ಮಾನವೀಯತೆ ಮರೆಯಾಗುತ್ತಿದೆಯೇ ಎಂಬ ಅನುಮಾನ ಮೂಡಿಸುವಂತಹ ಘಟನೆಯೊಂದು ಹರಿದ್ವಾರದಿಂದ ಪುರಿಗೆ (Utkal Express Baby Case) ಹೊರಟಿದ್ದ ಉತ್ಕಲ್ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದಿದೆ. ಹೆತ್ತ ಕರುಳನ್ನೇ ಕಸದಂತೆ ಶೌಚಾಲಯದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಕೇವಲ ಒಂದು ಸಣ್ಣ ಟವೆಲ್ನಲ್ಲಿ ಅರ್ಧಂಬರ್ಧ ಸುತ್ತಲ್ಪಟ್ಟಿದ್ದ ಆ ಪುಟ್ಟ ಜೀವ, ರೈಲಿನ ಶೌಚಾಲಯದ ತಣ್ಣನೆಯ ನೆಲದ ಮೇಲೆ ಅಳುತ್ತಾ ಬಿದ್ದಿತ್ತು.

Utkal Express Baby Case – ಆಕಸ್ಮಿಕವಾಗಿ ಬೆಳಕಿಗೆ ಬಂದ ಕಂದಮ್ಮನ ನೋವು
ಈ ಘಟನೆ ಬೆಳಕಿಗೆ ಬಂದಿದ್ದು ಒಬ್ಬ ಪ್ರಯಾಣಿಕನ ಜಾಗರೂಕತೆಯಿಂದ. ಉತ್ಕಲ್ ಎಕ್ಸ್ಪ್ರೆಸ್ನ ಎಸ್-4 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಶೌಚಾಲಯದ ಬಾಗಿಲು ತೆರೆದಾಗ ಈ ಹೃದಯವಿದ್ರಾವಕ ದೃಶ್ಯ ಕಂಡಿದೆ. ನವಜಾತ ಶಿಶುವೊಂದು ಚಳಿಯಲ್ಲಿ ನಡುಗುತ್ತಾ, ಅಸಹಾಯಕವಾಗಿ ಅಳುತ್ತಿರುವುದನ್ನು ಕಂಡು ಅವರು ತಬ್ಬಿಬ್ಬಾದರು. ತಕ್ಷಣವೇ ಅವರು ಬೋಗಿಯಲ್ಲಿದ್ದ ಇತರ ಪ್ರಯಾಣಿಕರಿಗೆ ಮತ್ತು ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಶೌಚಾಲಯದ ನೆಲದ ಮೇಲೆ ಮಗು ಬಿದ್ದಿದ್ದ ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
Read this also : ಮಗಳ ಅನಾರೋಗ್ಯಕ್ಕೆ ಮನನೊಂದು ವೈದ್ಯನ ಕುಟುಂಬವೇ ಬಲಿ! ಗುಂಟೂರು ಜಿಲ್ಲೆಯಲ್ಲಿ ನಡೆದಿದ್ದೇನು?
ಆಸ್ಪತ್ರೆಯ ವಿಶೇಷ ಘಟಕದಲ್ಲಿ ಮಗುವಿಗೆ ಚಿಕಿತ್ಸೆ
ಮಾಹಿತಿ ಸಿಕ್ಕ ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಅಧಿಕಾರಿಗಳು ಮತ್ತು ಪೊಲೀಸರು ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದರು. ಮಗುವಿನ ಆರೋಗ್ಯ ಹದಗೆಡದಂತೆ ತಕ್ಷಣವೇ ಹತ್ತಿರದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು. ಈ ಬಗ್ಗೆ ಮಾಹಿತಿ ನೀಡಿರುವ ಸಿವಿಲ್ ಸರ್ಜನ್ ಡಾ. ಯಶವಂತ್ ವರ್ಮಾ ಅವರು, ಮಗುವನ್ನು ಪ್ರಸ್ತುತ ಜಿಲ್ಲಾ ಆಸ್ಪತ್ರೆಯ (Utkal Express Baby Case) ವಿಶೇಷ ಆರೈಕೆ ನವಜಾತ ಶಿಶು ಘಟಕದಲ್ಲಿ (SNCU) ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ವೈದ್ಯರ ಒಂದು ತಂಡವು ಮಗುವಿನ ಮೇಲೆ ಸತತ ನಿಗಾ ಇಟ್ಟಿದ್ದು, ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವು ನೀಡಲಾಗುತ್ತಿದೆ. ಮಗುವಿನ ಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ವೈರಲ್ ವಿಡಿಯೋ ಇಲ್ಲಿದ ನೋಡಿ : Click Here
ತಪ್ಪಿತಸ್ಥರಿಗಾಗಿ ಪೊಲೀಸರ ತೀವ್ರ ಶೋಧ
ಇನ್ನೊಂದೆಡೆ ಈ ಕೃತ್ಯ ಎಸಗಿದವರನ್ನು (Utkal Express Baby Case) ಪತ್ತೆ ಹಚ್ಚಲು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಎಸ್-4 ಬೋಗಿಯಲ್ಲಿ ಅಂದು ಪ್ರಯಾಣಿಸುತ್ತಿದ್ದವರ ಪಟ್ಟಿಯನ್ನು ಅಧಿಕಾರಿಗಳು ಜಾಲಾಡುತ್ತಿದ್ದಾರೆ. ಮಗುವನ್ನು ಯಾರು ಬಿಟ್ಟು ಹೋಗಿರಬಹುದು ಎಂಬ ಸುಳಿವಿಗಾಗಿ ಕಟ್ನಿ ಮುರ್ವಾರಾ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಬೋಗಿಯಲ್ಲಿದ್ದ ಇತರೆ ಪ್ರಯಾಣಿಕರನ್ನೂ ವಿಚಾರಣೆಗೆ ಒಳಪಡಿಸಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಮಗುವನ್ನು ಅನಾಥವಾಗಿ ಬಿಟ್ಟುಹೋದ ಆ ಪೋಷಕರು ಯಾರು ಎಂಬ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗುವ ನಿರೀಕ್ಷೆಯಿದೆ.
