ಹಿಂದೂ ಸಂಪ್ರದಾಯದಲ್ಲಿ ಶ್ರಾವಣ ಮಾಸಕ್ಕೆ ಎಷ್ಟೊಂದು ಪಾವಿತ್ರ್ಯತೆ ಇದೆಯೋ, ಅಷ್ಟೇ ಪ್ರಾಮುಖ್ಯತೆ ವರಮಹಾಲಕ್ಷ್ಮಿ ವ್ರತಕ್ಕೂ (Varamahalakshmi Vrata) ಇದೆ. ಮನೆತುಂಬಾ ದೀಪ ಬೆಳಗಿ, ಅಷ್ಟಲಕ್ಷ್ಮಿಯರನ್ನು ಸ್ಮರಿಸುತ್ತಾ ಮಡಿ-ಮೈಲಿಗೆಯಿಂದ ಆಚರಿಸುವ ಈ ಹಬ್ಬದ ಪೂಜಾ ವಿಧಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಜಗತ್ತಿನಲ್ಲಿ ಪ್ರಸಿದ್ಧಿ ಪಡೆಯುವ ತರಾತುರಿಯಲ್ಲಿ ಕೆಲವರು ಧರ್ಮದ ಗಡಿಯನ್ನು ಮೀರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

Varamahalakshmi Vrata – ಆಧುನಿಕತೆಯ ಹೆಸರಿನಲ್ಲಿ ದೇವಿಯ ಅಲಂಕಾರಕ್ಕೇ ಕಳಂಕ
ಸಾಪ್ರದಾಯಿಕ ಶೈಲಿಯಲ್ಲಿ ಅರಿಶಿನ-ಕುಂಕುಮ, ಮಲ್ಲಿಗೆ ಹೂವಿನ ಹಾರ ಹಾಗೂ ರೇಷ್ಮೆ ಸೀರೆಯುಟ್ಟು ಕಂಗೊಳಿಸಬೇಕಾದ ಅಮ್ಮವಾರಿಗೆ, ಕೆಲ ಕಿಡಿಗೇಡಿಗಳು ಆಧುನಿಕತೆಯ ಮುಖವಾಡ ತೊಡಿಸಿ ವಿಕೃತವಾಗಿ ವರ್ತಿಸಿದ್ದಾರೆ. ವರಮಹಾಲಕ್ಷ್ಮಿ ದೇವಿಯ ವಿಗ್ರಹಕ್ಕೆ ಸೀರೆ ಬದಲಿಗೆ ಜೀನ್ಸ್ ಪ್ಯಾಂಟ್ ಹಾಗೂ ಟೀ-ಶರ್ಟ್ ತೊಡಿಸಿ ಅಲಂಕಾರ ಮಾಡಿರುವುದು ಪ್ರಸ್ತುತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಮಹಿಳೆಯೊಬ್ಬರು ಈ ಸಂಬಂಧ ಇನ್ಸ್ಟಾದಲ್ಲಿ ವಿಡಿಯೋ ಮಾಡುವ ಮೂಲಕ ಆಕ್ರೋಷ ಹೊರಹಾಕಿದ್ದಾರೆ.
ನೈವೇದ್ಯದಲ್ಲೂ ಹಳ್ಳಿಯ ಸೊಗಡು ಮಾಯ, ಜಂಕ್ ಫುಡ್ ಮಯ
ದೇವಿಗೆ ಇಷ್ಟವಾದ ಸಾಂಪ್ರದಾಯಿಕ ಪಾಯಸ, ಹಲ್ವಾ ಅಥವಾ ಸಿಹಿ ತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸುವುದು ನಮ್ಮ ವಾಡಿಕೆ. ಆದರೆ ಈ ಆಧುನಿಕ ಭಕ್ತರು ದೇವಿಯ ಮುಂದೆ ಮಾರುಕಟ್ಟೆಯಿಂದ ತಂದ ಪಿಜ್ಜಾ ಮತ್ತು ಸಮೋಸಾಗಳನ್ನು ನೈವೇದ್ಯದ ರೂಪದಲ್ಲಿ ಇಟ್ಟು ಅಡ್ಡದಾರಿ ಹಿಡಿದಿದ್ದಾರೆ. ಇಷ್ಟಕ್ಕೇ ಸುಮ್ಮನಾಗದೆ, ಇದರ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿರುವುದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. Read this also : ಸೆಪ್ಟೆಂಬರ್ ನಲ್ಲಿ ಗ್ರಹಗಳ ಮಹಾ ಚಮತ್ಕಾರ: ಈ 3 ರಾಶಿಯವರ ಕೈಹಿಡಿಯಲಿದೆ ಅದೃಷ್ಟ, ಹಣದ ಹೊಳೆ!

ಸಂಪ್ರದಾಯದೊಂದಿಗೆ ಚೆಲ್ಲಾಟವಾಡಿದರೆ ಪರಿಣಾಮ ಗಂಭೀರ
ಧಾರ್ಮಿಕ ಆಚರಣೆಗಳನ್ನು (Related Video Here) ಕೇವಲ ಮನರಂಜನೆ ಅಥವಾ ಲೈಕ್ಸ್‌ಗಾಗಿ ಬಳಸಿಕೊಳ್ಳುತ್ತಿರುವವರ ವಿರುದ್ಧ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ನಮ್ಮ ಹಿರಿಯರು ಕಲಿಸಿಕೊಟ್ಟ ಸಂಸ್ಕಾರವನ್ನು ಮುಂದಿನ ಪಿಳಿಗೆಗೆ ಉತ್ತಮ ರೀತಿಯಲ್ಲಿ ತಲುಪಿಸಬೇಕಾದವರೇ ಈ ರೀತಿಯ ಅವಹೇಳನಕಾರಿ ಕೃತ್ಯಗಳಿಗೆ ಮುಂದಾದರೆ, ಭವಿಷ್ಯದಲ್ಲಿ ನಮ್ಮ ಸಂಸ್ಕೃತಿಯ ಅಸ್ತಿತ್ವವೇ ಪ್ರಶ್ನಾರ್ಥಕವಾಗಲಿದೆ ಎಂದು ಸಚಿಂತಕರು ಎಚ್ಚರಿಸಿದ್ದಾರೆ. ಪ್ರಚಾರದ ವ್ಯಾಮೋಹಕ್ಕೆ ಬಲಿಬಿದ್ದು ದೇವಸ್ಥಾನದ ಹಾಗೂ ಪೂಜೆಯ ಪಾವಿತ್ರ್ಯತೆಯನ್ನು ಹಾಳುಮಾಡುತ್ತಿರುವ ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಹಾಕಲೇಬೇಕಿದೆ ಎಂಬ ಒತ್ತಾಯ ಜೋರಾಗಿದೆ.
