Stray Dog Nurses Calf : ಹಸುವಿನ ಕರುವಿಗೆ ಹಾಲೂಡಿಸಿ ತಾಯಿಯಾದ ಬೀದಿ ನಾಯಿ! ನೆಟ್ಟಿಗರ ಮನ ಗೆದ್ದ ಅಪರೂಪದ ಮಾತೃಪ್ರೇಮ…!

ಸಾಮಾಜಿಕ ಜಾಲತಾಣಗಳಲ್ಲಿ (Social Media) ಪ್ರತಿದಿನ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವು ವಿಡಿಯೋಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ, ಇನ್ನು ಕೆಲವು ನಮ್ಮ ಕಣ್ಣಲ್ಲಿ ನೀರು ತರಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಮಾನವೀಯತೆ ಎಂಬುದು ಮರೆಯಾಗುತ್ತಿರುವ ಈ ಸಮಾಜದಲ್ಲಿ, ಮೂಗಜೀವಿಗಳು ತೋರಿಸುವ (Stray Dog Nurses Calf) ಪ್ರೀತಿ-ವಾತ್ಸಲ್ಯ ನಿಜಕ್ಕೂ ಪ್ರತಿಯೊಬ್ಬರ ಕಣ್ಣು ತೆರೆಸುವಂತಿದೆ. ಪ್ರಸ್ತುತ ಅಂತಹದ್ದೇ ಒಂದು ಅದ್ಭುತ ಮತ್ತು ಭಾವುಕ ವೈರಲ್ ವಿಡಿಯೋ ನೆಟ್ಟಿಗರ ಹೃದಯ ಗೆಲ್ಲುತ್ತಿದೆ.

Stray Dog Nurses Calf in Heartwarming Viral Video

Stray Dog Nurses Calf – ಮಾನವೀಯತೆ ಮರೆತ ಮನುಷ್ಯ, ಪ್ರೀತಿ ಮೆರೆದ ಮೂಕಜೀವಿ!

ಇಂದಿನ ಕಾಲಘಟ್ಟದಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಕೊಲೆ, ಆಸ್ತಿಗಾಗಿ ಜಗಳ, ಸ್ವಂತ ಮಕ್ಕಳ ಮೇಲೆಯೇ ದೌರ್ಜನ್ಯ ಎಸಗುವ ಕಠೋರ ಸುದ್ದಿಗಳನ್ನು ನಾವು ನಿತ್ಯವೂ ನೋಡುತ್ತಿದ್ದೇವೆ. ನವಮಾಸ ಹೊತ್ತು ಹೆತ್ತ ತಾಯಿಯೇ ಮಗುವನ್ನು ರಸ್ತೆಯಲ್ಲಿ ಎಸೆದು ಹೋಗುವ ಘಟನೆಗಳೂ ನಡೆಯುತ್ತಿವೆ. ಆದರೆ, ಮನುಷ್ಯರಲ್ಲಿ ಕ್ಷೀಣಿಸುತ್ತಿರುವ ಈ ಕರುಣೆ ಮತ್ತು ಮಾತೃಪ್ರೇಮ ಮೂಗಜೀವಿಗಳಲ್ಲಿ ಇಂದಿಗೂ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ತನ್ನ ತಳಿ/ಜಾತಿಯ ವೈರತ್ವವನ್ನೂ ಮರೆತು, (Stray Dog Nurses Calf) ಮತ್ತೊಂದು ಜೀವಿಗೆ ಆಸರೆಯಾಗುವ ಗುಣ ಪ್ರಾಣಿಗಳಲ್ಲಿ ಎಷ್ಟೋ ಬಾರಿ ಸಾಬೀತಾಗಿದೆ. Read this also : ಕೊರೆಯುವ ಚಳಿಯಲ್ಲೂ ಮಾಲೀಕನ ಶವ ಕಾದ ನಾಯಿ : ಹಿಮಾಚಲದ ಈ ಮನಕಲಕುವ ಕಥೆ ನಿಮ್ಮ ಕಣ್ಣಾಲಿಗಳನ್ನು ತೇವಗೊಳಿಸುತ್ತೆ!

ಹಸುವಿನ ಕರುವಿಗೆ ಆಸರೆಯಾದ ಶ್ವಾನ: ವಿಡಿಯೋದಲ್ಲೇನಿದೆ?

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, (Viral Video Link Here) ಹಸುವಿನ ಸಣ್ಣ ಕರುವೊಂದು ಬಹುಶಃ ತನ್ನ ತಾಯಿಯಿಂದ ಬೇರ್ಪಟ್ಟು ಅಥವಾ ಅತಿಯಾದ ಹಸಿವಿನಿಂದ ಕಂಗಾಲಾಗಿ ರಸ್ತೆಯಲ್ಲಿದ್ದ ಬೀದಿ ನಾಯಿಯ ಬಳಿ ಬರುತ್ತದೆ. ಕರುವು ಹಸಿವಿನಿಂದ ನಾಯಿಯ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯಲು ಪ್ರಾರಂಭಿಸುತ್ತದೆ. ಆಶ್ಚರ್ಯವೆಂದರೆ, ಆ ಬೀದಿ ನಾಯಿ ತನ್ನ ಸ್ವಂತ ಮಗುವೇ ಹಾಲು ಕುಡಿಯುತ್ತಿದೆ ಎಂಬಂತೆ ಸ್ವಲ್ಪವೂ ಅಲ್ಲಾಡದೆ ಶಾಂತವಾಗಿ ನಿಂತುಕೊಳ್ಳುತ್ತದೆ. ಕರುವು ತನ್ನ ಹೊಟ್ಟೆ ತುಂಬುವವರೆಗೆ ನಿರಾತಂಕವಾಗಿ ಹಾಲು ಕುಡಿಯುತ್ತದೆ.

Stray Dog Nurses Calf in Heartwarming Viral Video

ತಾಯ್ತನಕ್ಕೆ ಯಾವುದೇ ಗಡಿಗಳಿಲ್ಲ!

ತಾಯಿಯ ಪ್ರೀತಿಗೆ ಈ ಜಗತ್ತಿನಲ್ಲಿ ಯಾವುದೂ ಸಾಟಿಯಿಲ್ಲ. ಅದು (Stray Dog Nurses Calf) ಮನುಷ್ಯರಾಗಲಿ ಅಥವಾ ಮೂಗಜೀವಿಗಳಾಗಲಿ—ತಾಯ್ತನದ ಭಾವನೆ ಒಂದೇ. ಆ ಶ್ವಾನವು ಕರುವನ್ನು ತನ್ನದೇ ಮಗುವಿನಂತೆ ಭಾವಿಸಿ ಹಾಲು ಕುಡಿಸಿದ ದೃಶ್ಯ ಪ್ರತಿಯೊಬ್ಬರ ಗುಂಡಿಗೆಯನ್ನು ಹಿಂಡುವಂತಿದೆ. ಈ ಸುಂದರ ಹಾಗೂ ಭಾವುಕ ಕ್ಷಣವನ್ನು ಅಲ್ಲಿದ್ದ ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಇಂಟರ್ನೆಟ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾವಿರಾರು ಜನರು ಇದನ್ನು ವೀಕ್ಷಿಸಿದ್ದು, ಬೀದಿ ನಾಯಿಯ ಮಾತೃಪ್ರೇಮಕ್ಕೆ ಶಹಬ್ಬಾಸ್ ಎಂದಿದ್ದಾರೆ.

Stray Dog Nurses Calf in Heartwarming Viral Video

ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗಿ ಈ ಕೆಳಗಿನಂತೆ ಕಾಮೆಂಟ್ ಮಾಡುತ್ತಿದ್ದಾರೆ:

  • ಇಂದಿನ ಕಾಲದಲ್ಲಿ ಮನುಷ್ಯರು ಒಬ್ಬರಿಗೊಬ್ಬರು ಮೋಸ ಮಾಡಲು, ಕಾಲು ಎಳೆಯಲು ಕಾಯುತ್ತಿರುವಾಗ, ಮೂಗಜೀವಿಗಳೇ ಮನುಷ್ಯರಿಗಿಂತ ಎಷ್ಟೋ ಮೇಲು!”
  • ತಾಯ್ತನ ಮತ್ತು ಕರುಣೆಗೆ ಯಾವುದೇ ಜಾತಿ, ತಳಿ  (Stray Dog Nurses Calf) ಅಥವಾ ಗಡಿಗಳಿಲ್ಲ ಎಂಬುದನ್ನು ನಾಯಿ ಸಾಬೀತುಪಡಿಸಿದೆ.”

ಈ ದೃಶ್ಯವು ಇಂದಿನ ಸ್ವಾರ್ಥಿ ಸಮಾಜಕ್ಕೆ ಪ್ರಾಣಿಗಳು ಕಲಿಸಿದ ದೊಡ್ಡ ಪಾಠವೆಂದರೆ ಖಂಡಿತ ತಪ್ಪಾಗಲಾರದು.

Leave a Comment

Your email address will not be published. Required fields are marked *

Scroll to Top