Friday, November 22, 2024

BSNL Plans: ಭರ್ಜರಿ ಪ್ಲಾನ್ ಬಿಡುಗಡೆ ಮಾಡಿದ ಬಿ.ಎಸ್.ಎನ್.ಎಲ್, ಜಿಯೋ, ಏರ್ಟೆಲ್ ಗೆ ಟಕ್ಕರ್?

ಇಂದಿನ ಮೊಬೈಲ್ ಯುಗದಲ್ಲಿ ಪ್ರತಿಯೊಬ್ಬರಿಗೂ ಮೊಬೈಲ್ ತುಂಬಾನೆ ಅತ್ಯವಶ್ಯಕವಾಗಿದೆ ಎಂದು ಹೇಳಬಹುದು. ವಿವಿಧ ವ್ಯವಹಾರಗಳಿಗೂ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಪಡೆಯೋದಕ್ಕೂ ಮೊಬೈಲ್ ಅವಶ್ಯಕವಾಗಿದೆ. ಮೊಬೈಲ್ ಬಳಸಲು ಸಿಮ್ ಸಹ ಅವಶ್ಯಕತೆಯಿದ್ದು, ಸದ್ಯ ಜಿಯೋ, ಏರ್ಟೆಲ್, ವೊಡಾಪೋನ್, ಐಡಿಯಾ ಕಂಪನಿಗಳು ತಮ್ಮ ಪ್ಲಾನ್ ಗಳ ಬೆಲೆಯನ್ನು ಏರಿಕೆ ಮಾಡಿದ್ದು, ಗ್ರಾಹಕರು ಬೇಸರಗೊಂಡಿದ್ದಾರೆ. ಇದೀಗ ಸಿಮ್ ಬಳಕೆದಾರರು BSNL ನತ್ತ ವಲಸೆ ಹೋಗುತ್ತಿದ್ದು, ಬಿ.ಎಸ್.ಎನ್.ಎಲ್. ಸಹ ಗ್ರಾಹಕರನ್ನು ಸೆಳೆಯಲು ಭರ್ಜರಿ ಪ್ಲಾನ್ ಗಳನ್ನು (BSNL Plans) ಬಿಡುಗಡೆ ಮಾಡಿದೆ .

BSNL plans update 1 1

ಸುಮಾರು ಎರಡು ವರ್ಷಗಳಿಂದ ಬಿ.ಎಸ್.ಎನ್.ಎಲ್ ಗ್ರಾಹಕರಿಲ್ಲದೇ ಬಹುತೇಕ ನಿಷ್ಕ್ರಿಯದ ಹಂತದಲ್ಲಿತ್ತು. ಇದೀಗ ಮತ್ತೆ ಬಿ.ಎಸ್.ಎನ್.ಎಲ್ ಫಾರ್ಮ್‌ಗೆ ಬರುತ್ತಿದೆ. ಸದ್ಯ ದೇಶದಾದ್ಯಂತ BSNL 3G ನೆಟ್ ವರ್ಕ್‌ನಲ್ಲಿ ಕೆಲಸ ಮಾಡುತ್ತಿದೆ. ಶೀಘ್ರದಲ್ಲೇ 4G ನೆಟ್ ವರ್ಕ್‌ಗೆ ಅಪ್ಡೇಟ್ ಆಗಲಿದೆ. ಸದ್ಯ ಜಿಯೋ, ಏರ್ಟೆಲ್, ವೊಡಾಪೋನ್, ಐಡಿಯಾ ಕಂಪನಿಗಳು ತಮ್ಮ ಪ್ಲಾನ್ ಗಳ ಬೆಲೆಯನ್ನು ಏರಿಕೆ ಮಾಡಿದೆ. ಇದರಿಂದಾಗಿ ಬಿ.ಎಸ್.ಎನ್.ಎಲ್ ಗೆ ಬೇರೆ ಬೇರೆ ಟೆಲಿಕಾಂ ಕಂಪನಿಗಳ ಗ್ರಾಹಕರು ಪೋರ್ಟ್ ಆಗಿ ವಲಸೆ ಬರುತ್ತಿದ್ದಾರೆ. ಜೊತೆಗೆ ಪ್ಲಾನ್ ಗಳ ಏರಿಕೆಯಿಂದಾಗಿ ಬಾಯ್ ಕಟ್ ಟ್ರೆಂಡ್ ಸಹ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಬಿ.ಎಸ್.ಎನ್.ಎಲ್ ಗೆ ಸಾಕಷ್ಟು ಗ್ರಾಹಕರು ವಲಸೆ (BSNL Plans) ಬರುತ್ತಿದ್ದಾರೆ ಎಂದು ಹೇಳಲಾಗಿದೆ.

ಇದೀಗ ಬಿ.ಎಸ್.ಎನ್.ಎಲ್. ಸಹ ಗ್ರಾಹಕರನ್ನು ಸೆಳೆಯಲು ಭರ್ಜರಿ ಪ್ಲಾನ್ ಗಳನ್ನು (BSNL Plans) ಬಿಡುಗಡೆ ಮಾಡಿದೆ. ತನ್ನ ಎಲ್ಲಾ ಪ್ರಿಪೈಡ್ ಪ್ಲಾನ್ ಗಳನ್ನು ಪರಿಷ್ಕರಿಸಿದೆ. ಈ ಪೈಕಿ 395 ಪ್ಲಾನ್ ಒಂದಾಗಿದೆ. 13 ತಿಂಗಳ ವ್ಯಾಲಿಡಿಟಿ ಇರುವಂತಹ ಈ ಪ್ಲಾನ್ ಬೆಲೆ ಕೇವಲ 2399 ಮಾತ್ರ. ತಿಂಗಳಿಗೆ 184 ರುಪಾಯಿ ಮಾತ್ರವಾಗಿದೆ. ಈ ಪ್ಲಾನ್ ನಲ್ಲಿ ಗ್ರಾಹಕರು ದಿನಕ್ಕೆ 2GB ಹೈಸ್ಪೀಡ್ ಡೆಟಾ ಪಡೆಯುತ್ತಾರೆ. ದಿನಕ್ಕೆ 100 SMS ಕಳುಹಿಸಬಹುದಾಗಿದೆ. ಇದರ ಜೊತೆಗೆ ಜಿಂಗ್ ಮ್ಯೂಸಿಕ್, ಹಾರ್ಡಿ ಗೇಮ್ಸ್ ಸೇರಿದಂತೆ ಕೆಲವೊಂದು ಹೆಚ್ಚುವರಿ ಉಚಿತ ಸೌಲಭ್ಯಗಳು ಸಿಗಲಿವೆ. ಇನ್ನೂ ಮತ್ತೊಂದು ಪ್ಲಾನ್ ಅನ್ನು (BSNL Plans) ಸಹ ಪರಿಚಯಿಸಿದೆ. ಈ ಪ್ಲಾನ್ ಒಟ್ಟು 365 ದಿನದ ಪ್ಲಾನ್ ವ್ಯಾಲಿಡಿಟಿಯನ್ನು ಒಳಗೊಂಡಿದೆ. ದೈನಂದಿನ ಡಾಟಾ ಮಿತಿ ಬದಲಿಗೆ ಒಟ್ಟಾರೆ 600GB ಡಾಟಾ ಈ ಪ್ಲಾನ್ ನಲ್ಲಿ ಲಭ್ಯವಿದೆ. ಈ ಪ್ಲಾನ್ ಬೆಲೆ 1999 ರೂಪಾಯಿ ಆಗಿದೆ.

BSNL plans update 0 1

ಇನ್ನೂ ಈ (BSNL Plans)  ಪ್ಲಾನ್ ಗಳ ಜೊತೆಗೆ ಮತಷ್ಟು ಪ್ಲಾನ್ ಗಳನ್ನು ಪರಿಚಯಿಸಿದೆ. 997, 599, 199 ಪ್ಲಾನ್ ಗಳನ್ನು ಪರಿಚಯಿಸಿದೆ. ಜಿಯೋ, ಏರ್ಟೆಲ್, ವಿಐ ಗೆ ಹೋಲಿಸಿದರೇ ಬಿ.ಎಸ್.ಎನ್.ಎಲ್. ಪ್ಲಾನ್ ಗಳು ತುಂಬಾ ಅಗ್ಗ ಎಂದು ಹೇಳಬಹುದಾಗಿದೆ. ಇದೀಗ ಬಿ.ಎಸ್.ಎನ್.ಎಲ್ ಗೆ ಹೇಗೆ ಪೊರ್ಟ್ ಆಗಬಹುದು ಎಂಬ ವಿಚಾರಕ್ಕೆ ಬಂದರೇ,  ಮೊದಲಿಗೆ ನಿಮ್ಮ ಮೊಬೈಲ್​ನಿಂದ ‘Port <10 ಅಂಕಿ ಮೊಬೈಲ್ ನಂಬರ್>’ 1900 ನಂಬರ್​ಗೆ ಎಸ್ಸೆಮ್ಮೆಸ್ ಕಳುಹಿಸಬೇಕು. (ಉದಾ: Port 9895600426). ಆಗ ಯುಪಿಸಿ ನಂಬರ್ ಸಿಗುತ್ತದೆ. ಈ ಕೋಡ್ 15 ದಿನ ವ್ಯಾಲಿಡಿಟಿ ಹೊಂದಿರುತ್ತದೆ. ಅಷ್ಟರೊಳಗೆ ನೀವು ಯಾವುದೇ ಬಿಎಸ್​ಎನ್​ಎಲ್ ಕಸ್ಟಮರ್ ಸರ್ವಿಸ್ ಸೆಂಟರ್ ಅಥವಾ ಅಧಿಕೃತ ಬಿಎಸ್​ಎನ್​ಎಲ್ ಫ್ರಾಂಚೈಸಿಗೆ ಹೋಗಿ ಬಿ.ಎಸ್.ಎನ್.ಎಲ್ ಸಿಮ್ ಪಡೆಯಬಹುದಾಗಿದೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!