ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಕಪ್ಪುಚುಕ್ಕೆ ಹಚ್ಚುವಂತಹ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಪಾಠ ಮಾಡಬೇಕಾದ ಪ್ರೊಫೆಸರ್ ಒಬ್ಬರು, ತರಗತಿಯಲ್ಲೇ ವಿದ್ಯಾರ್ಥಿನಿಯೊಬ್ಬಳಿಗೆ ಪ್ರೇಮ ನಿವೇದನೆ (Professor Proposes Student) ಮಾಡಿ, ಕೊನೆಗೆ ವಿದ್ಯಾರ್ಥಿಗಳಿಂದಲೇ ಗೂಸಾ ತಿಂದಿರುವ ಘಟನೆ ಬೆಂಗಳೂರಿನ ನೆಲಮಂಗಲ ಸಮೀಪದ ಟಿ. ಬೇಗೂರಿನಲ್ಲಿ ನಡೆದಿದೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Professor Proposes Student – ನಡೆದಿದ್ದೇನು?
ನೆಲಮಂಗಲದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಮಾರ್ಚ್ 26 ರಂದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಬ್ದುಲ್ ಮೊಹಮ್ಮದ್ ಎಂಬ ಉಪನ್ಯಾಸಕ ತರಗತಿಯಲ್ಲಿ ಪಾಠ ಮಾಡುವ ಬದಲು, ವಿದ್ಯಾರ್ಥಿನಿಯೊಬ್ಬಳಿಗೆ ಎಲ್ಲರ ಎದುರೇ “ಐ ಲವ್ ಯೂ” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಪ್ರೀತಿ ನಿವೇದನೆಗಾಗಿ ಚಾಕೊಲೇಟ್ ಬಾಕ್ಸ್ ತರಿಸಿ ಹಂಚಲು ಮುಂದಾಗಿದ್ದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆಯ ವಿಡಿಯೋ (Video Here) ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಪ್ರೊಫೆಸರ್ ಅಬ್ದುಲ್ ಮೊಹಮ್ಮದ್ ವಿದ್ಯಾರ್ಥಿನಿಯ ಎದುರು ನಿಂತು ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ. “ನೀನು ನನಗೆ ಐ ಲವ್ ಯೂ ಮೊಹಮ್ಮದ್ ಎಂದು ಹೇಳಿಲ್ಲವೇ?” ಎಂದು ಪ್ರೊಫೆಸರ್ ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
Read this also : ಶಿಕ್ಷಕಿಯನ್ನೇ ಕಾಮ ಪ್ರಚೋದಕ ಮಾತಿನಿಂದ ಚುಡಾಯಿಸಿದ (Bihar Students) ವಿದ್ಯಾರ್ಥಿಗಳು! ವೈರಲ್ ಆದ 21 ಸೆಕೆಂಡ್ ಗಳ ವಿಡಿಯೋ..!
ಇದಕ್ಕೆ ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿನಿ, “ನಾನು ಯಾವಾಗ ಹೇಳಿದೆ?” ಎಂದು ಪ್ರಶ್ನಿಸಿದ್ದಾರೆ. ಆಗ ಪ್ರೊಫೆಸರ್, “ನನ್ನ ಬಳಿ ಸಿಸಿಟಿವಿ ಸಾಕ್ಷಿ ಇದೆ, ನಾನು ಅದನ್ನು (Professor Proposes Student) ಸಾಬೀತುಪಡಿಸುತ್ತೇನೆ” ಎಂದು ವಾದಿಸಿದ್ದಾರೆ. ಆದರೆ ವಿದ್ಯಾರ್ಥಿನಿ “ಈಗಲೇ ಸಿಸಿಟಿವಿ ಫೂಟೇಜ್ ತೋರಿಸಿ” ಎಂದು ಪಟ್ಟು ಹಿಡಿದಾಗ ಪ್ರೊಫೆಸರ್ ಅಲ್ಲಿಂದ ನುಣುಚಿಕೊಳ್ಳಲು ಯತ್ನಿಸಿದ್ದಾರೆ.

ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿತ!
ಪ್ರೊಫೆಸರ್ ವರ್ತನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ, ತಕ್ಷಣವೇ ತನ್ನ ಕಾಲಿನ ಚಪ್ಪಲಿ ತೆಗೆದು ಪ್ರೊಫೆಸರ್ಗೆ ಏಟು ನೀಡಿದ್ದಾಳೆ. ಘಟನೆಯಿಂದ ರೊಚ್ಚಿಗೆದ್ದ ಉಳಿದ ವಿದ್ಯಾರ್ಥಿಗಳು ಕೂಡ (Professor Proposes Student) ಪ್ರೊಫೆಸರ್ ಬೆನ್ನಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಾಲೇಜು ಕ್ಯಾಂಪಸ್ನಲ್ಲೇ ಪ್ರೊಫೆಸರ್ಗೆ ವಿದ್ಯಾರ್ಥಿಗಳು ಧರ್ಮದೇಟು ನೀಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಪೊಲೀಸರ ಮುಂದಿರುವ ಪ್ರಕರಣ
ಈ ಗಲಾಟೆಯ (Professor Proposes Student) ಬಗ್ಗೆ ಮಾಹಿತಿ ತಿಳಿದ ನೆಲಮಂಗಲ ಗ್ರಾಮಾಂತರ ಪೊಲೀಸರು ಕಾಲೇಜು ಆಡಳಿತ ಮಂಡಳಿಯಿಂದ ವಿವರಗಳನ್ನು ಕೇಳಿದ್ದಾರೆ. ಆದರೆ, ಈವರೆಗೆ ಎರಡೂ ಕಡೆಯಿಂದ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ. “ದೂರು ದಾಖಲಾದ ನಂತರವಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ಶೈಕ್ಷಣಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶಿಕ್ಷಕರ ನೈತಿಕತೆಯ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
