Wife Lover Murder Haryana : ಹೆಂಡತಿಯ ಕಳ್ಳಪ್ರೇಮಕ್ಕೆ ಬಲಿಯಾದ ಗಂಡ! ಔಷಧ ತರಲು ಹೋದ ಯುವಕ ಕಾಲುವೆಯಲ್ಲಿ ಹೆಣವಾದ ಕಥೆ!

ಸಿನಿಮಾಗಳಲ್ಲಿ ಬರೋ ಕ್ರೈಮ್ ಸ್ಟೋರಿಗಳನ್ನ ಮೀರಿಸೋ ಆಘಾತಕಾರಿ ಘಟನೆಯೊಂದು ಈಗ ನಿಜ ಜೀವನದಲ್ಲಿ ನಡೆದಿದೆ. ಸಪ್ತಪದಿ ತುಳಿದು ಜೊತೆಯಾಗಿ ಬಾಳಬೇಕಾದ ಹೆಂಡತಿಯೇ, ತನ್ನ ಪ್ರೇಮಿಗಾಗಿ (Wife Lover Murder Haryana) ಗಂಡನ ಪ್ರಾಣ ತೆಗೆದಿರೋ ಘಟನೆ ಸದ್ಯ ತಲ್ಲಣ ಸೃಷ್ಟಿಸಿದೆ. ಆರಂಭದಲ್ಲಿ ಇದೊಂದು ಸಾಮಾನ್ಯ ರಸ್ತೆ ಅಪಘಾತ ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಪೊಲೀಸರು ಈ ಕೇಸ್‌ನ ಆಳಕ್ಕೆ ಇಳಿದು ಕಾಲ್ ಡೇಟಾ ಜಾಲಾಡಿದಾಗ ಹೊರಬಂದ ಸತ್ಯ ಮಾತ್ರ ಇಡೀ ಊರನ್ನೇ ಬೆಚ್ಚಿಬೀಳಿಸಿದೆ.

Wife Lover Murder Haryana case where a newly married woman allegedly conspired with her lover to murder her husband before staging it as an accident.

Wife Lover Murder Haryana – ಕಣ್ಮರೆಯಾಗಿದ್ದ ಯುವಕ ಕಾಲುವೆಯಲ್ಲಿ ಹೆಣವಾಗಿ ಪತ್ತೆ!

ಹರಿಯಾಣದ ಜಾರ್ತಲ್ ಗ್ರಾಮದ ನಿವಾಸಿಯಾದ ಮೋನು ಎಂಬ ಯುವಕನಿಗೆ ಕೆಲ ದಿನಗಳ ಹಿಂದೆಯಷ್ಟೇ ತನ್ನು ಎಂಬ ಯುವತಿಯೊಂದಿಗೆ ಮದುವೆಯಾಗಿತ್ತು. ಜೂನ್ 8ರ ರಾತ್ರಿ ಮೋನು ಮನೆಯವರಿಂದ ಔಷಧ ತರಲು ತನ್ನ ಎಲೆಕ್ಟ್ರಿಕ್ ಸ್ಕೂಟರ್ ತಗೆದುಕೊಂಡು ಹೊರಗೆ ಹೋಗಿದ್ದ. ಆದರೆ, ಹೋದವನು ತಡರಾತ್ರಿಯಾದರೂ ಮನೆಗೆ ಮರಳಿ ಬರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ತಕ್ಷಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಕೂಡಲೇ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದ್ದರು.

ಮೊದಲು ಅಪಘಾತ ಅಂದುಕೊಂಡ ಪೊಲೀಸರು

ಜೂನ್ 10 ರಂದು ಗ್ರಾಮದ ಸಮೀಪದ ಅಸಲ್ವಾಸ್ ಕಾಲುವೆಯಲ್ಲಿ ಮೋನು ಮೃತದೇಹ ಮತ್ತು ಆತನ ಸ್ಕೂಟರ್ ಪತ್ತೆಯಾಯಿತು. ಮೇಲ್ನೋಟಕ್ಕೆ ಇದು ಸ್ಕೂಟರ್ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದು ನಡೆದ ಅಪಘಾತದಂತೆ ಕಾಣಿಸುತ್ತಿತ್ತು. ಪೊಲೀಸರು ಕೂಡ ಇದನ್ನು ಅಪಘಾತ ಎಂದೇ ಭಾವಿಸಿ ಶವಪರೀಕ್ಷೆಗೆ ಕಳುಹಿಸಿದ್ದರು. ಆದರೆ ಮೋನು (Wife Lover Murder Haryana) ಸಾವಿನ ಬಗ್ಗೆ ಕುಟುಂಬಸ್ಥರು ತೀವ್ರ ಅನುಮಾನ ವ್ಯಕ್ತಪಡಿಸಿದರು. ಕುಟುಂಬದವರ ಒತ್ತಾಯದ ಮೇರೆಗೆ ಪೊಲೀಸರು ಮೊಬೈಲ್ ಕಾಲ್ ಡೇಟಾ ಹಾಗೂ ಇಂಟೆಲಿಜೆನ್ಸ್ ನೆರವು ಪಡೆದು ತನಿಖೆ ಚುರುಕುಗೊಳಿಸಿದಾಗ ಇಡೀ ಹತ್ಯೆಯ ರಹಸ್ಯ ಹೊರಬಿದ್ದಿದೆ.

ಪ್ರೇಮಿಯೊಂದಿಗೆ ಸೇರಿ ಪತಿಯನ್ನೇ ಮುಗಿಸಲು ಹೆಂಡತಿ ತನ್ನು ಹಾಕಿದ್ದ ಮಾಸ್ಟರ್ ಪ್ಲಾನ್!

ಪೊಲೀಸರ ತನಿಖೆಯಲ್ಲಿ ತನ್ನುಗೆ ಮೋನು ಜೊತೆ ಮದುವೆ ಇಷ್ಟವಿರಲಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ. ಮದುವೆಗೆ ಮುಂಚೆಯೇ ಆಕೆಗೆ ಸೋನು ಎಂಬ ಯುವಕನೊಂದಿಗೆ ಅಫೇರ್ ಇತ್ತು. ಮದುವೆಯಾದ ಮೇಲೂ (Wife Lover Murder Haryana) ಆಕೆ ತನ್ನ ಪ್ರೇಮಿಯೊಂದಿಗೆ ರಹಸ್ಯ ಸಂಪರ್ಕದಲ್ಲಿದ್ದಳು. ತಮ್ಮ ಪ್ರೀತಿಗೆ ಗಂಡ ಮೋನು ಅಡ್ಡವಾಗಿದ್ದಾನೆ ಎಂದು ಭಾವಿಸಿದ ತನ್ನು, ಆತನನ್ನು ಜಗತ್ತಿನಿಂದಲೇ ಇಲ್ಲದಂತೆ ಮಾಡಲು ತನ್ನ ಪ್ರೇಮಿ ಸೋನು ಜೊತೆ ಸೇರಿ ಸ್ಕೆಚ್ ಹಾಕಿದ್ದಳು. Read this also : ಆಸ್ತಿ ಮತ್ತು ದ್ವೇಷಕ್ಕಾಗಿ ಸ್ವಂತ ಕುಟುಂಬದವರನ್ನೇ ಕತ್ತರಿಸಿ ಕಾರಿನಲ್ಲಿ ಸುಟ್ಟ ಪಾಪಿ ಪತ್ನಿ, ‘ಮೊಸಳೆ ಕಣ್ಣೀರು’ ಸುರಿಸಿದ ಖಿಲಾಡಿ…!

Wife Lover Murder Haryana case where a newly married woman allegedly conspired with her lover to murder her husband before staging it as an accident.

ಜೂನ್ 8ರ ರಾತ್ರಿ ಪ್ಲಾನ್ ಮುಖಾಂತರ ತನ್ನು ತನ್ನ ಗಂಡ ಮೋನುಗೆ ಫೋನ್ ಮಾಡಿ ಕಸೋಲಿ ಗ್ರಾಮಕ್ಕೆ ಬರುವಂತೆ ಹೇಳಿದ್ದಾಳೆ. ಅಲ್ಲಿ ತನ್ನು ಪ್ರೇಮಿ ಸೋನು ಮತ್ತು ಆತನ ಸ್ನೇಹಿತರಾದ ಹರಿಓಂ ಮತ್ತು (Wife Lover Murder Haryana) ಅಮನ್ ಈಗಾಗಲೇ ಹೊಂಚು ಹಾಕಿ ಕುಳಿತಿದ್ದರು. ಮೋನು ಅಲ್ಲಿಗೆ ತಲುಪುತ್ತಿದ್ದಂತೆ ಎಲ್ಲರೂ ಸೇರಿ ಆತನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಮೋನು ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದ ತಕ್ಷಣ, ಇದೊಂದು ಅಪಘಾತ ಎಂದು ಬಿಂಬಿಸಲು ಆತನನ್ನು ಸ್ಕೂಟರ್ ಸಮೇತ ಕಾಲುವೆಗೆ ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾರೆ.

ಸದ್ಯ ಪೊಲೀಸರು ಹಂತಕ ಹೆಂಡತಿ ತನ್ನು ಮತ್ತು ಆಕೆಗೆ ಕೊಲೆಯಲ್ಲಿ ಸಹಕರಿಸಿದ ಹರಿಓಂ ಎಂಬಾತನನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ತಲೆಮರೆಸಿಕೊಂಡಿರುವ ಮುಖ್ಯ ಆರೋಪಿ ಸೋನು ಮತ್ತು ಅಮನ್ ಪತ್ತೆಗಾಗಿ ಪೊಲೀಸರು ತೀವ್ರ ಜಾಲ ಬೀಸಿದ್ದಾರೆ.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? PatioTime – Restaurant WordPress Theme Multi Salon, Individual Appointments Booking System Full App Solution Flutter / Laravel / Angular Floating Contact – Floating Quick Contact WordPress Plugin Solutech – Security & CCTV WordPress Theme VicTheme Icons – WPBakery Page Builder Addon dizzy – Support Creators Content Script ProKit Flutter – Flutter UI Kit with Chat GPT App Matour – Tour & Travel Agency FSE WordPress Theme HTML5 File Upload Knowledge Base | Helpdesk | Support | Wiki WordPress Plugin