Woman Kissing Cobra : ಮೈ ಜುಮ್ ಅನ್ನಿಸುವ ವಿಡಿಯೋ: ಪ್ರಾಣಾಂತಿಕ ನಾಗರಹಾವಿಗೆ ಪ್ರಿಯಕರನಂತೆ ಮುತ್ತಿಟ್ಟ ಯುವತಿ..!

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಏನೆಲ್ಲಾ ಸರ್ಕಸ್ ಮಾಡ್ತಾರೆ ಅಲ್ವಾ? ಕೆಲವರಂತೂ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಡೇಂಜರಸ್ ಸ್ಟಂಟ್ ಮತ್ತು ರೀಲ್ಸ್ (Woman Kissing Cobra) ಮಾಡ್ತಿದ್ದಾರೆ. ಕಾಡುಪ್ರಾಣಿಗಳ ಜೊತೆ, ಎತ್ತರದ ಬೆಟ್ಟಗಳು ಹಾಗೂ ಜಲಪಾತಗಳ ಬಳಿ ಹೋಗಿ ಅಪಾಯಕಾರಿ ವಿಡಿಯೋ ಮಾಡುವುದು ಈಗೀಗ ಕಾಮನ್ ಆಗಿಬಿಟ್ಟಿದೆ.

Woman kissing a cobra during a dangerous viral social media stunt captured on video.

ಅದರಲ್ಲೂ ಹಾವಿನ ಜೊತೆಗಿನ ವಿಡಿಯೋಗಳು ನೆಟ್ಟಿಗರ ಗಮನವನ್ನು ಬೇಗ ಸೆಳೆಯುತ್ತವೆ. ಹಾವಿನ ಜೊತೆ ರೀಲ್ಸ್ ಮಾಡಿದ್ರೆ ರಾತ್ರೋರಾತ್ರಿ ಫೇಮಸ್ ಆಗಬಹುದು ಅನ್ನೋದು ಕೆಲವರ ಲೆಕ್ಕಾಚಾರ. ಇದೇ ರೀತಿ ಯುವತಿಯೊಬ್ಬಳು ನಾಗರಹಾವಿನ ಜೊತೆ ಮಾಡಿದ ಆಟ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ.

Woman Kissing Cobra – ಪ್ರಾಣದ ಹಂಗು ತೊರೆದು ರೀಲ್ಸ್

ಇಲ್ಲೊಬ್ಬ ಯುವತಿ ಅತ್ಯಂತ ಅಪಾಯಕಾರಿ ನಾಗರಹಾವಿನ (Cobra) ಜೊತೆ ಡೆಡ್ಲಿ ಸ್ಟಂಟ್ ಮಾಡಿದ್ದಾಳೆ. ಆಕೆ ಆ ಹಾವನ್ನು ಚಿಕ್ಕಂದಿನಿಂದಲೇ ಸಾಕಿ ಬೆಳೆಸಿದ್ದಾಳೋ ಏನೋ ಗೊತ್ತಿಲ್ಲ, ಆದರೆ ಆಕೆ ಕೈಚಾಚಿದ ತಕ್ಷಣ ಆ ನಾಗರಹಾವು ಸುಲಭವಾಗಿ ಆಕೆಯ ಕೈಗೆ ಬಂದಿದೆ. ಅಷ್ಟೇ ಅಲ್ಲ, ತನ್ನ ಬಾಯ್‌ಫ್ರೆಂಡ್ ಅನ್ನು ಅಪ್ಪಿಕೊಳ್ಳುವಂತೆ ಆಕೆ ಆ ಹಾವನ್ನು ಬಹಳ ಪ್ರೀತಿಯಿಂದ ತಬ್ಬಿಕೊಂಡಿದ್ದಾಳೆ!

ನಾಗರಹಾವಿಗೆ ಲಿಪ್‌ಲಾಕ್: ಬಾಯ್‌ಫ್ರೆಂಡ್ ರೀತಿ ಅಪ್ಪುಗೆ!

ಯುವತಿ ಆ ಹಾವನ್ನು ಗಟ್ಟಿಯಾಗಿ ತನ್ನ ಎದೆಗೆ ಅಪ್ಪಿಕೊಂಡರೂ ಅದು ಸ್ವಲ್ಪವೂ ಬುಸುಗುಟ್ಟದೆ, ಯಾವುದೇ ಕೋಪ ತೋರದೆ ಸೈಲೆಂಟ್ ಆಗಿತ್ತಂತೆ. ಬಹುಶಃ ಅದು ‘ಗಂಡು ಹಾವು’ ಇರಬಹುದು ಎಂದು ವಿಡಿಯೋ ನೋಡಿದವರು ತಮಾಷೆ ಮಾಡ್ತಿದ್ದಾರೆ. ಯುವತಿಯಂತೂ ಯಾವುದೇ ಭಯವಿಲ್ಲದೆ ಆ ಹಾವನ್ನು ಹಿಡಿದುಕೊಂಡು ಡೆಡ್ಲಿ ‘ಲಿಪ್‌ಲಾಕ್’ (Woman Kissing Cobra) ಮಾಡಿದ್ದಾಳೆ. ಹಾವಿಗೆ ಮುತ್ತಿನ ಸುರಿಮಳೆಯನ್ನೇ ಗೈದಿದ್ದಾಳೆ. ಅಚ್ಚರಿ ಅಂದ್ರೆ, ಆ ನಾಗರಹಾವು ಕೂಡ ಆಕೆಯ ಮುತ್ತುಗಳನ್ನು ಸುಮ್ಮನೆ ಸ್ವೀಕರಿಸಿದೆ.

ನೆಟ್ಟಿಗರ ಶಾಕ್: ಕಚ್ಚಿದ್ರೆ ಕಥೆ ಮುಗೀತು!

ಹಾವು ಸ್ವಲ್ಪವೂ ಕೋಪಗೊಳ್ಳದೆ ಆಕೆಗೆ ಫುಲ್ ಕೋ-ಆಪರೇಟ್ ಮಾಡಿದೆ. ಈ ದೃಶ್ಯವನ್ನು ಅಲ್ಲಿದ್ದವರು ವಿಡಿಯೋ ಮಾಡಿದ್ದು, ಈಗ ಇದು ಇಂಟರ್‌ನೆಟ್‌ನಲ್ಲಿ ಬೆಂಕಿಯಂತೆ ವೈರಲ್ ಆಗ್ತಿದೆ. ಈ ವಿಡಿಯೋ (Video Link Here) ನೋಡಿದ ನೆಟ್ಟಿಗರು ಅಕ್ಷರಶಃ ದಂಗಾಗಿದ್ದಾರೆ.

Woman kissing a cobra during a dangerous viral social media stunt captured on video.

ಒಟ್ಟಿನಲ್ಲಿ ಆಕೆ ತನ್ನ ಪ್ರಿಯಕರನಿಗೆ ಅಥವಾ (Woman Kissing Cobra) ಗಂಡನಿಗೆ ಮುತ್ತು ಕೊಡುವಂತೆ ನಾಗರಹಾವಿಗೆ ಮುತ್ತು ಕೊಟ್ಟಿರುವುದು ಎಲ್ಲರನ್ನೂ ಬೆಚ್ಚಿಬೀಳಿಸುವ ಜೊತೆಗೆ, ಒಮ್ಮೆ ಮೈಜುಮ್ ಅನ್ನಿಸುವಂತೆ ಮಾಡಿದೆ.

Leave a Comment

Your email address will not be published. Required fields are marked *

Scroll to Top