Man Kicks Snake : ನಿನ್ನ ಧೈರ್ಯಕ್ಕೊಂದು ಸಲಾಂ ಗುರು! ಹಾವಿನ ಜೊತೆ ಫುಟ್‌ಬಾಲ್ ಆಡಿದ ಕಿಲಾಡಿ.. ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!

ಕಣ್ಣೆದುರಿಗೆ ಹಗ್ಗ ಕಂಡರೂ ಹಾವು ಎಂದು ಬೆಚ್ಚಿಬೀಳುವವರೇ ಹೆಚ್ಚು. ಇನ್ನು ಅಪ್ಪಿತಪ್ಪಿ ದಾರಿಯಲ್ಲಿ ನಿಜವಾದ ಹಾವು ಎದುರಾದರೆ ನಮ್ಮ ಪರಿಸ್ಥಿತಿ ಹೇಗಿರಬೇಡ? ಖಂಡಿತ ಅಲ್ಲಿಂದ ಒಂದೇ ಉಸಿರಿಗೆ ಓಟ ಕಿಳುತ್ತೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಮಾತ್ರ ತನ್ನತ್ತ ಬುಸುಗುಡುತ್ತಾ ಬಂದ ಭಾರಿ ಗಾತ್ರದ ಹಾವಿಗೆ ಚೂರು ಕೂಡ ಹೆದರದೆ, ಅದರ ಜೊತೆ ಫುಟ್ಬಾಲ್ ಆಟವಾಡಿದ್ದಾನೆ! ಕೇಳಲು ಆಶ್ಚರ್ಯವಾದರೂ ಇದು ನೂರಕ್ಕೆ ನೂರು ಸತ್ಯ. ಹಾವಿನ (Man Kicks Snake) ಜೊತೆಗಿನ ಈತನ ‘ಫುಟ್ಬಾಲ್ ಫೈಟ್’ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ.

Man Kicks Snake video 1

Man Kicks Snake – ಗದ್ದೆಯಲ್ಲಿ ಶುರುವಾಯ್ತು ಪ್ರಾಣಸಂಕಟ!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಭಯಾನಕ ಘಟನೆ ವಿಯೆಟ್ನಾಂನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪಾಡಿಗೆ ತಾನು ಗದ್ದೆಯ ಬದುವಿನ ಮೇಲೆ ನಿಂತಿದ್ದ. ಆ ಕ್ಷಣದಲ್ಲಿಯೇ ಗದ್ದೆಯ ಕೆಳಗಿನಿಂದ ದೊಡ್ಡ ಹಾವೊಂದು ದಿಢೀರನೆ ಅವನ ಮೇಲೆರಗಲು ಬಂದಿದೆ. ಪ್ರಾಣ ಭಯದಿಂದ ಯಾರಾದರೂ ಅಲ್ಲಿಂದ ಓಟ ಕಿಳುತ್ತಾರೆ. ಆದರೆ ಈ ಗಟ್ಟಿ ಗುಂಡಿಗೆಯ ವ್ಯಕ್ತಿ, ಹಾವು ಕಚ್ಚಲು ಹತ್ತಿರ ಬರುತ್ತಿದ್ದಂತೆಯೇ ತನ್ನ ಬಲಗಾಲಿನಿಂದ ಅದಕ್ಕೆ ಒದ್ದೇ ಬಿಟ್ಟ. Read this also : ಹಾವಿಗೆ ‘ಕಿಸ್’ ಕೊಡಲು ಹೋದ ಯುವತಿ! ಮೂಗಿಗೇ ಕಚ್ಚಿ ಬುದ್ಧಿ ಕಲಿಸಿದ ಹಾವು, ನಿನಗಿದು ಬೇಕಿತ್ತಾ ಎಂದ ನೆಟ್ಟಿಗರು….!

ರೊಚ್ಚಿಗೆದ್ದ ಹಾವು, ಬೆಚ್ಚದ ಮನುಷ್ಯ!

ಒದೆ ತಿಂದ ಹಾವು ಸುಮ್ಮನಾಯಿತೇ? ಖಂಡಿತ ಇಲ್ಲ. ಅದರ ಕೋಪ ನೆತ್ತಿಗೇರಿತ್ತು. ಹಿಂದಿಗಿಂತಲೂ ಹೆಚ್ಚಿನ ವೇಗದಲ್ಲಿ, ರೊಚ್ಚಿಗೆದ್ದು ಬುಸುಗುಡುತ್ತಾ ಮತ್ತೆ ಆತನ ಮೇಲೆ ದಾಳಿ ಮಾಡಲು ಮುಂದಾಗಿದೆ. ಆದರೆ ಈ ವ್ಯಕ್ತಿ ಚೂರು ಕೂಡ ವಿಚಲಿತನಾಗದೆ, ಎರಡನೇ ಬಾರಿಯೂ ಹಾವನ್ನು ಗಾಳಿಯಲ್ಲೇ ‘ಫುಟ್ಬಾಲ್’ ಒದ್ದಂತೆ ಒದ್ದಿದ್ದಾನೆ. ಹಾವು ಮತ್ತೆ ಮತ್ತೆ (Man Kicks Snake) ಕಚ್ಚಲು ನುಗ್ಗಿ ಬರುವುದು… ಇವನು ಅದಕ್ಕೆ ತಕ್ಕ ಹಾಗೆ ಕಿಕ್ ಕೊಡುವುದು… ಈ ದೃಶ್ಯಾವಳಿಗಳನ್ನು ವಿಡಿಯೋದಲ್ಲಿ ನೋಡುತ್ತಿದ್ದರೆ ವೀಕ್ಷಕರಿಗೆ ಎದೆಬಡಿತ ಹೆಚ್ಚಾಗುವುದು ಖಂಡಿತ.

ನೆಟ್ಟಿಗರ ಕಮೆಂಟ್ಸ್ ಹೇಗಿದೆ ಗೊತ್ತಾ?

ಅಲ್ಲಿಯೇ ಇದ್ದ ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಕ್ಷಣಕ್ಷಣಕ್ಕೂ ಸಾವಿರಾರು (Viral Video Here) ವೀಕ್ಷಣೆ ಪಡೆಯುತ್ತಿದ್ದು, ನೆಟ್ಟಿಗರಂತೂ ಈತನ ಸಾಹಸ ನೋಡಿ ಶಾಕ್ ಆಗಿದ್ದಾರೆ.

Man Kicks Snake During Shocking Viral Wildlife Encounter

  • ಇವನು ಸಾಮಾನ್ಯ ಮನುಷ್ಯನಂತೂ ಅಲ್ಲ, ಹಾವಿನ ಜೊತೆ ಹೀಗೆ ಆಟವಾಡುತ್ತಿದ್ದಾನೆ ಅಂದರೆ ಇವನಿಗೆ ಪ್ರಾಣದ ಭಯವೇ ಇಲ್ಲವೇನೋ ದೇವರೆ!” ಎಂದು ಕೆಲವರು ಹುಬ್ಬೇರಿಸಿದ್ದಾರೆ.
  • ಇನ್ನು ಕೆಲವರು, ಸ್ವಲ್ಪ ಯಾಮಾರಿದ್ದರೂ ಹಾವಿನ ವಿಷಕ್ಕೆ ಪ್ರಾಣವೇ (Man Kicks Snake) ಹೋಗುತ್ತಿತ್ತು. ವಿಡಿಯೋಗಾಗಿ ಅಥವಾ ಮೋಜಿಗೆ ಇಂತಹ ಹುಚ್ಚು ಸಾಹಸಗಳನ್ನು (Dangerous Stunts) ಯಾರು ಕೂಡ ದಯವಿಟ್ಟು ಟ್ರೈ ಮಾಡಬೇಡಿ” ಎಂದು ಕಳಕಳಿಯ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ, ಕ್ಷಣಮಾತ್ರದಲ್ಲಿ ಪ್ರಾಣವೇ ಹೋಗಬಹುದಾಗಿದ್ದ ಈ ದೃಶ್ಯವಂತೂ ಸದ್ಯ ಆನ್‌ಲೈನ್ ಜಗತ್ತಿನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

Leave a Comment

Your email address will not be published. Required fields are marked *

Scroll to Top