ ಠಾಣೆ ಪೊಲೀಸರು ದೂರು ತೆಗೆದುಕೊಂಡಿಲ್ಲ. ಈ ಮಧ್ಯೆ ದಯಾನಂದನ ಗೆಳೆಯ ತಾನೂ ದೂರು ಕೊಡಿಸುತ್ತೇನೆ ಎಂದು ನನ್ನಿಂದ 1.40 ಲಕ್ಷ ಲಂಚ ಪಡೆದಿದ್ದಾನೆ. ಲಂಚ ನೀಡಿದರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾಳೆ. ಕಳೆದ ನಾಲ್ಕು ತಿಂಗಳುಗಳಿಂದ ಪೊಲೀಸ್ ಠಾಣೆಗೆ ಅಲೆದು ಸುಸ್ತಾಗಿದ್ದೇನೆ. ನ್ಯಾಯ ಸಿಗದೇ ಇದ್ದರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮೋದಿಯವರಿಗೆ ಪತ್ರ ಬರೆದಿದ್ದಾಳೆ.
ಸಂತ್ರಸ್ತೆ ಮಹಿಳೆ ಕಳೆದ 5 ವರ್ಷಗಳ ಹಿಂದೆ (Love Dhoka) ಮದುವೆಯಾಗಿದ್ದರು. ಆದರೆ ಈ ಮದುವೆಗೆ ಆಕೆಗೆ ಇಷ್ಟವಿಲ್ಲದ ಕಾರಣ ಪತಿಯಿಂದ ಬೇರೆಯಾಗಿದ್ದರಂತೆ. ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ದಯಾನಂದ್ ಎಂಬಾತ ಆಕೆಗೆ ಪರಿಚಯವಾಗಿ, ಆಕೆಯನ್ನು ಲವ್ ಮಾಡುತ್ತಿರುವುದಾಗಿ, ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಇದರಿಂದಾಗಿ ಆಕೆ ಗರ್ಭಿಣಿಯಾಗಿದ್ದಾಳೆ, ಬಳಿಕೆ ಆಕೆಗೆ ಗರ್ಭಪಾತ ಮಾಡಿಸಿ ಎಸ್ಕೇಪ್ (Love Dhoka) ಆಗಿದ್ದಾನೆ. ಬಳಿಕ ಆತ ಸಂಪರ್ಕಕ್ಕೆ ಸಿಗಲಿಲ್ಲವಂತೆ. ತನಗಾದ ಅನ್ಯಾಯಕ್ಕಿಂತ ಮಗುವನ್ನು ಕೊಲೆ ಮಾಡಿದ ಆರೋಪದ ಮೇಲೆ ಆತನಿಗೆ ಶಿಕ್ಷೆಯಾಗಬೇಕು, ಆತನಿಂದ ವಂಚನೆಯಾಗಿರುವ ನನಗೆ ನ್ಯಾಯ ಬೇಕು ಎಂದು ಸಂತ್ರಸ್ತ ಮಹಿಳೆ (Love Dhoka) ಒತ್ತಾಯಿಸಿದ್ದಾರೆ.