Ahmedabad Honor Kill : ಅಹಮದಾಬಾದ್ ಬೆಚ್ಚಿಬೀಳಿಸಿದ ಘಟನೆ, ಅಪಘಾತದ ಹಿಂದಿತ್ತು 22 ವರ್ಷದ ಮಗಳ ‘ಮರ್ಯಾದಾ ಹತ್ಯೆ’ಯ ರಹಸ್ಯ!

ಹೆತ್ತವರೇ ಮಕ್ಕಳ ಪಾಲಿಗೆ ಯಮನಾದರೆ ಆ ದೇವರಾದರೂ ಏನು ಮಾಡಲು ಸಾಧ್ಯ? ಗುಜರಾತ್‌ನ ಅಹಮದಾಬಾದ್‌ ನಲ್ಲಿ ನಡೆದ ಒಂದು ರಸ್ತೆ ಅಪಘಾತದ ಪ್ರಕರಣವೀಗ (Ahmedabad Honor Kill) ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮೇಲ್ನೋಟಕ್ಕೆ ಇದು ಸಾಮಾನ್ಯ ‘ಹಿಟ್ ಅಂಡ್ ರನ್’ (Hit and run) ಎನಿಸಿದರೂ, ತನಿಖೆ ಆಳಕ್ಕಿಳಿದಂತೆ ಇದರ ಹಿಂದಿರುವುದು ಸ್ವತಃ ತಂದೆ ಮತ್ತು ಅಣ್ಣನೇ ಸೇರಿ ಮಾಡಿದ ಭೀಕರ ಮರ್ಯಾದಾ ಹತ್ಯೆ (Honour Killing) ಎಂಬ ಸತ್ಯ ಬಯಲಾಗಿದೆ. ಈ ಕರುಳು ಹಿಂಡುವ ಘಟನೆಯ ಹಿಂದಿನ ಅಸಲಿ ಕಥೆ ಏನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

Ahmedabad honor kill 1

Ahmedabad Honor Kill – ವೈರಲ್ ಆದ ಒಂದು ವಿಡಿಯೋ ತಂದಿಟ್ಟ ಆಪತ್ತು

ಮೃತ ದುರ್ದೈವಿ ಯುವತಿಯನ್ನು 22 ವರ್ಷದ ಸೋಫಿಯಾ ಎಂದು ಗುರುತಿಸಲಾಗಿದೆ. ಆಕೆ ಅಹಮದಾಬಾದ್‌ನ ಬೋಪಾಲ್ ಪ್ರದೇಶದಲ್ಲಿರುವ ‘ನಿಕಿ ಆಸ್ಪತ್ರೆ’ಯಲ್ಲಿ ಕೆಲಸ ಮಾಡುತ್ತಿದ್ದಳು. ಎಲ್ಲರಂತೆ ನೆಮ್ಮದಿಯ ಜೀವನ ನಡೆಸುತ್ತಿದ್ದ ಆಕೆಯ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ್ದು ಒಂದು ವಿಡಿಯೋ. ಕೆಲವು ದಿನಗಳ ಹಿಂದೆ ಆಕೆ ಯುವಕನೊಬ್ಬನ ಜೊತೆಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ವಿಡಿಯೋ ಕುಟುಂಬದಲ್ಲಿ ದೊಡ್ಡ ಮಟ್ಟದ ಮುಜುಗರಕ್ಕೆ ಕಾರಣವಾಗಿತ್ತು. ಸಮಾಜದ ಭಯ ಮತ್ತು ಮರ್ಯಾದೆಯ ಪ್ರಶ್ನೆಯಿಂದಾಗಿ ತಂದೆ ಮೊಹಮ್ಮದ್ ಫಾರೂಕ್ ಹಾಗೂ ಅಣ್ಣ ಮೊಹಮ್ಮದ್ ಹಬೀಲ್ ಆಕೆಗೆ ಬುದ್ಧಿವಾದ ಹೇಳಲು ಪ್ರಯತ್ನಿಸಿದ್ದರು. ಆದರೆ ಆಕೆ ಬೇರೊಬ್ಬ ಯುವಕನ ಜೊತೆ ಸಂಬಂಧ ಹೊಂದಿದ್ದಾಳೆ ಎಂಬ ಬಲವಾದ ಅನುಮಾನ ಅವರಲ್ಲಿತ್ತು. ಇದೇ ಅನುಮಾನ ಆಕೆಯ ಬರ್ಬರ ಕೊಲೆಗೆ ಕಾರಣವಾಯಿತು.

90 ದಿನಗಳ ಹಿಂದೆಯೇ ಸಿದ್ಧವಾಗಿತ್ತು ಕೊಲೆಯ ಬ್ಲೂಪ್ರಿಂಟ್!

ಹೌದು, ನಿಮಗಿದು ಅಚ್ಚರಿಯಾಗಬಹುದು. ಇದು ದಿಢೀರ್ ಎಂದು ಕೋಪದಲ್ಲಿ ನಡೆದ ಕೊಲೆಯಲ್ಲ. ಮೂರು ತಿಂಗಳ ಹಿಂದೆಯೇ ತಂದೆ-ಮಗ ಸೇರಿ ಸೋಫಿಯಾಳನ್ನು ಮುಗಿಸಲು ಪಕ್ಕಾ ಸ್ಕೆಚ್ ಹಾಕಿದ್ದರು. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ಆಗಸ್ಟ್ 12ರ ಮಳೆಯ ರಾತ್ರಿಯನ್ನು. ಸೋಫಿಯಾ ಕೆಲಸ ಮುಗಿಸಿ ಬರುವ ದಾರಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳು (Ahmedabad Honor Kill) ಕಡಿಮೆ ಇದ್ದವು ಮತ್ತು ಅಲ್ಲಿ ಕತ್ತಲು ಹೆಚ್ಚಿರುತ್ತಿತ್ತು. ಹೀಗಾಗಿ ಯಾರಿಗೂ ಅನುಮಾನ ಬರದಂತೆ, ಸಾಕ್ಷ್ಯಗಳು ಸಿಗದಂತೆ ಕೊಲೆ ಮಾಡಲು ಆ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದರು.

ಸುತ್ತಿಗೆಯಿಂದ ಹೊಡೆದು ಕೊಂದ ಪಾಪಿ ಅಣ್ಣ

ಆಗಸ್ಟ್ 12ರಂದು ಆಸ್ಪತ್ರೆಯಿಂದ ಸೋಫಿಯಾಳನ್ನು ಬೈಕ್‌ನಲ್ಲಿ ಕರೆದುಕೊಂಡು ಬರುವಾಗ ಈ ಭೀಕರ ಘಟನೆ ನಡೆದಿದೆ. ಮೊದಲೇ ಪ್ಲಾನ್ ಮಾಡಿದಂತೆ ಅಣ್ಣ ಹಬೀಲ್ ಬೈಕ್‌ನಲ್ಲಿ ತನ್ನೊಂದಿಗೆ ಒಂದು ಸುತ್ತಿಗೆಯನ್ನು (Ahmedabad Honor Kill) ಇಟ್ಟುಕೊಂಡಿದ್ದ. ನಿರ್ಜನ ಪ್ರದೇಶಕ್ಕೆ ಬರುತ್ತಿದ್ದಂತೆ, ಚಲಿಸುತ್ತಿದ್ದ ಬೈಕ್‌ನಲ್ಲೇ ತಂಗಿಯ ತಲೆಗೆ ಸುತ್ತಿಗೆಯಿಂದ ಬಲವಾಗಿ ಹೊಡೆದಿದ್ದಾನೆ. ಆಕೆ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಾಗ, ಮತ್ತೊಮ್ಮೆ ತಲೆಗೆ ಹೊಡೆದು ಆಕೆಯ ಉಸಿರು ನಿಲ್ಲುವವರೆಗೂ ತಂದೆ-ಮಗ ಇಬ್ಬರೂ ಅಲ್ಲೇ ಕಾದಿದ್ದಾರೆ.

ಪೊಲೀಸರ ಕಣ್ಣಿಗೆ ಮಣ್ಣೆರಚಲು ‘ಅಪಘಾತ’ದ ಸ್ಕೆಚ್

ಸೋಫಿಯಾಳ ಪ್ರಾಣ ಪಕ್ಷಿ ಹಾರಿದ ಬಳಿಕ, ಮೃತದೇಹವನ್ನು ಮತ್ತೆ ಬೈಕ್ ಮೇಲೆ ಕೂರಿಸಿಕೊಂಡು ಸ್ವಲ್ಪ ದೂರ ಸಾಗಿದ್ದಾರೆ. ಯಾರಿಗೂ ಅನುಮಾನ ಬರಬಾರದು ಎಂದು, ರಸ್ತೆ ಬದಿಯಲ್ಲಿ ಮೃತದೇಹವನ್ನು ಎಸೆದು, (Ahmedabad Honor Kill) ತಮ್ಮ ಬೈಕ್ ಅನ್ನು ತಾವೇ ಜಖಂಗೊಳಿಸಿದ್ದಾರೆ. ಅಷ್ಟೇ ಅಲ್ಲ, ಅಣ್ಣ ಹಬೀಲ್ ತನಗೆ ತಾನೇ ಗಾಯ ಮಾಡಿಕೊಂಡು, ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಕಥೆ ಕಟ್ಟಿದ್ದ. Read this also : ಮಹಾರಾಜ್‌ ಗಂಜ್‌ ನಲ್ಲಿ ಹೈಡ್ರಾಮಾ, ಆಸ್ತಿ ಪಾಲಿಗಾಗಿ ‘ಡಬಲ್ ಬ್ಯಾರೆಲ್ ಗನ್’ ಹಿಡಿದು ನೇರ ಪೊಲೀಸ್ ಠಾಣೆಗೇ ಎಂಟ್ರಿಕೊಟ್ಟ ಯುವತಿ!

Ahmedabad honor kill case involving 22-year-old Sofia, her father and brother

ಸಿಸಿಟಿವಿ ಕ್ಯಾಮೆರಾದಿಂದ ಬಯಲಾಯ್ತು ಅಸಲಿ ಸತ್ಯ

ಆರಂಭದಲ್ಲಿ ಇದೊಂದು ಸಾಮಾನ್ಯ ರಸ್ತೆ ಅಪಘಾತ ಎಂದೇ ಟ್ರಾಫಿಕ್ ಪೊಲೀಸರು ಭಾವಿಸಿದ್ದರು. ಆಸ್ಪತ್ರೆಗೆ ದಾಖಲಾದಾಗ ತೀವ್ರ ರಕ್ತಸ್ರಾವದಿಂದ ಸೋಫಿಯಾ ಮೃತಪಟ್ಟಿದ್ದಳು. ಆದರೆ ತನಿಖೆ ಚುರುಕುಗೊಂಡಂತೆ ಕಥೆ ಸಂಪೂರ್ಣವಾಗಿ ಬದಲಾಯಿತು. ಘಟನೆ ನಡೆದ ಸ್ಥಳದಲ್ಲಿ ವಾಹನವೊಂದು ಡಿಕ್ಕಿ ಹೊಡೆದ ಅಥವಾ ಅಪಘಾತದ ಯಾವುದೇ ಲಕ್ಷಣಗಳಿರಲಿಲ್ಲ. ಆ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಆ ಸಮಯದಲ್ಲಿ ಬೇರೆ ಯಾವುದೇ ವಾಹನ ಅಲ್ಲಿಂದ ಹಾದುಹೋಗಿರಲಿಲ್ಲ ಎಂಬುದು ದೃಢಪಟ್ಟಿತು. ಹಬೀಲ್ ಹೇಳುತ್ತಿದ್ದ ಕಥೆಗೂ, ಅಲ್ಲಿನ ಸಾಕ್ಷ್ಯಗಳಿಗೂ ತಾಳೆಯಾಗುತ್ತಿರಲಿಲ್ಲ.

ಇದೇ ಸುಳಿವನ್ನಿಟ್ಟುಕೊಂಡು ಪೊಲೀಸರು ಅಣ್ಣ ಹಬೀಲ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ. ಟ್ರಾಫಿಕ್ ಪೊಲೀಸರಿಂದ ಈ ಪ್ರಕರಣವನ್ನು ವಹಿಸಿಕೊಂಡ (Ahmedabad Honor Kill) ಅಹಮದಾಬಾದ್ ಎಂ-ಡಿವಿಷನ್ ಪೊಲೀಸರು, ಇದೀಗ ತಂದೆ ಮತ್ತು ಮಗನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಇಬ್ಬರನ್ನೂ ಬಂಧಿಸಿದ್ದಾರೆ. ಹೆತ್ತ ಮಗಳನ್ನೇ ಮರ್ಯಾದೆಗಾಗಿ ಬಲಿ ಪಡೆದ ಈ ಘಟನೆ ನಿಜಕ್ಕೂ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಭುವಿಗಿಳಿದು ಬಂದ ದೇವತೆಯಂತಿದ್ದ ಮಗಳನ್ನು ಹೆತ್ತವರೇ ಕೊಂದ ಈ ಕರಾಳ ಮುಖ, ಸಮಾಜದ ಡೊಂಕುತನವನ್ನು ಮತ್ತೆ ಪ್ರಶ್ನಿಸುವಂತೆ ಮಾಡಿದೆ.

Leave a Comment

Your email address will not be published. Required fields are marked *

Scroll to Top