ನಾವೆಲ್ಲರೂ ಸಮಾಜಕ್ಕಾಗಿ ದುಡಿದಂತಹ ಹಾಗೂ ಸಮಾಜದಲ್ಲಿದ್ದ ಅನಿಷ್ಟ ಪದ್ದತಿಗಳನ್ನು ನಿರ್ಮೂಲನೆ ಮಾಡಲು ಶ್ರಮಿಸಿದಂತಹ ಮಹನೀಯರ ಜಯಂತಿಗಳನ್ನು ಆಚರಣೆ ಮಾಡಿದರೇ ಮಾತ್ರ ಸಾಲದು, (Ambedkar Jayanti 2026) ಮಹನೀಯರ ಕುರಿತು ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸುವಂತಹ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

Ambedkar Jayanti 2026 – ಶಾಲಾ ಪಠ್ಯದ ಜೊತೆ ಅಂಬೇಡ್ಕರ್ ಅರಿವು ಅಗತ್ಯ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಂ ರವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಆಚರಣೆಯಲ್ಲಿದ್ದ ಅಸ್ಪೃಶ್ಯತೆ, ಮೂಡನಂಬಿಕೆ ಸೇರಿದಂತೆ ಹಲವು ಅನಿಷ್ಟ ಪದ್ದತಿಗಳ ವಿರುದ್ದ ಅನೇಕ ಮಹನೀಯರು ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದಾರೆ. ಆದರೆ ಅಂತಹ ಮಹನೀಯರನ್ನು ಅವರ ಜಯಂತಿಗಳಂದು ಮಾತ್ರ ಅವರನ್ನು ನೆನಪಿಸಿಕೊಳ್ಳುತ್ತಿದ್ದೇವೆ. ಅದರ ಬದಲಿಗೆ ಮಕ್ಕಳಿಗೆ ಶಾಲಾ ತರಗತಿಗಳಲ್ಲಿ ಒಂದು ಗಂಟೆ ಡಾ.ಅಂಬೇಡ್ಕರ್ ರವರುಗಳಂತಹ ಮಹನೀಯರ ಕುರಿತು ಅರಿವು ಮೂಡಿಸಬೇಕು.
ಇನ್ನೂ ಅಂಬೇಡ್ಕರ್ ರವರು ಬರೆದುಕೊಟ್ಟ ಸಂವಿಧಾನದಿಂದ ಇಂದು ನಾವೆಲ್ಲರೂ ಸಂತೊಷಕರವಾದ ಜೀವನ ಸಾಗಿಸುತ್ತಿದ್ದೇವೆ. ಅಂಬೇಡ್ಕರ್ ರವರು ತಮ್ಮ ಬಾಲ್ಯದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿದ್ದಾರೆ. ಅದೆಲ್ಲವನ್ನೂ ಮೆಟ್ಟಿ ನಿಂತು ಇಂದು ಭವ್ಯ ಭಾರತಕಕ್ಕೆ ದೊಡ್ಡ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ಅಂತಹ ಮಹಾನುಭಾವರ ಆದರ್ಶಗಳನ್ನು ಪಾಲನೆ ಮಾಡುವುದರ ಜೊತೆಗೆ ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಎಂದರು.
ಗುಡಿಬಂಡೆಗೆ 4 ಕೋಟಿ ವೆಚ್ಚದ ಭವ್ಯ ಅಂಬೇಡ್ಕರ್ ಭವನ
ಇನ್ನೂ ದಲಿತ ಮುಖಂಡರ ಮನವಿ ಮೇರೆಗೆ ಇಂದು ಗುಡಿಬಂಡೆಯಲ್ಲಿ ಭವ್ಯವಾದ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ ಗುಡಿಬಂಡೆ ಕೆರೆಯ ಬಳಿ ಅಂಬೇಡ್ಕರ್ ಭವನ (Ambedkar Jayanti 2026) ನಿರ್ಮಾಣ ಮಾಡಲು ಜಾಗ ಗುರ್ತಿಸಿ ಗುದ್ದಲಿ ಪೂಜೆ ಮಾಡಲಾಗಿದೆ. ಸುಮಾರು ೪ ಕೋಟಿ ವೆಚ್ಚದಲ್ಲಿ ಭವ್ಯವಾದ ಅಂಬೇಡ್ಕರೆ ಭವನ ಸಹ ನಿರ್ಮಾಣವಾಗಲಿದೆ. ಬಡವರ ಪರ ಕೆಲಸ ಮಾಡುವ ಏಕೈಕ ಸರ್ಕಾರ ನಮ್ಮ ಕಾಂಗ್ರೇಸ್ ಸರ್ಕಾರವಾಗಿದ್ದು, ದಲಿತರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಗುಡಿಬಂಡೆ ತಾಲೂಕಿನ ಸರ್ವತೋಮುಖ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದರು. Read this also : ಆಧಾರ್ ಕಾರ್ಡ್‌ನಲ್ಲಿ ಅಡ್ರೆಸ್ ಬದಲಾಯಿಸಲು ದಾಖಲೆಗಳಿಲ್ಲವೇ? ಚಿಂತೆ ಬಿಡಿ, ಈ ಹೊಸ ಫೀಚರ್ ನಿಮಗಾಗಿ!

ಸಂವಿಧಾನ ಪಾಲಿಸೋದು ಕಾಂಗ್ರೇಸ್ ಸರ್ಕಾರ
ಕಾರ್ಯಕ್ರಮದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎನ್.ಸಂಪಂಗಿ ಮಾತನಾಡಿ, ಸಂವಿಧಾನ ಆಶಯಗಳನ್ನು ಅಳವಡಿಸಿಕೊಂಡು ಸರ್ಕಾರ ನಡೆಸುವುದು ನಮ್ಮ ಕಾಂಗ್ರೇಸ್ ಸರ್ಕಾರ. ಕೆಲವು ಸಂವಿಧಾನ (Ambedkar Jayanti 2026) ವಿರೋಧಿಗಳು ಸಂವಿಧಾನದ ಆಶಯಗಳ ವಿರೋಧಿ ಸರ್ಕಾರ ನಡೆಸುತ್ತಾರೆ. ಕೂಲಿಗಾಗಿ ಕಾಳು ಯೋಜನೆ, ಉಳುವವನೇ ಭೂಮಿ ಒಡೆಯ ಸೇರಿದಂತೆ ಸಾಕಷ್ಟು ಬಡವರ ಯೋಜನೆಗಳನ್ನು ಜಾರಿಗೆ ತಂದಿರೋದು ನಮ್ಮ ಕಾಂಗ್ರೇಸ್ ಸರ್ಕಾರ. ಅದರ ಭಾಗವಾಗಿಯೇ ಇಂದು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಈ ಭಾಗದಲ್ಲಿ ನಾನು ಶಾಸಕನಾಗಿದ್ದಾಗ ಅನೇಕ ಶಾಶ್ವತ ಕಾಮಗಾರಿಗಳನ್ನು ಕೈಗೊಂಡಿದ್ದೆ. ಇದೀಗ ಶಾಸಕ ಸುಬ್ಬಾರೆಡ್ಡಿಯವರೂ ಸಹ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಮಾಡುತ್ತಿದ್ದು, ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ನಾನು ಎಂದಿಗೂ ಸುಬ್ಬಾರೆಡ್ಡಿಯವರ ವಿರುದ್ದ ನಡೆದುಕೊಂಡಿಲ್ಲ ಎಂದರು.

ಮುಖ್ಯ ಭಾಷಣಕಾರರ ಮಾತುಗಳು
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ (Ambedkar Jayanti 2026) ಮಾತನಾಡಿದ ಪ್ರಗತಿಪರ ಚಿಂತಕ ಗೌರಿಬಿದನೂರಿನ ಡಾ.ಹೆಚ್.ವಿ.ವಾಸು, ಸುಮಾರು ವರ್ಷಗಳ ಹಿಂದೆ ಜಾತಿಗಳಿಗೆ ಸೀಮಿತ ಎಂಬಂತೆ ಮಹನೀಯರ ಜಯಂತಿಗಳನ್ನು ಆಚರಣೆ ಮಾಡುತ್ತಿದ್ದರು. ಆದರೆ ಇತ್ತೀಚಿಗೆ ಅದು ಬದಲಾಗಿ ಎಲ್ಲರೂ ಆಚರಣೆ ಮಾಡುವಂತಾಗಿದೆ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು, ಕೇವಲ ಸಂವಿಧಾನವನ್ನು ರಚನೆ ಮಾಡಿಕೊಟ್ಟಿದ್ದು ಮಾತ್ರವಲ್ಲದೇ ಅದರಲ್ಲಿ ಸಾಕಷ್ಟು ಅಂಶಗಳನ್ನು ಸೇರಿಸಿದರ ಪರಿಣಾಮ ಇಂದು ವಿಶ್ವಕ್ಕೆ ಮಾದರಿಯಾದ ಸಂವಿಧಾನವಾಗಿದೆ. ಇಂದು ಅನುಷ್ಟಾನಗೊಂಡಿರುವ ಗ್ಯಾರಂಟಿ ಯೋಜನೆಗಳು ಸಂವಿಧಾನ ಆಶಯಗಳ ಮುಂದುವರೆದ ಭಾಗವಾಗಿದೆ ಎಂದೇ ಹೇಳಬಹುದಾಗಿದೆ. ಆದರೆ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಠೀಕೆ ಮಾಡುವವರು ಸಂವಿಧಾನದ ಆಶಯಗಳ ವಿರೋಧಿಗಳು ಎಂದರು.
ಮುಖ್ಯರಸ್ತೆಯಲ್ಲಿ ಅದ್ದೂರಿ ಮೆರವಣಿಗೆ
ಇನ್ನೂ ಕಾರ್ಯಕ್ರಮಕ್ಕೂ ಮುನ್ನಾ (Ambedkar Jayanti 2026) ಗುಡಿಬಂಡೆ ಅಮಾನಿಬೈರ ಸಾಗರ ಕೆರೆಯ ಬಳಿ ಅಂಬೇಡ್ಕರ ಭವನ ನಿರ್ಮಾಣಕ್ಕೆ ಶಾಸಕ ಸುಬ್ಬಾರೆಡ್ಡಿ ಸೇರಿದಂತೆ ಹಲವರು ಭೂಮಿ ಪೂಜೆ ನೆರವೇರಿಸಿದರು. ಬಳಿಕ ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಂಬೇಡ್ಕರ್ ಭಾವಚಿತ್ರಗಳನ್ನು ಒಳಗೊಂಡ ಪಲ್ಲಕಿಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು. ವೇದಿಕೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರವರ ಕುರಿತ ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ಅದರಲ್ಲೂ ಮಾಜಿ ತಾಪಂ ಸದಸ್ಯ ಆದಿನಾರಾಯಣಪ್ಪ ರವರ ಮೊಮ್ಮಗ ಮನೋಜ್ ಕುಮಾರ್ ಎಂಬ ೫ ವರ್ಷದ ಬಾಲಕ ಅಂಬೇಡ್ಕರ್ ರವರ ಕುರಿತ ಗೀತೆಯನ್ನು ಹಾಡಿ ಎಲ್ಲರ ಗಮನ ಸೆಳೆದ.

ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರು
ಈ ಸಮಯದಲ್ಲಿ (Ambedkar Jayanti 2026) ಪಪಂ ಅಧ್ಯಕ್ಷ ವಿಕಾಸ್, ತಹಸೀಲ್ದಾರ್ ಮನೀಷಾ, ತಾಪಂ ಇಒ ನಾಗಮಣಿ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕ ತೇಜ್ ಆನಂದರೆಡ್ಡಿ, ಸಹಾಯಕ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ, ಬಿಇಒ ಕೃಷ್ಣಕುಮಾರಿ, ಪಪಂ ಮುಖ್ಯಾಧಿಕಾರಿ ಆರತಿ, ಚೀಮುಲ್ ಆದಿನಾರಾಯಣರೆಡ್ಡಿ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಆದಿರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ದಲಿತ ಮುಖಂಡರು ಸೇರಿದಂತೆ ಹಲವರು ಇದ್ದರು.

ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
