Nepal Woman Throws Dog : ಆ ಮೂಕ ಜೀವಿಗೆ ಏನು ಗೊತ್ತು ಮನುಷ್ಯ ಇಷ್ಟು ಕ್ರೂರಿ ಅಂತ? ಸೇತಿ ನದಿಗೆ ಶ್ವಾನವನ್ನು ಎಸೆದ ಮಹಿಳೆ!

ಮನುಷ್ಯ ಎಷ್ಟೊಂದು ಕಲ್ಲು ಹೃದಯದವನಾಗಬಲ್ಲ ಎಂಬುದಕ್ಕೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ (Nepal Woman Throws Dog) ಒಂದು ವಿಡಿಯೋ (Viral Video Link Here) ಸಾಕ್ಷಿಯಾಗಿದೆ. ಪಾಪ, ಆ ಮೂಕ ಜೀವಿಗೆ ಏನು ಗೊತ್ತು ತನ್ನನ್ನು ನಂಬಿದವರೇ ಈ ಪರಿ ಕರುಣೆ ಇಲ್ಲದೆ ನಡೆದುಕೊಳ್ಳುತ್ತಾರೆ ಎಂದು? ಕಣ್ಣೀರು ತರಿಸುವ ಈ ಪ್ರಾಣಿ ಹಿಂಸೆಯ (Animal Cruelty) ಘಟನೆ ನಡೆದಿರುವುದು ನೆರೆಯ ನೇಪಾಳದಲ್ಲಿ.

Nepal woman throws dog into Seti River in viral animal cruelty incident

Nepal Woman Throws Dog – ನೇಪಾಳದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆ

ನೇಪಾಳದ ಬಜಾಂಗ್ (Bajhang District) ಜಿಲ್ಲೆಯಲ್ಲಿ ಸೇತಿ ನದಿಯ (Seti River) ಮೇಲಿರುವ ಸೇತುವೆಯ ಮೇಲಿಂದ ಮಹಿಳೆಯೊಬ್ಬಳು ಶ್ವಾನವನ್ನು ನಿರ್ದಯವಾಗಿ ನದಿಗೆ ಎಸೆಯುವ ವಿಡಿಯೋವೊಂದು ಅಂತರ್ಜಾಲದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಈ ಅಮಾನವೀಯ ಕೃತ್ಯವನ್ನು ನೋಡಿದ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮೂಕ ಪ್ರಾಣಿಯ ಜೀವ ತೆಗೆದ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

ಘಟನೆ ನಡೆದದ್ದು ಎಲ್ಲಿ ಮತ್ತು ಹೇಗೆ?

ವರದಿಗಳ ಪ್ರಕಾರ, ಈ ಘಟನೆ ಸೆಪ್ಟೆಂಬರ್ 2 ರಂದು ಬಜಾಂಗ್‌ನ ಜಯಪೃಥ್ವಿ ಮುನ್ಸಿಪಾಲಿಟಿಯ ಚೈನ್‌ಪುರ್ ಪ್ರದೇಶದಲ್ಲಿರುವ ಪಂಕೋಟಕ್ ಸೇತುವೆ ಬಳಿ ನಡೆದಿದೆ. ಈ ಸೇತುವೆ 10 ಮತ್ತು 11 ನೇ ವಾರ್ಡ್‌ಗಳ ಗಡಿಯಲ್ಲಿದೆ. ಜಾತ್ರೆಗೆಂದು ಹೋಗಿದ್ದ ಇದೇ ದಾರಿಯಲ್ಲಿ ಸಂಚರಿಸುತ್ತಿದ್ದ ನಬಿನ್ ಪಾಂಡೆ ಎಂಬುವವರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ಮೂಲಕ ಈ ಕ್ರೌರ್ಯ ಜಗತ್ತಿಗೆ ತಿಳಿದಿದೆ.

ವಿಡಿಯೋ ಸೆರೆಹಿಡಿದ ನಬಿನ್ ಪಾಂಡೆ ಹೇಳಿದ್ದೇನು?

ನಬಿನ್ ಪಾಂಡೆ ಅವರ ಪ್ರಕಾರ, ಮಹಿಳೆಯೊಬ್ಬಳು ನಾಯಿಯನ್ನು ಸೇತುವೆಯ ಬಳಿ ಕರೆತಂದು ದಿಢೀರನೆ ಸೇತಿ ನದಿಯ ರಭಸವಾದ ಹರಿವಿಗೆ ಎಸೆದಿದ್ದಾಳೆ. “ನಾನು ಎಷ್ಟೇ ತಡೆಯಲು ಪ್ರಯತ್ನಿಸಿದರೂ ಆಕೆ ನನ್ನ ಮಾತು ಕೇಳಲಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಪಾಂಡೆ ಅವರು ಪಶುವೈದ್ಯಕೀಯ ವಿಜ್ಞಾನ ಓದಿದ್ದು, ಬಾಲ್ಯದಿಂದಲೂ ನಾಯಿಗಳನ್ನು ಸಾಕಿದ ಅನುಭವ ಹೊಂದಿದ್ದಾರೆ. ನಾಯಿಯನ್ನು ನೋಡಿದಾಗ ಅದು ತುಂಬಾ ಶಾಂತವಾಗಿತ್ತು ಎನ್ನುತ್ತಾರೆ. ಆದರೆ ಆ ಮಹಿಳೆ, “ಈ ನಾಯಿ ಯಾರಿಗೋ ಕಚ್ಚಿದೆ” ಎಂಬ ಕುಂಟು ನೆಪ ಹೇಳಿ ಈ ಕೃತ್ಯ ಎಸಗಿದ್ದಾಳೆ. ಮಹಿಳೆಯ ಈ ಕಾರಣದ ಬಗ್ಗೆ ಪಾಂಡೆ ಅವರಿಗೆ ತೀವ್ರ ಅನುಮಾನವಿದೆ. Read this also : ಹಸುವಿನ ಕರುವಿಗೆ ಹಾಲೂಡಿಸಿ ತಾಯಿಯಾದ ಬೀದಿ ನಾಯಿ! ನೆಟ್ಟಿಗರ ಮನ ಗೆದ್ದ ಅಪರೂಪದ ಮಾತೃಪ್ರೇಮ…!

Nepal woman throws dog into Seti River in viral animal cruelty incident

ನೀರಿನಲ್ಲಿ ಕೊಚ್ಚಿಹೋದ ಶ್ವಾನ

ಪಾಪ ಆ ಮೂಕ ಪ್ರಾಣಿ, ಸೇತಿ ನದಿಯ ರಭಸವಾದ ನೀರಿನ ಹರಿವಿನಲ್ಲಿ ಸ್ವಲ್ಪ ದೂರ ಕೊಚ್ಚಿಕೊಂಡು ಹೋಗಿ ನಂತರ ಕಣ್ಮರೆಯಾಗಿದೆ. ನಬಿನ್ ಅವರು ಈ ವಿಡಿಯೋವನ್ನು ಬುಧವಾರ ಬೆಳಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ತಕ್ಷಣವೇ ಅದು ಎಲ್ಲೆಡೆ ಹರಿದಾಡಿ, ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.

ಪ್ರಾಣಿ ಪ್ರಿಯರ ಆಕ್ರೋಶ ಮತ್ತು ಶುರುವಾದ ಪೊಲೀಸರ ತನಿಖೆ

ಸಾಮಾಜಿಕ ಜಾಲತಾಣಗಳಲ್ಲಿ ಎಕ್ಸ್ ಹಾಗೂ ಫೇಸ್‌ಬುಕ್‌ನಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚೆತ್ತಿದ್ದಾರೆ. ಬಜಾಂಗ್ ಜಿಲ್ಲಾ ಪೊಲೀಸ್ ಮಾಹಿತಿ ಅಧಿಕಾರಿ ದೀಪಕ್ ಬಿಷ್ಟ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಘಟನೆಯ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ ಹಾಗೂ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ” ಎಂದು ತಿಳಿಸಿದ್ದಾರೆ. ಸದ್ಯ ವೈರಲ್ ವಿಡಿಯೋ ಆಧಾರದ ಮೇಲೆ, ಆ ಕೃತ್ಯ ಎಸಗಿದ ಮಹಿಳೆ ಯಾರು? ಆಕೆಯ ವಿಳಾಸವೇನು? ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗುತ್ತಿದೆ.

Leave a Comment

Your email address will not be published. Required fields are marked *

Scroll to Top