Viral Video : ಸತ್ತ ಹಾವನ್ನು ಬಾಯಿಗೆ ಹಾಕಿ ರೀಲ್ಸ್ ಮಾಡಿದ ಯುವಕ! ಆಮೇಲೇನಾಯ್ತು ಗೊತ್ತಾ? ಜೀವವೇ ಹೋಗೋ ಪರಿಸ್ಥಿತಿ!

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು, ನಾಲ್ಕು ಲೈಕ್ಸ್ ಮತ್ತು ಕಮೆಂಟ್ಸ್ ಗಿಟ್ಟಿಸಿಕೊಳ್ಳಲು ಜನ ಏನೆಲ್ಲಾ ಸರ್ಕಸ್ ಮಾಡ್ತಾರೆ ಅಲ್ವಾ? ಕೆಲವೊಮ್ಮೆ ಈ ಹುಚ್ಚಾಟಗಳು ಪ್ರಾಣಕ್ಕೇ ಕುತ್ತು ತರುತ್ತವೆ. ಸದ್ಯ ಉತ್ತರ ಪ್ರದೇಶದಲ್ಲಿ ಇಂಥದ್ದೇ ಒಂದು ಶಾಕಿಂಗ್ ( Viral Video) ಘಟನೆ ನಡೆದಿದೆ. ಸತ್ತ ಹಾವಿನೊಂದಿಗೆ ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ಈಗ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.

Viral Video showing a young man putting a dead snake in his mouth while filming a social media reel before being hospitalized.

Viral Video – ಸತ್ತ ಹಾವಿನೊಂದಿಗೆ ಸ್ಟಂಟ್, ಬಿಲ್ಡಪ್!

ಉತ್ತರ ಪ್ರದೇಶದ ಸಲೀಂ ಎಂಬ ಯುವಕನಿಗೆ ದಾರಿಯಲ್ಲಿ ಒಂದು ಸತ್ತ ಹಾವು ಸಿಕ್ಕಿದೆ. “ಹೇಗೂ ಇದು ಸತ್ತು ಹೋಗಿದೆ, ಇದರಲ್ಲಿ ಏನ್ ವಿಷ ಇರುತ್ತೆ ಬಿಡು” ಎಂದುಕೊಂಡ ಸಲೀಂ, ಅದನ್ನೇ ಬಂಡವಾಳ ಮಾಡಿಕೊಂಡು ರೀಲ್ಸ್ ಮಾಡಲು ಪ್ಲಾನ್ ಮಾಡಿದ್ದಾನೆ. ತಾನು ಬದುಕಿರುವ ಹಾವನ್ನೇ ಹಿಡಿದಿದ್ದೇನೆ ಎಂಬ ರೇಂಜ್‌ಗೆ ಬಿಲ್ಡಪ್ ಕೊಡಲು ಶುರು ಮಾಡಿದ್ದಾನೆ. Read this also : ಹಾವಿಗೆ ‘ಕಿಸ್’ ಕೊಡಲು ಹೋದ ಯುವತಿ! ಮೂಗಿಗೇ ಕಚ್ಚಿ ಬುದ್ಧಿ ಕಲಿಸಿದ ಹಾವು, ನಿನಗಿದು ಬೇಕಿತ್ತಾ ಎಂದ ನೆಟ್ಟಿಗರು….!

ಅಷ್ಟಕ್ಕೇ ನಿಲ್ಲದ ಆತನ ಹುಚ್ಚಾಟ, ಹಾವನ್ನು ಕುತ್ತಿಗೆಗೆ ಹಾಕಿಕೊಂಡು ಪೋಸ್ ಕೊಟ್ಟಿದ್ದಾನೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಆ ಸತ್ತ ಹಾವನ್ನು ತನ್ನ ಬಾಯಿಗೆ ಹಾಕಿಕೊಂಡು ಹಲ್ಲಿನಿಂದ ಕಚ್ಚಿದಂತೆ ನಟಿಸುತ್ತಾ ರೀಲ್ಸ್ ಮಾಡಿದ್ದಾನೆ.

ರೀಲ್ಸ್ ಮುಗಿಯುತ್ತಿದ್ದಂತೆ ಆಸ್ಪತ್ರೆಗೆ ದಾಖಲು!

ಯಾವಾಗ ಸತ್ತ ಹಾವನ್ನು ಬಾಯಿಯಲ್ಲಿ ಇಟ್ಟುಕೊಂಡು ಸಲೀಂ ರೀಲ್ಸ್ ಮುಗಿಸಿದನೋ, ಅದಾದ ಕೆಲವೇ ಹೊತ್ತಿನಲ್ಲಿ ಆತನಿಗೆ ತೀವ್ರ ಅಸ್ವಸ್ಥತೆ ಕಾಣಿಸಿಕೊಂಡಿದೆ. ತಕ್ಷಣವೇ ಗಾಬರಿಯಾದ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವೈದ್ಯರು ಹೇಳಿದ್ದೇನು?: ಸಲೀಂ ಹಾವನ್ನು ಹಲ್ಲಿನಿಂದ ಕಚ್ಚಿದಾಗ, ಆ ಸತ್ತ ಹಾವಿನಲ್ಲಿದ್ದ ವಿಷವು ಆತನ ಹಲ್ಲು ಹಾಗೂ ಒಸಡುಗಳ ಮೂಲಕ ದೇಹವನ್ನು ಪ್ರವೇಶಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಾವು ಸತ್ತಿದ್ದರೂ ಅದರ ವಿಷದ ಗ್ರಂಥಿಗಳು ಹಾಗೇ ಇರುತ್ತವೆ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಮಾಡಿದ ಈ ಕೆಲಸ ಆತನನ್ನು ಅಪಾಯಕ್ಕೆ ತಳ್ಳಿದೆ.

Viral Video showing a young man putting a dead snake in his mouth while filming a social media reel before being hospitalized.

ಐಸಿಯುನಲ್ಲಿ ಯುವಕ: ನೆಟ್ಟಿಗರ ಆಕ್ರೋಶ

ಸದ್ಯ ಸಲೀಂ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು, ಆತನನ್ನು ಐಸಿಯುನಲ್ಲಿ (ICU) ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಈತ ಮಾಡಿದ ರೀಲ್ಸ್ ವಿಡಿಯೋ (Viral Video Link Here) ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಯುವಕನ ಹುಚ್ಚಾಟದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಲೈಕ್ಸ್ ಮತ್ತು ವ್ಯೂಸ್ ಇಷ್ಟೊಂದು ಮುಖ್ಯನಾ?”, “ಈಗ ಬುದ್ಧಿ ಬಂತಾ?” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ನಮ್ಮ ಮನವಿ: ದಯವಿಟ್ಟು ಇಂತಹ ಅಪಾಯಕಾರಿ ರೀಲ್ಸ್ ಅಥವಾ ಸ್ಟಂಟ್‌ಗಳನ್ನು ಮಾಡಲು ಹೋಗಬೇಡಿ. ಪ್ರಾಣಕ್ಕಿಂತ ಸೋಶಿಯಲ್ ಮೀಡಿಯಾ ದೊಡ್ಡದಲ್ಲ!

Leave a Comment

Your email address will not be published. Required fields are marked *

Scroll to Top