Crime News: ಹಂಪಸಂದ್ರ ಶೂಟೌಟ್ ಪ್ರಕರಣ, ಮಾನಸಿಕ ಖಿನ್ನತೆಯಿಂದ ಎರಡೂ ಕೊಲೆ ಮಾಡಿದ್ನಾ ಆರೋಪಿ….!

ನಿನ್ನೆ (ಜು.24) ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಶೂಟೌಟ್ ಡಬಲ್ (Crime News) ಮರ್ಡರ್ ಆಗಿತ್ತು. ನಜೀರ್ ಮತ್ತು ಬಾಬು ಸಾಬಿ ಜು.24 ರಂದು ಬೆಳಿಗ್ಗೆ ನಮಾಜ್ ಮಾಡಲು ಮಸೀದಿಗೆ ಹೋಗುತ್ತಿದ್ದಾಗ ಬಾಬು ಸಾಬಿ ಅವರ ತಮ್ಮ ಬಶೀರ್ ಅಹಮದ್ (66) ಗನ್ ನಲ್ಲಿ ಶೂಟ್ (Crime News) ಮಾಡಿದ್ದ. ಇದೀಗ ಈ ಪ್ರಕರಣದ ಸಂಬಂಧ ಆರೋಪಿ ಬಶೀರ್ ಅಹ್ಮದ್ ಕೊಲೆಗೂ ಮುನ್ನಾ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾನೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಗುಡಿಬಂಡೆಯಲ್ಲಿ ಶೂಟೌಟ್, ಓರ್ವ ಸಾವು, ಚಿಕ್ಕಪ್ಪನ ಮೇಲೆ ಗುಂಡು ಹಾರಿಸಿದ ಆರೋಪಿ…!

ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಜು.24 ಬೆಳ್ಳಂಬೆಳಗ್ಗೆ ಶೂಟೌಟ್ (Crime News)  ನಡೆದಿತ್ತು. ಈ ವೇಳೆ ನಜೀರ್‍ ಸಾಬ್ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಯಲ್ಲಿ ನಜೀರ್ ಸಾಬ್ ಸ್ಥಳದಲ್ಲೇ ಮೃತಪಟ್ಟಿರೆ ಅಣ್ಣ ಮಹಬೂಬ್ ಸಾಬ್ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಘಟನೆಯ ನಂತರ ಪಕ್ಕದ ಬಾಗೇಪಲ್ಲಿ ಪಟ್ಟಣದಲ್ಲಿ ವಾಸವಿದ್ದ ಹೆಂಡತಿ ಮನೆಗೆ ಹೋಗಿ ಬಾಗಿಲು ತಟ್ಟಿದ್ದಾನೆ. ಅಷ್ಟರಲ್ಲಿ ಅಲರ್ಟ್ ಆದ ಪೊಲೀಸರು ಆರೋಪಿ ಬಷೀರ್ ನನ್ನ ವಶಕ್ಕೆ ಪಡೆದು ಬಂಧಿಸಿದ್ದರು. ಇನ್ನೂ ಕೊಲೆ (Crime News) ಮಾಡುವುದಕ್ಕೂ ಮುನ್ನಾ ಆರೋಪಿ ಯುಟ್ಯೂಬ್ ನಲ್ಲಿ ಮಾನಸಿಕ ವೇದನೆ ಎಂಬ ಟೈಟಲ್ ನಡಿ ಎರಡು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾನೆ. ಈ ವಿಡಿಯೋದಲ್ಲಿ ತನ್ನ ನೋವನ್ನು ಹಂಚಿಕೊಂಡಿದ್ದಾನೆ.

shootout Gudibande

ಈ ವಿಡಿಯೋದಲ್ಲಿ ಆರೋಪಿ ಬಶೀರ್‍  ತನಗಾದ ಅನ್ಯಾಯವನ್ನು ಹೇಳಿಕೊಂಡಿರುವ ಆರೋಪಿ ಬಷೀರ್ ಅಹ್ಮದ್ ಅಣ್ಣ, ಅಣ್ಣನ ಮಕ್ಕಳು.  ಪತ್ನಿ ಹಾಗೂ ಮಕ್ಕಳು ತನಗೆ ದ್ರೋಹ ಬಗೆದಿದ್ದಾರೆ ಅಂತ ಹೇಳಿದ್ದಾರೆ. ಈ ಹಿಂದೆ ಆಸ್ತಿ ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನನಗೆ ಯಾರೂ ಸಹಾಯ ಮಾಡಲಿಲ್ಲ. ನನಗೆ ಗೊತ್ತಿಲ್ಲದೆ ನನ್ನ ತಾಯಿಯಿಂದ ನನ್ನ ಅಣ್ಣ ನಜೀರ್ ಸಾಬ್ ಎಲ್ಲಾ ಆಸ್ತಿ ಬರೆಸಿಕೊಂಡರು. ಒಂದು ಎಕರೆ 37 ಗುಂಟೆ ಜಮೀನು ಮನೆ ಸೇರಿದಂತೆ ಇರೋ ಮನೆಯನ್ನೂ ಬರೆಸಿಕೊಂಡಿದ್ದಾರೆ. ನನ್ನ ಹೆಂಡತಿಗೂ ತಲೆ ಕೆಡಿಸಿ ನನ್ನ ವಿರುದ್ಧ ಎತ್ತಿ ಕಟ್ಟಿದರು. ಇದರಿಂದ ನನ್ನ ಮಗ ನೂ ಹಲ್ಲೆ ಮಾಡಿ ಮನೆ ಬರೆದುಕೊಂಡ ಅಂತ ದೌರ್ಜನ್ಯ ಮಾಡಿದ. ನಾನು ನನ್ನ ಕುಟುಂಬದೊಂದಿಗೆ ತುಂಬಾ ಚೆನ್ನಾಗಿ ಬಾಳಬೇಕು ಎಂದು ದುಬೈ ಗೆ ಹೋಗಿದ್ದೆ .ದುಬೈ ನಲ್ಲಿ ದುಡಿದ ಹಣವನ್ನಲ್ಲೆ ನನ್ನ ಹೆಂಡತಿಗೆ ಕಳಿಸುತ್ತಿದ್ದೆ. ನನಗೆ ಅಂತ ಬ್ಯಾಂಕ್ ಅಕೌಂಟ್ ಕೂಡ ಇಟ್ಟುಕೊಂಡಿರಲಿಲ್ಲ. ನನ್ನ ಹೆಂಡತಿ ಅಕೌಂಟ್ ಗೆ ದುಡಿದ ಎಲ್ಲಾ ಹಣ ಹಾಕುತ್ತಿದ್ದೆ. ಎಲ್ಲರೂ ತನಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

https://youtu.be/0QXBIZVwwG8?si=GKpCSR547bHBV3gN

ಇನ್ನೂ ಘಟನಾ (Crime News) ಸ್ಥಳಕ್ಕೆ ನೆನ್ನೆ ಚಿಕ್ಕಬಳ್ಳಾಪುರ ಜಿಲ್ಲಾ ಎಸ್ಪಿ ಕುಶಲ್ ಚೌಕ್ಸೆ ಹಾಗೂ ಗುಡಿಬಂಡೆ ಠಾಣೆ ಪೊಲೀಸರು ಬೇಟಿ ಪರಿಶೀಲನೆ ನಡೆಸಿದ್ದರು ಘಟನೆಗೂ ಮುನ್ನ ಆರೋಪಿ ಬಷೀರ್ ಹರಿಬಿಟ್ಟಿರುವ ಎರಡು ವೀಡಿಯೋಗಳು ಇದೀಗ ವೈರಲ್ ಆಗಿದೆ.

Leave a Comment

Your email address will not be published. Required fields are marked *

Scroll to Top