ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಭ ಗ್ರಹಗಳಾದ ಗುರು, ಶುಕ್ರ ಮತ್ತು ಬುಧರು ಯಾವುದೇ ಗ್ರಹಗಳ ಸಾಂಗತ್ಯವಿಲ್ಲದೆ ‘ಏಕಾಂಗಿ’ಯಾಗಿ ಸಂಚರಿಸಿದಾಗ ಅಪಾರ ಶುಭ ಫಲಗಳನ್ನು ಕರುಣಿಸುತ್ತಾರೆ. ಕಳೆದ ಜೂನ್ 2 ರಂದು ಕರ್ಕಾಟಕ ರಾಶಿಯನ್ನು (Jupiter Transit 2026) ಪ್ರವೇಶಿಸಿದ್ದ ದೇವಗುರು ಬೃಹಸ್ಪತಿ, ಇಷ್ಟು ದಿನ ಇತರ ಗ್ರಹಗಳ ಜೊತೆಗಿದ್ದ ಕಾರಣ ಪೂರ್ಣ ಫಲ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಆಗಸ್ಟ್ 22 ರಿಂದ ಸೆಪ್ಟೆಂಬರ್ 18 ರವರೆಗೆ ಗುರು ಸಂಪೂರ್ಣ ಒಂಟಿಯಾಗಿ ಸಂಚರಿಸಲಿದ್ದಾನೆ. ಈ 28 ದಿನಗಳ ಅವಧಿಯಲ್ಲಿ 7 ರಾಶಿಗಳ ಅದೃಷ್ಟದ ಬಾಗಿಲು ತೆರೆಯಲಿದ್ದು, ಅನಿರೀಕ್ಷಿತ ಧನಲಾಭ ಮತ್ತು ರಾಜಯೋಗ ಒಲಿಯಲಿದೆ.

Jupiter Transit 2026 – ಜ್ಯೋತಿಷ್ಯದಲ್ಲಿ ಗುರುವಿನ ‘ಏಕಾಂಗಿ ಸಂಚಾರ’ ಏಕೆ ಅತ್ಯಂತ ಶಕ್ತಿಶಾಲಿ?
ಯಾವುದೇ ಪಾಪ ಗ್ರಹಗಳ ದೃಷ್ಟಿ ಅಥವಾ ಇತರ ಗ್ರಹಗಳ ಯುತಿಯಿಲ್ಲದೆ ಗುರು ಉಚ್ಛ ಸ್ಥಾನದಲ್ಲಿ ಒಂಟಿಯಾಗಿ ನಿಂತಾಗ ‘ಹಂಸ ಮಹಾಪುರುಷ ಯೋಗ’ ಪೂರ್ಣ ಪ್ರಮಾಣದಲ್ಲಿ ಜಾಗೃತಗೊಳ್ಳುತ್ತದೆ. ಇದು ವ್ಯಕ್ತಿಯ ಜೀವನದಲ್ಲಿ ಸ್ಥಗಿತಗೊಂಡಿದ್ದ ಕೆಲಸಗಳಿಗೆ ವೇಗ ನೀಡಿ, ನಾಯಕತ್ವದ ಗುಣ ಹಾಗೂ ಐಶ್ವರ್ಯವನ್ನು ಹೆಚ್ಚಿಸುತ್ತದೆ.
1. ಮೇಷ ರಾಶಿ: ಒಲಿಯಲಿದೆ ಹಂಸ ಮಹಾಪುರುಷ ಯೋಗ
ಮೇಷ ರಾಶಿಯವರ ಜಾತಕದಲ್ಲಿ ಗುರುವು ಚತುರ್ಥ ಕೇಂದ್ರದಲ್ಲಿ ಉಚ್ಚ ಸ್ಥಿತಿಯಲ್ಲಿದ್ದರೂ, ಇಲ್ಲಿಯವರೆಗೆ ‘ಹಂಸ ಮಹಾಪುರುಷ ಯೋಗ’ದ ಸಂಪೂರ್ಣ ಲಾಭ ಸಿಕ್ಕಿರಲಿಲ್ಲ. ಆದರೆ ಆಗಸ್ಟ್ 22ರ ನಂತರ ಗುರುವಿನ ಒಂಟರಿ ಸಂಚಾರದಿಂದ ನಿಮಗೆ ಅದ್ಭುತವಾದ ರಾಜಯೋಗ ಕಾದಿದೆ.
- ಸಮಾಜದಲ್ಲಿ ಗೌರವ, ಸನ್ಮಾನಗಳು ಒಲಿಯಲಿವೆ.
- ಉದ್ಯೋಗದಲ್ಲಿ ಬಡ್ತಿ (Job Promotion) ಮತ್ತು ವ್ಯಾಪಾರದಲ್ಲಿ ಭಾರೀ ಲಾಭ ನಿರೀಕ್ಷಿಸಬಹುದು.
- ಆದಾಯದ ಮೂಲಗಳು ಗಣನೀಯವಾಗಿ ಹೆಚ್ಚಾಗಲಿವೆ.

2. ಮಿಥುನ ರಾಶಿ: ಆರ್ಥಿಕವಾಗಿ ಭಾರೀ ಲಾಭದ ನಿರೀಕ್ಷೆ
ಮಿಥುನ ರಾಶಿಯವರಿಗೆ ಗುರುವು ಧನ ಸ್ಥಾನದಲ್ಲಿ ಉಚ್ಚ ಸ್ಥಿತಿಯಲ್ಲಿದ್ದಾನೆ. ಅಂದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವ ಸಮಯ ಬಂದಿದೆ!
- ನೀವು ಕೋಟ್ಯಾಧಿಪತಿ ಆಗುವ ಯೋಗವೂ ಹತ್ತಿರದಲ್ಲಿದೆ.
- ನಿಮ್ಮ ಐಡಿಯಾ ಮತ್ತು ಸಲಹೆಗಳಿಂದ ಸಂಸ್ಥೆಗಳು ಅಭಿವೃದ್ಧಿ ಹೊಂದಲಿವೆ.
- ಉದ್ಯೋಗಿಗಳಿಗೆ ಸಂಬಳ ಹೆಚ್ಚಳ (Salary Hike) ಮತ್ತು ಪ್ರಮೋಷನ್ ಸಿಗುವ ಸಂಪೂರ್ಣ ಸಾಧ್ಯತೆ ಇದೆ. ರಾಜಕೀಯದಲ್ಲೂ ನಿಮ್ಮ ಪ್ರಭಾವ ಹೆಚ್ಚಾಗಲಿದೆ.
3. ಕರ್ಕಾಟಕ ರಾಶಿ: ಗುರು ಉಚ್ಚ ಸ್ಥಿತಿ, ಮುಟ್ಟಿದ್ದೆಲ್ಲಾ ಚಿನ್ನ!
ನಿಮ್ಮದೇ ರಾಶಿಯಲ್ಲಿ ಗುರುವು ಉಚ್ಚ ಸ್ಥಿತಿಯಲ್ಲಿರುವುದರಿಂದ ನಿಮಗೂ ‘ಹಂಸ ಮಹಾಪುರುಷ ಯೋಗ’ ಉಂಟಾಗಲಿದೆ. ಇಲ್ಲಿಯವರೆಗೆ ಸಿಗಬೇಕಿದ್ದ ಅದೃಷ್ಟದ ಫಲಗಳು ಈಗ ನಿಮ್ಮ ಕೈಸೇರಲಿವೆ.
- ಸಮಾಜದಲ್ಲಿ ಓರ್ವ ಗಣ್ಯ ವ್ಯಕ್ತಿಯಾಗಿ ಗುರುತಿಸಿಕೊಳ್ಳುವಿರಿ.
- ಅನೇಕ ಮೂಲಗಳಿಂದ ಹಣ ಹರಿದು ಬರಲಿದ್ದು, ಉದ್ಯೋಗದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವಿರಿ.
- ನೀವು ಕೈಹಾಕಿದ ಕೆಲಸಗಳೆಲ್ಲಾ ಯಶಸ್ವಿಯಾಗಲಿವೆ, ಒಟ್ಟಿನಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ!
4. ಕನ್ಯಾ ರಾಶಿ: ಅನಿರೀಕ್ಷಿತ ಧನಯೋಗ ಪ್ರಾಪ್ತಿ
ಲಾಭ ಸ್ಥಾನದಲ್ಲಿ ಗುರುವಿನ ಸಂಚಾರದಿಂದ ಕನ್ಯಾ ರಾಶಿಯವರಿಗೆ ಇನ್ಮುಂದೆ ಮಹರ್ದಶೆ ಆರಂಭವಾಗಲಿದೆ.
- ಆಗಸ್ಟ್ 22 ರ ನಂತರ ರಾಜಯೋಗದ ಜೊತೆಗೆ ಅನಿರೀಕ್ಷಿತ ಧನಯೋಗವೂ ಪ್ರಾಪ್ತಿಯಾಗಲಿದೆ.
- ನೀವು ಯಾವುದೇ ಕ್ಷೇತ್ರದಲ್ಲಿದ್ದರೂ ಉನ್ನತ ಸ್ಥಾನಕ್ಕೇರುವಿರಿ.
- ಆದಾಯ ಹೆಚ್ಚಾಗಿ, ದೀರ್ಘಕಾಲದ ವೈಯಕ್ತಿಕ ಮತ್ತು ಆರ್ಥಿಕ ಸಮಸ್ಯೆಗಳಿಂದ ಸಂಪೂರ್ಣ ಮುಕ್ತಿ ಸಿಗಲಿದೆ.
5. ವೃಶ್ಚಿಕ ರಾಶಿ: ವಿದೇಶಿ ಉದ್ಯೋಗದ ಅವಕಾಶ
ಭಾಗ್ಯ ಸ್ಥಾನದಲ್ಲಿ ಗುರುವಿನ ಉಚ್ಚ ಸ್ಥಿತಿಯಿಂದಾಗಿ ವೃಶ್ಚಿಕ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಭರ್ಜರಿ ಪ್ರಗತಿ ಕಂಡುಬರಲಿದೆ.
- ವೃತ್ತಿ ಮತ್ತು ವ್ಯಾಪಾರದಲ್ಲಿ ಅತ್ಯುನ್ನತ ಮಟ್ಟಕ್ಕೆ ಬೆಳೆಯುವಿರಿ.
- ಮನಸ್ಸಿನ ಆಸೆಗಳು ಈಡೇರುವ ಸಮಯವಿದು.
- ಮದುವೆ ಮತ್ತು ಉದ್ಯೋಗದ ವಿಚಾರದಲ್ಲಿ ವಿದೇಶಕ್ಕೆ ಹೋಗುವ (Foreign Opportunities) ಸುವರ್ಣ ಅವಕಾಶಗಳು ಒದಗಿ ಬರಲಿವೆ. Read this also : ಆಗಸ್ಟ್ 17 ರಿಂದ ಈ 6 ರಾಶಿಗಳ ಭವಿಷ್ಯ ಬದಲು, ಕೇತು ಕೃಪೆಯಿಂದ ಶುರುವಾಗಲಿದೆ ರಾಜಯೋಗ!

6. ಮಕರ ರಾಶಿ: ಶೇರ್ ಮಾರ್ಕೆಟ್‌ನಲ್ಲಿ ಭಾರೀ ಲಾಭ
ಮಕರ ರಾಶಿಯವರಿಗೆ ಸಪ್ತಮ ಕೇಂದ್ರದಲ್ಲಿ ಗುರುವಿನ ಉಚ್ಚ ಸ್ಥಿತಿಯಿಂದ ರಾಜಭೋಗ ಒಲಿಯಲಿದೆ.
- ಸಮಾಜದ ಗಣ್ಯ ವ್ಯಕ್ತಿಗಳೊಂದಿಗೆ ಒಡನಾಟ ಬೆಳೆಯಲಿದೆ.
- ಷೇರು ಮಾರುಕಟ್ಟೆ (Share Market) ಮತ್ತು ಇತರೆ ಹೂಡಿಕೆಗಳಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚು ಲಾಭ ಸಿಗಲಿದೆ.
- ಉದ್ಯೋಗದಲ್ಲಿ ಉನ್ನತ ಹುದ್ದೆ ಮತ್ತು ಉನ್ನತ ಪ್ರತಿಷ್ಠಿತ ಕುಟುಂಬದಿಂದ ವಿವಾಹ ಸಂಬಂಧ ಕೂಡಿ ಬರಲಿದೆ.
7. ಮೀನ ರಾಶಿ: ನಿರುದ್ಯೋಗಿಗಳಿಗೆ ಸಿಹಿಸುದ್ದಿ
ನಿಮ್ಮ ರಾಶ್ಯಾಧಿಪತಿಯಾದ ಗುರು ಪಂಚಮ ಸ್ಥಾನದಲ್ಲಿ ಉಚ್ಚ ಸ್ಥಿತಿಯಲ್ಲಿರುವುದು ಒಂದು ವಿಶೇಷವಾದ ಯೋಗ.
- ನಿಮ್ಮ ಕಾರ್ಯಕ್ಷೇತ್ರದಲ್ಲಿ ನೀವು ಉನ್ನತ ಮಟ್ಟಕ್ಕೆ ಏರುವಿರಿ. ಉದ್ಯೋಗ ಜೀವನ ಅತ್ಯಂತ ವೈಭವದಿಂದ ಕೂಡಿರಲಿದೆ.
- ವೃತ್ತಿಪರರು ಮತ್ತು ವ್ಯಾಪಾರಿಗಳಿಗೆ ಸಖತ್ ಬ್ಯುಸಿ ಶೆಡ್ಯೂಲ್ ಇರಲಿದೆ.
- ನಿರುದ್ಯೋಗಿಗಳಿಗೆ ವಿದೇಶದಿಂದ ಅತ್ಯುತ್ತಮ ಆಫರ್‌ಗಳು ಬರಬಹುದು. ಜೀವನದ ಎಲ್ಲಾ ಆಯಾಮಗಳಲ್ಲೂ ಯಶಸ್ಸು ನಿಮ್ಮದಾಗಲಿದೆ.
ಗಮನಿಸಿ : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರ, ಗ್ರಹಗಳ ಚಲನೆ ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಇದನ್ನು ಕೇವಲ ಮಾಹಿತಿ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ. ಇದು ಯಾವುದೇ ವೃತ್ತಿಪರ, ಆರ್ಥಿಕ, ವೈದ್ಯಕೀಯ ಅಥವಾ ಕಾನೂನು ಸಲಹೆಯಲ್ಲ. ವೈಯಕ್ತಿಕ ಜಾತಕಗಳ ಆಧಾರದ ಮೇಲೆ ಫಲಿತಾಂಶಗಳು ಬದಲಾಗಬಹುದು. ಈ ಮಾಹಿತಿಯ ಆಧಾರದ ಮೇಲೆ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ನುರಿತ ಜ್ಯೋತಿಷಿ ಅಥವಾ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಲು ವಿನಂತಿಸುತ್ತೇವೆ.
