HomeNationalUttar Pradesh Divorce Story : 'ಡಿವೋರ್ಸ್ ಪಾರ್ಟಿ' ಆಯ್ತು, ಈಗ 'ಡಿವೋರ್ಸ್ ಹರಕೆ' ಸರದಿ!...

Uttar Pradesh Divorce Story : ‘ಡಿವೋರ್ಸ್ ಪಾರ್ಟಿ’ ಆಯ್ತು, ಈಗ ‘ಡಿವೋರ್ಸ್ ಹರಕೆ’ ಸರದಿ! 9 ಕಿ.ಮೀ ಮಲಗುತ್ತಾ ಸಾಗಿದ ಯುವಕನ ವಿಡಿಯೋ ಈಗ ಸಖತ್ ವೈರಲ್!

ಒಳ್ಳೆಯ ಕೆಲಸವಾಗಲಿ ಎಂದು ದೇವರಿಗೆ ಹರಕೆ ಹೊರುವುದು ಸಾಮಾನ್ಯ. ಆದರೆ, “ನನಗೆ ವಿಚ್ಛೇದನ ಸಿಗಲಿ” ಎಂದು ಹರಕೆ (Uttar Pradesh Divorce Story) ಹೊತ್ತು, ಅದು ಈಡೇರಿದ ಮೇಲೆ ಬರೋಬ್ಬರಿ 9 ಕಿಲೋಮೀಟರ್ ದೀಡನಮಸ್ಕಾರ (ಸಾಷ್ಟಾಂಗ ನಮಸ್ಕಾರ) ಹಾಕಿದ ವಿಚಿತ್ರ ಘಟನೆಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮನಸ್ಸಿಗೆ ನೆಮ್ಮದಿ ಇಲ್ಲದ ಸಂಸಾರಕ್ಕಿಂತ ಒಂಟಿ ಬದುಕೇ ಲೇಸು ಎಂದು ಭಾವಿಸಿದ ಈ ಯುವಕನ ಕಥೆ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

Uttar Pradesh divorce story man performing 9km Sashtanga Namaskara after divorce

Uttar Pradesh Divorce Story – ನೆಮ್ಮದಿಗಾಗಿ ನಡೆದ 12 ಗಂಟೆಗಳ ಕಠಿಣ ಹಾದಿ

ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ನರ್ಖೋರಿಯಾ ಗ್ರಾಮದ 25 ವರ್ಷದ ಯುವಕ ಜೋಗೇಶ್, ಈ ವಿಶಿಷ್ಟ ಯಾತ್ರೆಯ ಮೂಲಕ ಸುದ್ದಿಯಾಗಿದ್ದಾರೆ. ಮದುವೆಯಾದ ಮೊದಲ ದಿನದಿಂದಲೇ ಪತ್ನಿಯೊಂದಿಗೆ ನಿರಂತರ ಜಗಳ, ಮನಸ್ತಾಪಗಳಿಂದ ಜೋಗೇಶ್ ಅವರ ಬದುಕು ಹೈರಾಣಾಗಿತ್ತು. ಈ ಕಿರಿಕಿರಿಯಿಂದ ತನಗೆ ಮುಕ್ತಿ ಸಿಕ್ಕರೆ ಗ್ರಾಮದಿಂದ ದೇವಸ್ಥಾನದವರೆಗೆ ದೀಡನಮಸ್ಕಾರ ಹಾಕುವುದಾಗಿ ಅವರು ಈ ಹಿಂದೆ ದೇವರಲ್ಲಿ ಕೇಳಿಕೊಂಡಿದ್ದರು. Read this also : Divorce : ಪಿಜ್ಜಾ ಡೆಲಿವರಿಗಿಂತ ಫಾಸ್ಟ್‌ ಈ ಡಿವೋರ್ಸ್! ಅತ್ತೆ ಮನೆಗೆ ಕಾಲಿಟ್ಟ 20 ನಿಮಿಷಕ್ಕೇ ಸಂಬಂಧ ಮುರಿದುಕೊಂಡ ವಧು

ಕೊನೆಗೂ ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆ ಮುಗಿದು, 2026ರ ಜನವರಿಯಲ್ಲಿ ವಿಚ್ಛೇದನ ಅಧಿಕೃತವಾಯಿತು. ಹರಕೆ ತೀರಿಸುವ ಸಲುವಾಗಿ ಇತ್ತೀಚೆಗೆ ನವರಾತ್ರಿಯ ಸಮಯದಲ್ಲಿ ಜೋಗೇಶ್ ಅವರು ತಮ್ಮ ಗ್ರಾಮದಿಂದ ‘ಬೈದಾ ಸಮಯ ಮಾತಾ’ ದೇವಸ್ಥಾನದವರೆಗೆ ಸತತ 12 ಗಂಟೆಗಳ ಕಾಲ ನೆಲದ (Uttar Pradesh Divorce Story) ಮೇಲೆ ಮಲಗಿ ನಮಸ್ಕರಿಸುತ್ತಾ ಸಾಗಿದ್ದಾರೆ.

ಪೊಲೀಸರ ರಕ್ಷಣೆ, ಕುಟುಂಬದ ಸಾಥ್!

ಇದು ಕೇವಲ ಹಠಕ್ಕೆ ಬಿದ್ದು ಮಾಡಿದ ಕೆಲಸವಾಗಿರಲಿಲ್ಲ. ರಸ್ತೆಯಲ್ಲಿ ಯಾತ್ರೆ ಮಾಡುವಾಗ ಸಂಚಾರಕ್ಕೆ ಅಡ್ಡಿಯಾಗಬಾರದೆಂದು ಜೋಗೇಶ್ ಅವರು ಮೊದಲೇ ಉಪವಿಭಾಗಾಧಿಕಾರಿಗಳಿಂದ (SDM) ಅನುಮತಿ ಪಡೆದಿದ್ದರು. ಇಡೀ ಹಾದಿಯುದ್ದಕ್ಕೂ ಪೊಲೀಸರು ಇವರಿಗೆ ರಕ್ಷಣೆ ನೀಡಿದರೆ, ಜೋಗೇಶ್ ಅವರ ಪೋಷಕರು ಕೂಡ ಮಗನ ಈ ವಿಮೋಚನೆಯ (Uttar Pradesh Divorce Story) ಸಂಭ್ರಮದಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದರು. 9 ಕಿಲೋಮೀಟರ್ ಸಾಗುವಾಗ ಪೂರ್ತಿ ಉಪವಾಸವಿದ್ದ ಜೋಗೇಶ್, ‘ಜೈ ಶ್ರೀರಾಮ್’ ಎನ್ನುತ್ತಾ ತನ್ನ ಭಕ್ತಿ ಮತ್ತು ಹಠವನ್ನು ಪ್ರದರ್ಶಿಸಿದರು.

Uttar Pradesh divorce story man performing 9km Sashtanga Namaskara after divorce

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click here 

ಇದು ಕೇವಲ ಡಿವೋರ್ಸ್ ಅಲ್ಲ, ಹೊಸ ಆರಂಭ!

ದೇವಸ್ಥಾನ ತಲುಪಿದ ಮೇಲೆ ತೆಂಗಿನಕಾಯಿ ಒಡೆದು (Uttar Pradesh Divorce Story) ವಿಶೇಷ ಪೂಜೆ ಸಲ್ಲಿಸಿದ ಜೋಗೇಶ್, “ಈಗ ನನಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತಾಗಿದೆ” ಎಂಬ ಭಾವ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೆಲವರು “ವಿಚ್ಛೇದನ ಇಷ್ಟು ಸಂಭ್ರಮಿಸಬೇಕಾದ ವಿಷಯವೇ?” ಎಂದು ಕೇಳುತ್ತಿದ್ದರೆ, ಹೆಚ್ಚಿನವರು “ಯಾರೋ ಒಬ್ಬರ ಜೊತೆ ನರಕ ಅನುಭವಿಸುವುದಕ್ಕಿಂತ, ಹೀಗೆ ನೆಮ್ಮದಿಯಿಂದ ಹೊಸ ಜೀವನ ಆರಂಭಿಸುವುದು ಎಷ್ಟೋ ಮೇಲು” ಎಂದು ಜೋಗೇಶ್ ಬೆನ್ನಿಗೆ ನಿಂತಿದ್ದಾರೆ.

by Baluhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular