ತಮ್ಮ 2 ವರ್ಷಗಳ ಪ್ರೀತಿ ಸಫಲಗೊಳ್ಳದ ಕಾರಣದಿಂದ ಇಬ್ಬರು ಪ್ರೇಮಿಗಳು ಕೃಷಿಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ. ಇಬ್ಬರು ಪ್ರೇಮಿಗಳು ವೇಲ್ ಕಟ್ಟಿಕೊಂಡು ಕೃಷಿಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಚಿಂತಾಮಣಿ (Chintamani news) ತಾಲೂಕಿನ ಮುದ್ದಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮೃತ ದುರ್ದೈವಿಗಳನ್ನು ಅನುಷಾ (19) ಹಾಗೂ ವೇಣು (19) ಎಂದು ಗುರ್ತಿಸಲಾಗಿದೆ.
ಮೃತ ಯುವತಿ ಅನುಷಾ ಕಾಚಹಳ್ಳಿ ಗ್ರಾಮದವಳು. ಮೃತ ಯುವಕ ವೇಣು ಕೋರ್ಲಪತಿ ಬಳಿಯ ಎಂ ಮುದ್ದಲಹಳ್ಳಿ ಗ್ರಾಮದವರು ಎನ್ನಲಾಗಿದೆ. ಈ ಇಬ್ಬರೂ 2 ವರ್ಷದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಅನುಷಾ ವಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಚಿಂತಾಮಣಿ (Chintamani news) ತಾಲೂಕಿನ ಎಂ ಮುದ್ದಲಹಳ್ಳಿ ಗ್ರಾಮದಲ್ಲಿರುವ ತಮ್ಮ ಅಜ್ಜಿಯ ಮನೆಗೆ ರಜಾ ದಿನಗಳಲ್ಲಿ ಬರುತ್ತಿದ್ದಳಂತೆ. ಈ ಸಮಯದಲ್ಲಿ ಅದೇ ಗ್ರಾಮದ ಬೋವಿ ಸಮುದಾಯದ ವೇಣು ಜೊತೆಗೆ ಪ್ರೀತಿಗೆ ಬಿದ್ದಿದ್ದಳು ಎನ್ನಲಾಗಿದೆ. ಈ ಸುದ್ದಿ ಅವರ ಪೋಷಕರಿಗೆ ಗೊತ್ತಾಗಿದೆ. ಬಳಿಕ ಅವರ ಪ್ರೀತಿಯನ್ನು ಒಪ್ಪದೆ ಅನುಷಾ ಪೋಷಕರು ಕಾಚಹಳ್ಳಿ ಗ್ರಾಮದ ಚೌಡರೆಡ್ಡಿ ಎಂಬ ಯುವಕನ ಜೊತೆಗೆ ಕೆಲವು ದಿನಗಳ ಹಿಂದೆಯಷ್ಟೆ ಮದುವೆ ಮಾಡಿಸಿದ್ದರು. ಮದುವೆಯಾದ (Chintamani news) ಬಳಿಕ ಅನುಷಾ ಗಂಡನ ಜೊತೆಗೆ ದಾಬಸ್ ಪೇಟೆಯಲ್ಲಿ ಸಂಸಾರ ನಡೆಸುತ್ತಿದ್ದಳು ಎನ್ನಲಾಗಿದೆ.
ಇನ್ನೂ ಆಷಾಡ ಮಾಸದ ಸಲುವಾಗಿ ಅನುಷಾಳನ್ನು ಆಕೆಯ ತವರು ಮನೆ ದೊಡ್ಡಪಲ್ಲಿಯಲ್ಲಿ ಬಿಟ್ಟಿದ್ದ. ಬಳಿಕ ಅನುಷಾ ಹಾಗೂ ವೇಣು ಮತ್ತೆ ದೂರವಾಣಿ ಮೂಲಕ ಮಾತನಾಡಿಕೊಂಡಿದ್ದಾರೆ. ಇನ್ನೂ ಗಂಡನಿಗೆ ಎಟಿಎಂ ಮಾಡಿಸಬೇಕು ಎಂದು ಹೋಗಿದ್ದ ಅನುಷಾ, (Chintamani news) ತನ್ನ ಪ್ರಿಯಕರ ವೇಣು ಜೊತೆಗೆ ಎಂ.ಮುದ್ದಲಹಳ್ಳಿ ಗ್ರಾಮದ ತೋಟಕ್ಕೆ ಹೋಗಿ ಮಾತುಕತೆ ನಡೆಸಿದ್ದಾರೆ. ಈ ಪ್ರಪಂಚದಲ್ಲಿ ಬದುಕಲು ನಮ್ಮನ್ನು ಬಿಡುವುದಿಲ್ಲ ಎಂದು ಚಲಪತಿ ಎಂಬುವವರ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಮೊಬೈಲ್ ಪೋನ್ ಹಾಗೂ ಇತರೆ ಕೆಲ ವಸ್ತುಗಳನ್ನು ದಡದಲ್ಲಿಟ್ಟು, ಇಬ್ಬರು ತಬ್ಬಿಕೊಂಡು ವೇಲ್ ನಲ್ಲಿ ಸುತ್ತಿಕೊಂಡು ಕೃಷಿ ಹೊಂಡಕ್ಕೆ ಹಾರಿದ್ದಾರೆ. ಬಳಿಕ ಅನುಷಾಗೆ ತನ್ನ ಗಂಡ ಪೋನ್ ಮಾಡಿದ್ದಾರೆ. ಎಷ್ಟು ಬಾರಿ ಪೋನ್ ಮಾಡಿದರೂ ಆಕೆ ಕರೆ ಸ್ವೀಕರಿಸದ ಕಾರಣ. ಗ್ರಾಮದಲ್ಲಿ ಹುಡುಕಾಟ ನಡೆಸಿ ಪೊಲೀಸರಿಗೆ ದೂರು ನೀಡಿದ್ದರು.
ಬಳಿಕ ಜು.13 ರ ಬೆಳಿಗ್ಗೆ ಚಲಪತಿ ರವರು ತೊಟಕ್ಕೆ ಬಂದ ವೇಳೆ ಮೊಬಯಲ್ ಹಾಗೂ ಇತರೆ ವಸ್ತುಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಇಬ್ಬರೂ ವೇಲ್ ಸುತ್ತಿಕೊಂಡ ಕೃಷಿಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವುದು ತಿಳಿದುಬಂದಿದೆ. ಇನ್ನೂ ಈ ಸಂಬಂಧ (Chintamani news) ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.