Sitapur Love Triangle : ಪತಿ ಮತ್ತು ಪ್ರಿಯಕರ ಇಬ್ಬರ ಜೊತೆಯೂ ಇರುತ್ತೇನೆಂದ ಪತ್ನಿ! ಒಪ್ಪಿದ ಗಂಡ: ಇದು ಸೀತಾಪುರದ ವಿಚಿತ್ರ ಸ್ಟೋರಿ…!

ಪ್ರೀತಿ, ಪ್ರೇಮ, ತ್ರಿಕೋನ ಪ್ರೇಮಕಥೆಗಳನ್ನು ನಾವು ಸಿನಿಮಾಗಳಲ್ಲಿ ನೋಡಿರುತ್ತೇವೆ ಅಥವಾ ಕಥೆಗಳಲ್ಲಿ ಓದಿರುತ್ತೇವೆ. ಆದರೆ, ರಿಯಲ್ ಲೈಫ್‌ನಲ್ಲಿ ಇಂತಹದ್ದೊಂದು ಘಟನೆ ನಡೆದರೆ? ಹೌದು, ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿರುವ ಒಂದು (Sitapur Love Triangle) ಘಟನೆ ಸದ್ಯ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

Sitapur Love Triangle involving a woman, her husband and her lover in Uttar Pradesh

ತನ್ನ ಗಂಡ ಮತ್ತು ಪ್ರಿಯಕರ ಇಬ್ಬರೊಂದಿಗೂ ಒಂದೇ ಸೂರಿನಡಿ ಜೀವಿಸುತ್ತೇನೆ ಎಂದು ಮಹಿಳೆಯೊಬ್ಬಳು ಪಟ್ಟು ಹಿಡಿದಿದ್ದಾಳೆ. ಅಚ್ಚರಿಯ ವಿಚಾರವೆಂದರೆ, ಆಕೆಯ ಪತಿ ಕೂಡ ಇದಕ್ಕೆ ಯಾವುದೇ ತಕರಾರು ಇಲ್ಲದೆ ಒಪ್ಪಿಗೆ ಸೂಚಿಸಿದ್ದಾನೆ! ಈ ವಿಚಿತ್ರ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.

Sitapur Love Triangle – ಸೀತಾಪುರದ ‘ತ್ರಿಕೋನ’ ಲವ್ ಸ್ಟೋರಿ

ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಮಹಮೂದಾಬಾದ್ ಠಾಣೆಯಲ್ಲಿ ಈ ಹೈಡ್ರಾಮಾ ನಡೆದಿದೆ. ಪತ್ನಿ ಅಂಜು, ಪತಿ ಶುಭಂ ವರ್ಮಾ ಹಾಗೂ ಪ್ರಿಯಕರ ನಿತಿನ್ ವಿಶ್ವಕರ್ಮ ನಡುವಿನ ಈ ಸಂಬಂಧ ಈಗ ಇಡೀ ಊರಿಗೆ ಸುದ್ದಿಯಾಗಿದೆ. ನನಗೆ ನನ್ನ ಗಂಡನೂ ಬೇಕು, ಪ್ರಿಯಕರನೂ ಬೇಕು. ಇಬ್ಬರನ್ನೂ ಬಿಟ್ಟು ನಾನಿರಲಾರೆ. ಯಾರನ್ನಾದರೂ ಒಬ್ಬರನ್ನೇ ಆರಿಸಿಕೊಳ್ಳುವಂತೆ ನನ್ನನ್ನು ಬಲವಂತ ಮಾಡಬೇಡಿ, ನಾವೆಲ್ಲರೂ ಒಂದೇ ಮನೆಯಲ್ಲಿ ಒಟ್ಟಿಗೆ ಇರುತ್ತೇವೆ ಎಂದು ಅಂಜು ಪೊಲೀಸರ ಮುಂದೆಯೇ ಖಡಕ್ ಆಗಿ ಹೇಳಿದ್ದಾಳೆ.

ಪ್ರಿಯಕರನಿಗಾಗಿ ಸ್ವಂತ ಮನೆಯನ್ನೇ ಬಿಡಲು ಸಿದ್ಧನಾದ ಗಂಡ!

ಈ ಕಥೆಯಲ್ಲಿ ಎಲ್ಲರಿಗೂ ಶಾಕ್ ಕೊಟ್ಟಿರುವುದು ಗಂಡ ಶುಭಂ ವರ್ಮಾ ಅವರ ನಡೆ. ಸಾಮಾನ್ಯವಾಗಿ ಇಂಥಹ ಸಂದರ್ಭಗಳಲ್ಲಿ ಜಗಳ, ವಿಚ್ಛೇದನ ನಡೆಯುತ್ತದೆ. ಆದರೆ ಶುಭಂ, ನನಗೆ ನನ್ನ ಪತ್ನಿ ಹಾಗೂ ಅವಳ (Sitapur Love Triangle)  ಪ್ರಿಯಕರ ನಿತಿನ್ ಇಬ್ಬರೂ ಮುಖ್ಯ. ಅವರಿಬ್ಬರಿಗಾಗಿ ನಾನು ನನ್ನ ಮನೆಯನ್ನು ಬಿಡಲೂ ಸಿದ್ಧ, ಆದರೆ ಅವರನ್ನು ಬಿಡೆನು ಎಂದಿದ್ದಾನೆ. ಅಂದಹಾಗೆ, ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಆ ಮಕ್ಕಳನ್ನು ಕೂಡ ಈ ಹೊಸ ಜೀವನದಲ್ಲಿ ತಮ್ಮೊಂದಿಗೇ ಬೆಳೆಸಲು ಈ ಮೂವರು ನಿರ್ಧರಿಸಿದ್ದಾರೆ.

Sitapur Love Triangle involving a woman, her husband and her lover in Uttar Pradesh

ಯಾರು ಈ ನಿತಿನ್? ಈತ ಮನೆಗೆ ಎಂಟ್ರಿ ಕೊಟ್ಟಿದ್ದು ಹೇಗೆ?

ಈ ಕಥೆಯಲ್ಲಿ ಮೂರನೇ ವ್ಯಕ್ತಿಯ ಪ್ರವೇಶ ಹೇಗಾಯಿತು ಎಂಬುದು ಕುತೂಹಲಕಾರಿಯಾಗಿದೆ. ನಿತಿನ್ ವಿಶ್ವಕರ್ಮ ಬೇರಾರೂ ಅಲ್ಲ, ಶುಭಂ ಕುಟುಂಬಕ್ಕೆ ಮೊದಲಿನಿಂದಲೂ ಆಪ್ತನಾಗಿದ್ದ. ಆತ ಆಗಾಗ್ಗೆ ಶುಭಂ ಮನೆಗೆ ಬರುತ್ತಿದ್ದನು, (Sitapur Love Triangle)  ಕೆಲವೊಮ್ಮೆ ಅಲ್ಲೇ ವಾಸ್ತವ್ಯ ಕೂಡ ಹೂಡುತ್ತಿದ್ದನು. ಸ್ವತಃ ಶುಭಂ, ನಿತಿನ್‌ನನ್ನು ತನ್ನ ಸ್ವಂತ ಸಹೋದರನಂತೆ ಭಾವಿಸಿದ್ದನು. ಇವರು ಮೂವರೂ ಒಟ್ಟಿಗೆ ಸುತ್ತಾಡುತ್ತಿದ್ದರು ಹಾಗೂ ಒಟ್ಟಿಗೆ ಊಟ ಮಾಡುತ್ತಿದ್ದರು. ಇದೇ ಆಪ್ತತೆ ಮತ್ತುಲು ಸಲುಗೆ ಅಂಜು ಮತ್ತು ನಿತಿನ್ ನಡುವಿನ ಪ್ರೇಮಕ್ಕೆ ನಾಂದಿ ಹಾಡಿದೆ ಎಂದು ಹೇಳಲಾಗುತ್ತಿದೆ. Read this also : ಪ್ರೇಮ ವಿವಾಹವಾದ (Love Marriage) ಪತ್ನಿಯನ್ನೇ ಮುಗಿಸಿದ ಪತಿ! ಎರಡನೇ ಮದುವೆ ಹುಚ್ಚಿಗೆ ಬಲಿಯಾಯ್ತು ಸುಂದರ ಸಂಸಾರ

ಕುಟುಂಬಸ್ಥರ ಆಕ್ರೋಶ, ಪೊಲೀಸರಿಂದ ಸಂಧಾನ ಯತ್ನ

ಅಂಜು ಮತ್ತು ಶುಭಂ ಅವರ ಈ ವಿಚಿತ್ರ ನಿರ್ಧಾರಕ್ಕೆ ಎರಡೂ ಕುಟುಂಬದವರು (Related Video Link Here) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಮನೆಯಲ್ಲಿ ದೊಡ್ಡ ರಂಪಾಟವೇ ನಡೆದಿದೆ. ತಮ್ಮ ಈ ಬೇಡಿಕೆಯ ಬಗ್ಗೆ ಮನೆಯವರಿಗೆ ಮೊದಲೇ ತಿಳಿದಿತ್ತು ಎಂದು ಅಂಜು ಹೇಳಿದ್ದಾಳೆ.

Sitapur Love Triangle involving a woman, her husband and her lover in Uttar Pradesh

ವಿಷಯ ವಿಕೋಪಕ್ಕೆ ಹೋಗಿ ಮಹಮೂದಾಬಾದ್ ಠಾಣೆ (Sitapur Love Triangle)  ಮೆಟ್ಟಿಲೇರಿದಾಗ, ಇನ್ಸ್‌ಪೆಕ್ಟರ್ ಭಾನು ಪ್ರತಾಪ್ ಸಿಂಗ್ ಎಲ್ಲರನ್ನೂ ಕರೆಸಿ ಬುದ್ಧಿವಾದ ಹೇಳುವ ಪ್ರಯತ್ನ ಮಾಡಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಸಾಕಷ್ಟು ಯತ್ನಗಳು ನಡೆದಿವೆ. ಆದರೆ, ಸದ್ಯಕ್ಕೆ ಯಾರೂ ತಮ್ಮ ಪಟ್ಟು ಸಡಿಲಿಸದ ಕಾರಣ ಯಾವುದೇ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಸದ್ಯ ಸೀತಾಪುರದ ಈ ವಿಲಕ್ಷಣ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ವಿಚಿತ್ರ ತ್ರಿಕೋನ ಪ್ರೇಮಕಥೆಯ ಬಗ್ಗೆ ಬಿಸಿಬಿಸಿ ಚರ್ಚೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top