HomeStateDandeli Crime News : ದಾಂಡೇಲಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ಹೆಂಡತಿಯ ಕಿರುಕುಳ ತಾಳಲಾರದೆ ಯುವಕ ಆತ್ಮ**ಹತ್ಯೆ!...

Dandeli Crime News : ದಾಂಡೇಲಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ಹೆಂಡತಿಯ ಕಿರುಕುಳ ತಾಳಲಾರದೆ ಯುವಕ ಆತ್ಮ**ಹತ್ಯೆ! ಡೆತ್ ನೋಟ್‌ನಲ್ಲಿ ಸ್ಫೋಟಕ ಮಾಹಿತಿ?

ಹತ್ತಾರು ಕನಸುಗಳನ್ನು ಹೊತ್ತು ವಿದೇಶಕ್ಕೆ ಹೋಗಿ, ಕಷ್ಟಪಟ್ಟು ದುಡಿದು ತಾಯ್ನಾಡಿಗೆ ಮರಳಿದ್ದ ಯುವಕನೊಬ್ಬ ಮನೆಗೆ ಬಂದ ಕೆಲವೇ ದಿನಗಳಲ್ಲಿ ಹೆಣವಾಗಿರುವುದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ (Dandeli Crime News) ತೀವ್ರ ಸಂಚಲನ ಮೂಡಿಸಿದೆ. ದಾಂಡೇಲಿಯ ಬಾಂಬೆಚಾಳ ನಿವಾಸಿ ರಾಘವೇಂದ್ರ ದೇವೇಂದ್ರ ವಾಡಕರ (32) ಎಂಬುವವರೇ ಆತ್ಮ**ಹತ್ಯೆಗೆ ಶರಣಾದ ದುರ್ದೈವಿ. ಮೇ 1, 2026ರಂದು ಈ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದ್ದು, ಈ ಸಾವಿನ ಹಿಂದೆ ಕೌಟುಂಬಿಕ ಕಲಹ ಹಾಗೂ ಪತ್ನಿಯ ಕಿರುಕುಳದ ಆರೋಪಗಳು ಕೇಳಿಬರುತ್ತಿವೆ.

Dandeli crime news: Youth suicide case sparks investigation and public outrage

Dandeli Crime News – ಘಟನೆಯ ಹಿನ್ನೆಲೆ ಏನು?

ರಾಘವೇಂದ್ರ ಅವರು ಮಲೇಷ್ಯಾದಲ್ಲಿ ಉದ್ಯೋಗದಲ್ಲಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ವಿದೇಶಕ್ಕೆ ತೆರಳಿದ್ದ ಅವರು, ಕೆಲ ದಿನಗಳ ಹಿಂದೆಯಷ್ಟೇ ರಜೆಯ ಮೇಲೆ ತಮ್ಮ ಹುಟ್ಟೂರಾದ ದಾಂಡೇಲಿಗೆ ಆಗಮಿಸಿದ್ದರು. ಆದರೆ, ಗುರುವಾರ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಅವರು ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ. ಮೊದಲು ಕೈಯನ್ನು ಕೊಯ್ದುಕೊಂಡು, ನಂತರ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಎಂದು ತಿಳಿದುಬಂದಿದೆ.

ಡೆತ್ ನೋಟ್‌ನಲ್ಲಿ ಅಡಗಿದೆ ಆಕ್ರೋಶದ ನುಡಿಗಳು!

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ರಾಘವೇಂದ್ರ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಲಭ್ಯವಾಗಿದೆ. ಅದರಲ್ಲಿ ಅವರು ಉಲ್ಲೇಖಿಸಿರುವ ಅಂಶಗಳು ಪ್ರಕರಣಕ್ಕೆ ಬಿಗ್ (Dandeli Crime News) ಟ್ವಿಸ್ಟ್ ನೀಡಿದೆ. “ನನ್ನ ಸಾವಿಗೆ ಪತ್ನಿ ಮೇಘಾ ಹಾಗೂ ನನ್ನ ಅತ್ತೆಯೇ ನೇರ ಕಾರಣ” ಎಂದು ರಾಘವೇಂದ್ರ ಡೆತ್ ನೋಟ್‌ನಲ್ಲಿ ನೋವಿನಿಂದ ಬರೆದಿದ್ದಾರೆ ಎನ್ನಲಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಪತ್ನಿ ಮತ್ತು ಮಗು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ಅವಧಿಯಲ್ಲಿ ಪತ್ನಿ ತನಗೆ ಮಾನಸಿಕವಾಗಿ ತೀವ್ರ ಕಿರುಕುಳ ನೀಡುತ್ತಿದ್ದಳು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅನೈತಿಕ ಸಂಬಂಧದ ಆರೋಪ ಹಾಗೂ ವೈರಲ್ ಆದ ರೀಲ್ಸ್‌ಗಳು

ಇನ್ನು ರಾಘವೇಂದ್ರ ಅವರ ಸಹೋದರಿ ನರ್ಮದಾ ಅವರು ಪತ್ನಿ ಮೇಘಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮೇಘಾಳಿಗೆ ಅನೈತಿಕ ಸಂಬಂಧವಿತ್ತು ಎಂದು ಅವರು ಮಾಧ್ಯಮಗಳ ಮುಂದೆ (Dandeli Crime News) ಆರೋಪಿಸಿದ್ದಾರೆ. ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ಮೇಘಾ ಮಾಡಿದ್ದ ರೀಲ್ಸ್‌ ವಿಡಿಯೋಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. Read this also : 15 ದಿನದ ‘ರೀಲ್ಸ್’ ಸ್ನೇಹ.. ದೇವಸ್ಥಾನದಲ್ಲಿ ‘ರಿಯಲ್’ ಮದುವೆ, ಗಂಡನ ಮನೆ ತೊರೆದು ಯುವತಿಯನ್ನು ವರಿಸಿದ ಇಬ್ಬರು ಮಕ್ಕಳ ತಾಯಿ!

Dandeli crime news: Youth suicide case sparks investigation and public outrage

ಪೊಲೀಸ್ ತನಿಖೆ ಚುರುಕು

ಘಟನಾ ಸ್ಥಳಕ್ಕೆ ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಜಗದೀಶ ನಾಯ್ಕ ಹಾಗೂ ಸಿಬ್ಬಂದಿ ಭೇಟಿ ನೀಡಿ (Dandeli Crime News) ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ಪತ್ನಿ ಮೇಘಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ದಾಂಡೇಲಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸಕಲ ಪೊಲೀಸ್ ಭದ್ರತೆಯ ನಡುವೆಯೇ ಮೃತರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. ವಿದೇಶದಲ್ಲಿ ದುಡಿದು ಸಂಸಾರ ಸಲಹಬೇಕಿದ್ದ ಯುವಕನ ಈ ಸಾವು ಇಡೀ ದಾಂಡೇಲಿ ನಗರವನ್ನು ಮೌನವಾಗಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular