ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೆಟೋಳಿ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಗುಂಡಿಕ್ಕಿ ಕೊಲೆ (Crime News) ಮಾಡಿದ ಘಟನೆಯೊಂದು ನಡೆದಿದೆ. ಶಿಲ್ಪಾ ಸೀತಮ್ಮ (40) ಮೃತ ದುರ್ದೈವಿ, ಪತಿ ನಾಯಕಂಡ ಬೋಪಣ್ಣ (45) ಗುಂಡಿಕ್ಕಿ ಕೊಂದ ಆರೋಪಿ. ತನ್ನ ಪತ್ನಿ ಫೋನ್‌ನಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿದ್ದುದ್ದಕ್ಕೆ ಆಕ್ಷೇಪಿಸಿದ ನಂತರ ಇಬ್ಬರ ನಡುವೆ ಜಗಳವಾಗಿ ಪತಿ ಗುಂಡಿಕ್ಕಿ ಕೊಂದಿದ್ದಾನೆ (Crime News) ಎಂದು ತಿಳಿದುಬಂದಿದೆ.
ಸುಮಾರು 18 ವರ್ಷಗಳ ಹಿಂದೆ ಶಿಲ್ಪ ಹಾಗೂ ಬೋಪಣ್ಣ ಪ್ರೀತಿಸಿ ಮದುವೆಯಾಗಿದ್ದರು. ಈ ಜೋಡಿಗೆ ಇಬ್ಬರು ಮಕ್ಕಳು ಇದ್ದರು. ಆದರೆ ಕೆಲವೊಂದು ಕಾರಣಗಳಿಂದ ಇಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡು ಬೇರೆ ಬೇರೆಯಾಗಿದ್ದರು. ಆದರೂ ಸಹ ಒಂದೆ ಮನೆಯಲ್ಲಿದ್ದರು. ಆದರೆ ಪ್ರತ್ಯೆಕವಾಗಿ ಅಡುಗೆ ಮಾಡಿಕೊಳ್ಳುತ್ತಿದ್ದರಂತೆ. ಬಳಿಕ ಇಬ್ಬರೂ ವಿಚ್ಚೇದನಕ್ಕೆ ಅರ್ಜಿ ಕೂಡ ಹಾಕಿಕೊಂಡಿದ್ದರು ಎನ್ನಲಾಗಿದೆ. ಇನ್ನೂ ಕಳೆದ ಶುಕ್ರವಾರ ಮೃತ ಶಿಲ್ಪ ಬೇರೆಯೊಬ್ಬರೊಂದಿಗೆ ಮಾತನಾಡುತ್ತಿದ್ದಳಂತೆ. ಶನಿವಾರವೂ ಸಹ ಬೆಳಿಗಿನ ಜಾವ ಅದೇ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಳಂತೆ. ಈ ಸಮಯದಲ್ಲಿ ಅಡುಗೆ ಮನೆಗೆ ಹೋದ ಆರೋಪಿ (Crime News) ಬೋಪಣ್ಣ ಕೋವಿ ಸಮೇತ ಹೋಗಿ ಶಿಲ್ಪಾಳ ಎದೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಇನ್ನೂ ಪತ್ನಿಯನ್ನು ಕೊಲೆ (Crime News) ಮಾಡಿದ ಬಳಿಕ ಕೋವಿ ಸಮೇತ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಶರಣಾಗಿದ್ದಾನೆ.
ಇನ್ನೂ (Crime News) 18 ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಇಬ್ಬರು ಮದುವೆಯಾಗಿದ್ದರು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅಲ್ಲದೇ ಬೋಪಣ್ಣ ವಿರಾಜಪೇಟೆ ತಾಲ್ಲೂಕಿನ ಅರ್ಜಿ ಗ್ರಾಮದಲ್ಲಿ ಸರ್ವಿಸ್ ಸ್ಟೇಷನ್ ಹಾಗೂ ಕಾಫಿ ತೋಟದ ಮಾಲೀಕನಾಗಿದ್ದ. ಕಳೆದ ಕೆಲ ದಿನಗಳಿಂದ ಗಂಡ-ಹೆಂಡತಿ ನಡುವೆ ಪರಸ್ಪರ ಭಿನ್ನಾಭಿಪ್ರಾಯ ಉಂಟಾಗಿತ್ತು. ಪ್ರಥಮ ಪಿಯುಸಿ ಹಾಗೂ ಏಳನೇ ತರಗತಿ ಓದುವ ಇಬ್ಬರು ಹೆಣ್ಣು ಮಕ್ಕಳಿದ್ದು, ಇದೀಗ ಅಮ್ಮನ್ನು ಕಳೆದುಕೊಂಡ ಮಕ್ಕಳು ತಬ್ಬಲಿಗಳಾಗಿದ್ದಾರೆ.