HomeStateCrime News: ಬೆಳ್ಳಂಬೆಳಗ್ಗೆ ಗುಡಿಬಂಡೆಯಲ್ಲಿ ಶೂಟೌಟ್, ಓರ್ವ ಸಾವು, ಚಿಕ್ಕಪ್ಪನ ಮೇಲೆ ಗುಂಡು ಹಾರಿಸಿದ ಆರೋಪಿ...!

Crime News: ಬೆಳ್ಳಂಬೆಳಗ್ಗೆ ಗುಡಿಬಂಡೆಯಲ್ಲಿ ಶೂಟೌಟ್, ಓರ್ವ ಸಾವು, ಚಿಕ್ಕಪ್ಪನ ಮೇಲೆ ಗುಂಡು ಹಾರಿಸಿದ ಆರೋಪಿ…!

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಶೂಟೌಟ್ (Crime News) ನಡೆದಿದೆ. ಈ ವೇಳೆ ಓರ್ವ ಮೃತಪಟ್ಟಿದ್ದು, ಇನ್ನೊಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗ್ರಾಮದ ನಿವಾಸಿ ನಜೀರ್ ಹಾಗೂ ಅವರ ತಂದೆ ಬಾಬು ಸಾಬಿ ರವರುಗಳ ಮೇಲೆ ಮಚ್ಚು ಹಾಗೂ ಗನ್ ನಿಂದ ಧಾಳಿ ನಡೆಸಲಾಗಿದೆ.

ಮೃತ ದುರ್ದೈವಿ ಯನ್ನು ನಜೀರ್ ಅಹ್ಮದ್ (60) ಎಂದು ಗುರ್ತಿಸಲಾಗಿದೆ. ನಜೀರ್ ಮತ್ತು ಬಾಬು ಸಾಬಿ ಎಂದಿನಂತೆ ಬೆಳಿಗ್ಗೆ ನಮಾಜ್ ಮಾಡಲು ಮಸೀದಿಗೆ ಹೋಗುತ್ತಿದ್ದಾಗ ಬಾಬು ಸಾಬಿ ಅವರ ತಮ್ಮ ಬಶೀರ್ ಅಹಮದ್ (66) ಗನ್ ನಲ್ಲಿ ಶೂಟ್ (Crime News) ಮಾಡಿದ್ದಾನೆ ಎನ್ನಲಾಗಿದೆ. ಇದರಿಂದ ನಜೀರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಾಬು ಸಾಬಿ ಮೇಲೆ ಲಾಂಗ್ ಗಳಿಂದ ಹಲ್ಲೆ (Crime News) ಮಾಡಿರುವ ಕಾರಣ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ್ದು, ಅಲ್ಲಿ ಹೆಚ್ಚಿನ ಚಿಕಿತ್ಸೆ ಸಿಗದ ಕಾರಣ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳು ಬಾಬು ಸಾಬಿ ತೀರ್ವವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಆರೋಪಿ ಸೌದಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಇತ್ತೀಚೆಗಷ್ಟೆ ಗುಡಿಬಂಡೆಗೆ ಬಂದಿದ್ದ. ಇನ್ನೂ ಬಶೀರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಸ್ಥಳಕ್ಕೆ ಚಿಕ್ಕಬಳ್ಳಾಪುರ ಹಾಗೂ ಗುಡಿಬಂಡೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular