“ಚುನಾವಣೆ ಬಂದಾಗ ಎರಡು ಸಾವಿರ ರೂಪಾಯಿಗೆ ಆಸೆಪಟ್ಟು ನಮ್ಮ ಪವಿತ್ರವಾದ ಮತವನ್ನು ಮಾರಿಕೊಂಡರೆ, ಮುಂದಿನ ಐದು ವರ್ಷಗಳ ಕಾಲ ನಮ್ಮ ಜೀವನವನ್ನು ನಾವೇ ಸರ್ವನಾಶ ಮಾಡಿಕೊಂಡಂತೆ,” ಎಂದು (Local News) ಕರ್ನಾಟಕ ಗ್ರಾಮೀಣ ಕೃಷಿ ಕೂಲಿಕಾರರ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಬಿ. ವೆಂಕಟ್ ಎಚ್ಚರಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಹಮ್ಮಿಕೊಳ್ಳಲಾಗಿದ್ದ 3ನೇ ಕರ್ನಾಟಕ ಗ್ರಾಮೀಣ ಕೃಷಿ ಕೂಲಿಕಾರರ ಜಿಲ್ಲಾ ಸಮ್ಮೇಳನ ಹಾಗೂ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
Local News – ಮತದಾನದ ಹಕ್ಕು ಮತ್ತು ಆಮಿಷಗಳ ನಡುವಿನ ಹೋರಾಟ
ಸಭೆಯಲ್ಲಿ ಮಾತನಾಡಿದ ಬಿ. ವೆಂಕಟ್ ಅವರು, ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ನೀಡುವ ಹಣ ಮತ್ತು ಇತರೆ ಆಮಿಷಗಳ ಬಗ್ಗೆ ಜನರನ್ನು ಎಚ್ಚರಿಸಿದರು. “ಕಳೆದ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಲ್ಲಿ ಜನಸಾಗರವೇ ಹರಿದುಬಂದಿತ್ತು. ಸಿಪಿಎಂ ಅಭ್ಯರ್ಥಿ ಗೆಲ್ಲುತ್ತಾರೆಂಬ ವಿಶ್ವಾಸವಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಹಂಚಿದ ಎರಡು ಸಾವಿರ ರೂಪಾಯಿಗಳ ಮುಂದೆ ಜನರ ಕಷ್ಟಗಳು ಸೋತು ಹೋದವು. ಇಂದು ಹಣ ಹಂಚಿ ಗೆದ್ದವರು ಆರಾಮವಾಗಿದ್ದಾರೆ, ಆದರೆ ಮತ ಹಾಕಿದ ಜನ ಮಾತ್ರ ಇಂದಿಗೂ ಸಂಕಷ್ಟದಲ್ಲಿದ್ದಾರೆ,” ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಜನವಿರೋಧಿ (Local News) ಧೋರಣೆ ಹೊಂದಿವೆ ಎಂದು ಟೀಕಿಸಿದ ಅವರು, “ದೇಶದಲ್ಲಿ ಗ್ಯಾಸ್ ಬೆಲೆ ಏರಿಕೆಗೆ ಗಲ್ಫ್ ರಾಷ್ಟ್ರಗಳ ಯುದ್ಧ ಕಾರಣವಲ್ಲ, ಬದಲಿಗೆ ನರೇಂದ್ರ ಮೋದಿ ಅವರ ಆಡಳಿತವೇ ಕಾರಣ. ಇತ್ತ ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಅವರು ನೀಡಿದ ಆಶ್ವಾಸನೆಗಳು ಬಡವರ ಬದುಕಿನಲ್ಲಿ ಬದಲಾವಣೆ ತಂದಿಲ್ಲ,” ಎಂದು ಕಿಡಿಕಾರಿದರು.
Read this also : ಲಾಭ ಹೆಚ್ಚು ಅಥವಾ ನಷ್ಟವೇ? ಅರ್ಜಿ ಸಲ್ಲಿಸುವ ಮುನ್ನ ಇದನ್ನ ಓದಿ…!
“ಪ್ರತಿ ಕುಟುಂಬಕ್ಕೆ ಬೇಕು 2 ಎಕರೆ ಜಮೀನು”
ಇಂದಿನ ಕಾಲದಲ್ಲಿ ಭೂಮಿಗೆ (Local News) ಇರುವ ಬೇಡಿಕೆಯ ಬಗ್ಗೆ ಮಾತನಾಡುತ್ತಾ, “ಹಿಂದೆ ಮದುವೆಗೆ ವರದಕ್ಷಿಣೆ ಕೇಳುತ್ತಿದ್ದರು, ಈಗ ಕನಿಷ್ಠ ಎರಡು ಎಕರೆ ಜಮೀನು ಇದೆಯೇ ಎಂದು ಕೇಳುತ್ತಾರೆ. ಆದರೆ ಬಡವರ ಬಳಿ ಜಮೀನೇ ಇಲ್ಲ. ಪ್ರತಿಯೊಂದು ಕೂಲಿಕಾರ ಕುಟುಂಬಕ್ಕೆ ಕನಿಷ್ಠ 2 ಎಕರೆ ಜಮೀನು ಕೊಡಿಸುವುದೇ ನಮ್ಮ ಸಂಘಟನೆಯ ಮುಖ್ಯ ಗುರಿ,” ಎಂದು ಬಿ. ವೆಂಕಟ್ ಘೋಷಿಸಿದರು.

ನೈತಿಕತೆಯ ರಾಜಕಾರಣ ಮತ್ತು ಪರಿಸರ ಕಾಳಜಿ
ಸಂಘಟನೆಯ (Local News) ರಾಜ್ಯ ಉಪಾಧ್ಯಕ್ಷ ಡಾ. ಅನೀಲ್ ಕುಮಾರ್ ಮಾತನಾಡಿ, “ವಿಶ್ವದಲ್ಲೇ ನೈತಿಕತೆ ಉಳಿಸಿಕೊಂಡಿರುವ ಏಕೈಕ ಪಕ್ಷ ಸಿಪಿಎಂ. ನಾನು ಸೋತಿರಬಹುದು, ಆದರೆ ಮಾರಾಟವಾಗಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಜನರ ಪರ ಹೋರಾಡುತ್ತೇನೆ,” ಎಂದರು. ಇದೇ ವೇಳೆ ಚಿಕ್ಕಬಳ್ಳಾಪುರ ಭಾಗಕ್ಕೆ ಪೂರೈಕೆಯಾಗುತ್ತಿರುವ ಸಂಸ್ಕರಿಸಿದ ಕೊಳಚೆ ನೀರಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ನಮಗೆ ವಿಷಪೂರಿತ ನೀರು ಬೇಡ ಎಂದು ನಾವು ಮೊದಲೇ ಹೇಳಿದ್ದೆವು. ಫ್ಲೋರೋಸಿಸ್‌ನಿಂದ ಬಳಲುತ್ತಿರುವ ಈ ಭಾಗದ ಜನರಿಗೆ ಈ ನೀರು ಮತ್ತಷ್ಟು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು,” ಎಂದು ಎಚ್ಚರಿಸಿದರು.
ಪ್ರತಿಭಟನಾ ಮೆರವಣಿಗೆ
ಸಮ್ಮೇಳನದ (Local News) ಅಂಗವಾಗಿ ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಅಧ್ಯಕ್ಷ ಪುಟ್ಟಮಾದಪ್ಪ, ಉಪಾಧ್ಯಕ್ಷ ಚಂದ್ರಶೇಖರ್, ಮುಖಂಡರಾದ ನಾರಾಯಣ, ಚಿಕ್ಕಗಂಗಪ್ಪ, ಜಯರಾಮರೆಡ್ಡಿ, ಸಿದ್ದಗಂಗಪ್ಪ ಹಾಗೂ ಕೆಪಿಆರ್‌ಎಸ್, ಸಿಐಟಿಯು ಸಂಘಟನೆಗಳ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
