HomeNationalJailer Firoza Khatoon Marriage : ಖೈದಿಯನ್ನೇ ವರಿಸಿದ ಲೇಡಿ ಜೈಲರ್! ಸಿನಿಮಾ ಸ್ಟೋರಿ ಮೀರಿಸುವಂತಿದೆ...

Jailer Firoza Khatoon Marriage : ಖೈದಿಯನ್ನೇ ವರಿಸಿದ ಲೇಡಿ ಜೈಲರ್! ಸಿನಿಮಾ ಸ್ಟೋರಿ ಮೀರಿಸುವಂತಿದೆ ಈ ‘ಖತರ್ನಾಕ್’ ಲವ್ ಸ್ಟೋರಿ

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಜೈಲರ್ ಅಂದ್ರೆ ಖೈದಿಗಳ ಪಾಲಿಗೆ ಸಿಂಹಸ್ವಪ್ನ. ಆದರೆ, ಮಧ್ಯಪ್ರದೇಶದಲ್ಲಿ ನಡೆದ ಈ ಘಟನೆ ಕೇಳಿದರೆ ನೀವು “ಇದು ನಿಜಕ್ಕೂ ಸಿನಿಮಾನಾ ಅಥವಾ ನಿಜ ಜೀವನವಾ?” ಎಂದು ಮೂಗಿನ ಮೇಲೆ ಬೆರಳು ಚಾಚುವುದು ಗ್ಯಾರಂಟಿ. ತನ್ನ ಕೈ ಕೆಳಗೆ ಶಿಕ್ಷೆ ಅನುಭವಿಸುತ್ತಿದ್ದ ಖೈದಿಯನ್ನೇ ಡೆಪ್ಯುಟಿ ಜೈಲರ್ ಒಬ್ಬರು (Jailer Firoza Khatoon Marriage) ಮದುವೆಯಾಗಿರುವ ಅಪರೂಪದ ಘಟನೆ ಈಗ ದೇಶಾದ್ಯಂತ ಸಖತ್ ಸೌಂಡ್ ಮಾಡುತ್ತಿದೆ.

Jailer Firoza Khatoon Marriage: Deputy Jailer Marries Former Prisoner After 13 Years

Jailer Firoza Khatoon Marriage – ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಚಿಗುರಿದ ಪ್ರೀತಿ

ಈ ಇಂಟ್ರೆಸ್ಟಿಂಗ್ ಕಥೆಯ ನಾಯಕ ಧರ್ಮೇಂದ್ರ ಮತ್ತು ನಾಯಕಿ ಫಿರೋಜಾ ಖಾತೂನ್. ಕಥೆ ಶುರುವಾಗಿದ್ದು ಸುಮಾರು ಎರಡು ದಶಕಗಳ ಹಿಂದೆ. ಕೊಲೆ ಪ್ರಕರಣವೊಂದರಲ್ಲಿ ಧರ್ಮೇಂದ್ರನಿಗೆ ಜೀವಾವಧಿ ಶಿಕ್ಷೆಯಾದ ಕಾರಣ ಪೊಲೀಸರು ಆತನನ್ನು ಮಧ್ಯಪ್ರದೇಶದ ಸತ್ನಾ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಿದ್ದರು. ಅದೇ ಜೈಲಿನಲ್ಲಿ ಫಿರೋಜಾ ಖಾತೂನ್ ಅವರು ಸಹಾಯಕ ಜೈಲು ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯದ ಭಾಗವಾಗಿ ಧರ್ಮೇಂದ್ರನ ಪರಿಚಯ ಫಿರೋಜಾಗೆ ಉಂಟಾಗಿತ್ತು.

ಕ್ರಿಮಿನಲ್ ಬದಲಾದ ರೀತಿ ಕಂಡು ಮನಸೋತ ಅಧಿಕಾರಿ

ಶಿಕ್ಷೆ ಅನುಭವಿಸುತ್ತಿದ್ದ ಅವಧಿಯಲ್ಲಿ ಧರ್ಮೇಂದ್ರನ ನಡವಳಿಕೆಯಲ್ಲಿ ಭಾರೀ ಬದಲಾವಣೆ ಕಂಡುಬಂದಿತ್ತು. ಆತನ ಶಿಸ್ತು ಮತ್ತು ಶಾಂತ ಸ್ವಭಾವವನ್ನು ಗಮನಿಸಿದ ಫಿರೋಜಾಗೆ ಆತನ ಮೇಲೆ ಒಳ್ಳೆಯ ಅಭಿಪ್ರಾಯ ಮೂಡಿತು. ಈ ಗೌರವವು ಕಾಲಕ್ರಮೇಣ ಪ್ರೀತಿಯಾಗಿ ಬದಲಾಯಿತು. ಇಬ್ಬರೂ ಜೊತೆಯಾಗಿ ಜೀವನ ನಡೆಸಲು ನಿರ್ಧರಿಸಿದರು. (Jailer Firoza Khatoon Marriage) ಆದರೆ ಧರ್ಮೇಂದ್ರ ಇನ್ನೂ ಜೈಲಿನಲ್ಲಿದ್ದ ಕಾರಣ, ಆತ ಬಿಡುಗಡೆಯಾಗುವವರೆಗೂ ಫಿರೋಜಾ ತಾಳ್ಮೆಯಿಂದ ಕಾಯಲು ಸಿದ್ಧರಾದರು.

Read this also : ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆ: ಟವರ್ ಏರಿ ನಿಂತ ಪತಿ, ಕಾರಣ ಕೇಳಿ ಬೆಚ್ಚಿಬಿದ್ದ ಕುಟುಂಬಸ್ಥರು…!

13 ವರ್ಷಗಳ ಸುದೀರ್ಘ ಕಾಯುವಿಕೆ ಮತ್ತು ಕುಟುಂಬದ ವಿರೋಧ

ಧರ್ಮೇಂದ್ರ ತನ್ನ ಸತ್ನಡತೆಯ ಆಧಾರದ ಮೇಲೆ 2020ರಲ್ಲಿ ಜೈಲಿನಿಂದ ಬಿಡುಗಡೆಯಾದರು. ಹೊರಬಂದ ತಕ್ಷಣ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಆದರೆ ಇಲ್ಲಿ ಮತ್ತೊಂದು ದೊಡ್ಡ ಅಡ್ಡಿಯಿತ್ತು. ಇಬ್ಬರ ಧರ್ಮಗಳು ಬೇರೆ ಬೇರೆಯಾಗಿದ್ದರಿಂದ ಫಿರೋಜಾ ಅವರ ಕುಟುಂಬದವರು ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಸ್ವಂತ ಸಮಾಜದವರನ್ನೇ (Jailer Firoza Khatoon Marriage) ಮದುವೆಯಾಗುವಂತೆ ಪೋಷಕರು ಒತ್ತಾಯಿಸಿದರೂ ಫಿರೋಜಾ ಮಾತ್ರ ತಮ್ಮ ನಿರ್ಧಾರಕ್ಕೆ ಕಟ್ಟುಬಿದ್ದರು. ಇದು ನನ್ನ ವೈಯಕ್ತಿಕ ನಿರ್ಧಾರ ಮತ್ತು ಈ ಸಂಬಂಧದಿಂದ ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ಅವರು ಮನೆಯವರಿಗೆ ಖಡಕ್ ಆಗಿ ತಿಳಿಸಿದರು.

Jailer Firoza Khatoon Marriage: Deputy Jailer Marries Former Prisoner After 13 Years

ಸಂಬಂಧಪಟ್ಟ ವಿಡಿಯೋ ಇಲ್ಲಿದೆ ನೋಡಿ : Click Here
ಹಿಂದೂ ಸಂಪ್ರದಾಯದಂತೆ ಅದ್ಧೂರಿ ವಿವಾಹ

ಕೊನೆಗೆ ಫಿರೋಜಾ ಅವರ ಕುಟುಂಬದವರ (Jailer Firoza Khatoon Marriage) ಗೈರುಹಾಜರಿಯಲ್ಲೇ ಸಹೋದ್ಯೋಗಿಗಳು ಮತ್ತು ಕೆಲವು ಸಂಘಟನೆಗಳ ನೇತೃತ್ವದಲ್ಲಿ ಛತ್ತರ್‌ಪುರ ಜಿಲ್ಲೆಯ ಲವಕುಶ ನಗರದಲ್ಲಿ ವಿವಾಹ ಮಹೋತ್ಸವ ನೆರವೇರಿತು. ಮುಸ್ಲಿಂ ಧರ್ಮಕ್ಕೆ ಸೇರಿದ ಫಿರೋಜಾ ಅವರು ಧರ್ಮೇಂದ್ರನ ಕೈಹಿಡಿಯಲು ಹಿಂದೂ ಸಂಪ್ರದಾಯವನ್ನು ಅನುಸರಿಸಿದರು. ವೇದ ಮಂತ್ರಗಳ ಸಾಕ್ಷಿಯಾಗಿ ಇಬ್ಬರೂ ಹಸೆಮಣೆ ಏರಿದರು. ಈ ವಿವಾಹವು ಕೇವಲ ಒಂದು ಪ್ರೇಮಕಥೆಯಾಗಿ ಉಳಿಯದೆ, ಸಮಾಜದಲ್ಲಿನ ಧರ್ಮದ ಗೋಡೆಗಳನ್ನು ಮೀರಿ ಬೆಳೆದ ಮತ ಸಾಮರಸ್ಯದ ಸಂಕೇತವಾಗಿ ಹೊರಹೊಮ್ಮಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular