ನಿಮ್ಮ ಕಚೇರಿ ಅಥವಾ ಶಾಲಾ-ಕಾಲೇಜುಗಳ ಸರ್ಕಾರಿ ಕಾರ್ಯಕ್ರಮಗಳಲ್ಲಿ ಇನ್ಮುಂದೆ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಗಳನ್ನು ಹಾಡುವಾಗ ಪ್ರಮುಖ ಬದಲಾವಣೆಯೊಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ಕೇಂದ್ರ ಗೃಹ ಸಚಿವಾಲಯವು (MHA) ಇತ್ತೀಚೆಗೆ ರಾಷ್ಟ್ರಗೀತೆ ‘ಜನಗಣಮನ’ ಮತ್ತು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ (Vande Mataram) ಕುರಿತಾಗಿ ಮಹತ್ವದ ಹೊಸ ಆದೇಶವೊಂದನ್ನು ಹೊರಡಿಸಿದೆ. ಹಾಗಾದರೆ ಈ ಹೊಸ ನಿಯಮವೇನು? ಗೀತೆಗಳನ್ನು ಹಾಡುವ ಸರಿಯಾದ ಕ್ರಮ ಯಾವುದು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

Vande Mataram – ಗೀತೆಗಳನ್ನು ಹಾಡುವ ಹೊಸ ಅನುಕ್ರಮ
ಇಷ್ಟು ದಿನ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡುಗಳ ಆಯ್ಕೆ ಮತ್ತು ಕ್ರಮದ ಬಗ್ಗೆ ಸ್ವಲ್ಪ ಗೊಂದಲಗಳಿದ್ದವು. ಆದರೆ ಈಗ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇನ್ನು ಮುಂದೆ ಯಾವುದೇ ಸರ್ಕಾರಿ ಅಧಿಕೃತ ಕಾರ್ಯಕ್ರಮಗಳಲ್ಲಿ ಮೊದಲು ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ ಹಾಡಬೇಕು ಅಥವಾ ಪ್ಲೇ ಮಾಡಬೇಕು. ಅದರ ನಂತರವೇ ರಾಷ್ಟ್ರಗೀತೆಯಾದ (National Anthem) ‘ಜನಗಣಮನ’ ಪ್ಲೇ ಮಾಡಬೇಕು.
ಯಾವಾಗಲೆಲ್ಲಾ ಈ ಗೀತೆಗಳನ್ನು ಬಳಸಲಾಗುತ್ತದೆಯೋ, ಆಗ ಅವೆರಡನ್ನೂ ಜೊತೆಯಾಗಿಯೇ ಪ್ಲೇ ಮಾಡುವುದು ಕಡ್ಡಾಯ. ಅಂದರೆ, ವಂದೇ ಮಾತರಂ ಮುಗಿದ ತಕ್ಷಣವೇ ಜನಗಣಮನ ಶುರುವಾಗಬೇಕು.
ಕರ್ನಾಟಕದಲ್ಲಿ ಹೇಗಿರಲಿದೆ ಈ ನಿಯಮ?
ರಾಜ್ಯ ಸರ್ಕಾರದ ಕಾರ್ಯಕ್ರಮಗಳಾಗಿದ್ದರೆ, ಮೊದಲು ರಾಜ್ಯ ಗೀತೆ (ನಾಡಗೀತೆ) ಹಾಡಬೇಕು. ನಮ್ಮ ಕರ್ನಾಟಕದ ವಿಚಾರಕ್ಕೆ ಬಂದರೆ, ಕಾರ್ಯಕ್ರಮದ ಆರಂಭದಲ್ಲಿ ಈ ಕೆಳಗಿನ ಕ್ರಮವನ್ನು (Vande Mataram) ಕಡ್ಡಾಯವಾಗಿ ಪಾಲಿಸಬೇಕು:
- ಮೊದಲು: ನಾಡಗೀತೆ ‘ಜೈ ಭಾರತ ಜನನಿಯ ತನುಜಾತೆ’
- ಎರಡನೇಯದಾಗಿ: ರಾಷ್ಟ್ರೀಯ ಗೀತೆ ‘ವಂದೇ ಮಾತರಂ’
- ಕೊನೆಯದಾಗಿ: ರಾಷ್ಟ್ರಗೀತೆ ‘ಜನಗಣಮನ’
ಸಾಹಿತ್ಯ ಮತ್ತು ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಮಾಡುವಂತಿಲ್ಲ!
ಕೇವಲ ಹಾಡುವ ಕ್ರಮವನ್ನಷ್ಟೇ ಅಲ್ಲ, ಹಾಡುವ ಗುಣಮಟ್ಟದ ಕಡೆಗೂ ಸರ್ಕಾರ ವಿಶೇಷ ಗಮನ ಹರಿಸಿದೆ. ರಾಷ್ಟ್ರಗೀತೆ ಹಾಗೂ ರಾಷ್ಟ್ರೀಯ ಗೀತೆಯನ್ನು ಹಾಡುವಾಗ ಅದರ ಮೂಲ ಸಾಹಿತ್ಯ (Vande Mataram) ಮತ್ತು ಉಚ್ಚಾರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಯಾವುದೇ ಕಾರಣಕ್ಕೂ ಪದಗಳ ಉಚ್ಚಾರಣೆಯಲ್ಲಿ ತಪ್ಪುಗಳಾಗಬಾರದು ಎಂದು ಎಚ್ಚರಿಸಲಾಗಿದೆ.

ಸರಿಯಾದ ಮಾಹಿತಿಗಾಗಿ ಗೃಹ ಸಚಿವಾಲಯದ ವೆಬ್‌ಸೈಟ್ ಲಭ್ಯ
ಅಧಿಕಾರಿಗಳಿಗೆ, ಸಂಘ-ಸಂಸ್ಥೆಗಳಿಗೆ ಮತ್ತು ಶಾಲಾ-ಕಾಲೇಜುಗಳಿಗೆ ಅನುಕೂಲವಾಗುವಂತೆ, ಗೀತೆಗಳ ಅಧಿಕೃತ ಸಾಹಿತ್ಯ ಮತ್ತು ಅದರ ನಿಖರವಾದ ಉಚ್ಚಾರಣೆಯ ಆಡಿಯೋ/ಮಾರ್ಗದರ್ಶನವನ್ನು ಕೇಂದ್ರ ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಗೊಂದಲವಿದ್ದರೆ ಅಲ್ಲಿ ಪರಿಶೀಲಿಸಬಹುದು. Read this also : ವಾಟ್ಸಾಪ್ ಗೆ ಬಂತು ಆಯುಷ್ಮಾನ್ ಭಾರತ್ ಸೇವೆ: ‘ಆಯುಷ್ಮಾನ್ ಸಾರಥಿ’ (Ayushman Saarthi)ಯಿಂದಾಗಿ ಇನ್ಮುಂದೆ ಎಲ್ಲವೂ ಸುಲಭ!
ಸಂಬಂಧಿಸಿದ ಪೋಸ್ಟ್ ಇಲ್ಲಿದೆ ನೋಡಿ : Click Here
ಯಾವೆಲ್ಲಾ ಸಂದರ್ಭಗಳಲ್ಲಿ ಈ ನಿಯಮ ಕಡ್ಡಾಯ?
ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯನ್ನು ಎಲ್ಲೆಲ್ಲಿ ಕಡ್ಡಾಯವಾಗಿ ಬಳಸಬೇಕು ಎಂಬುದರ ಒಂದು ಸಮಗ್ರ ಪಟ್ಟಿಯನ್ನು ಕೂಡ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ:
- ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರ ಭೇಟಿ: ಸರ್ಕಾರಿ ಸಮಾರಂಭಗಳಿಗೆ ರಾಷ್ಟ್ರಪತಿಗಳು, ರಾಜ್ಯಪಾಲರು ಅಥವಾ ಲೆಫ್ಟಿನೆಂಟ್ ಗವರ್ನರ್‌ಗಳು ಆಗಮಿಸುವಾಗ ಮತ್ತು ನಿರ್ಗಮಿಸುವಾಗ.
- ಪ್ರಶಸ್ತಿ ಪ್ರದಾನ: ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ.
- ಭಾಷಣದ ಸಂದರ್ಭದಲ್ಲಿ: ದೂರದರ್ಶನ (Vande Mataram) ಮತ್ತು ಆಕಾಶವಾಣಿ (ರೇಡಿಯೋ) ಮೂಲಕ ರಾಷ್ಟ್ರಪತಿಗಳು ದೇಶವನ್ನುದ್ದೇಶಿಸಿ ಮಾತನಾಡುವ ಮುನ್ನ ಮತ್ತು ಮಾತನಾಡಿದ ನಂತರ.
- ಪರೇಡ್‌ಗಳು: ಪರೇಡ್ ಸಮಯದಲ್ಲಿ ರಾಷ್ಟ್ರಧ್ವಜವನ್ನು ತರುವಾಗ.
- ಇತರೆ ಯಾವುದೇ ವಿಶೇಷ ಸಂದರ್ಭಗಳಿಗಾಗಿ ಭಾರತ ಸರ್ಕಾರ ಹೊರಡಿಸುವ ಆದೇಶದ ಮೇರೆಗೆ.
ಗಮನಿಸಿ: ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯನ್ನು (Vande Mataram) ಹಾಡುವಾಗ ಅಥವಾ ನುಡಿಸುವಾಗ ಇಡೀ ಸಭೆಯಲ್ಲಿರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಎದ್ದು ನಿಂತು ಸಾವಧಾನ (Attention) ಸ್ಥಿತಿಯಲ್ಲಿ ಗೌರವ ಸಲ್ಲಿಸಬೇಕು.
ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು (UT) ತಮ್ಮ ವ್ಯಾಪ್ತಿಗೆ ಬರುವ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಮತ್ತು ಸಂಘ-ಸಂಸ್ಥೆಗಳಿಗೆ ಈ ನೂತನ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಕೇಂದ್ರ ಗೃಹ ಸಚಿವಾಲಯ ಖಡಕ್ ಸೂಚನೆ ನೀಡಿದೆ.
