ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಂ ಅವರ ಜಯಂತಿಯನ್ನು (Ambedkar Jayanti) ಈ ಬಾರಿ ಅತ್ಯಂತ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಕುರಿತು ಗುಡಿಬಂಡೆ ತಾಲೂಕು ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಸಾರ್ವಜನಿಕರು ಹಾಗೂ ಅಧಿಕಾರಿಗಳ ಸಹಕಾರ ಕೋರಿದ್ದಾರೆ.

Ambedkar Jayanti – ಏ.18 ರಂದು ನಡೆಯಲಿದೆ ಅದ್ದೂರಿ ಜಯಂತಿ
ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಕಾರಣದಿಂದಲೇ ಇಂದು ನಾವೆಲ್ಲರೂ ಸ್ವತಂತ್ರ ವಾಗಿ ಜೀವನ ನಡೆಸುತ್ತಿದ್ದೇವೆ. ಅನಂತಹ ಮಹಾನಿಯರನ್ನು ನಾವೆಲ್ಲರೂ ಗೌರವಿಸಬೇಕು, ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲು ಎಲ್ಲರೂ ಸಹಕಾರ ನೀಡಬೇಕು. ಈ ಬಾರಿ ಏಪ್ರಿಲ್ 18 ರಂದು ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ರವರ ಜಯಂತಿ ಆಚರಣೆ ಮಾಡಲು ದಲಿತ ಮುಖಂಡರೊಂದಿಗೆ ನಡೆದ ಈ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ದಲಿತ ಮುಖಂಡರುಗಳು ಹಾಗೂ ಸ್ಥಳೀಯರ ಸಲಹೆ ಸೂಚನೆಗಳಂತೆ ಈ ಬಾರಿ ಅದ್ದೂರಿಯಾಗಿ ಅಂಬೇಡ್ಕರ್ ರವರ ಜಯಂತಿಯನ್ನು ಆಚರಣೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇನ್ನೂ ಪಟ್ಟಣದ ಹೊರವಲಯದ ಅಂಬೇಡ್ಕರ್ ವೃತ್ತದ ಬಳಿಯಿರುವ ಅಂಬೇಡ್ಕರ್ ಪುತ್ಥಳಿಯ ಉಳಿಕೆ ಕಾಮಗಾರಿಯನ್ನು ಜಯಂತಿಯೊಳಗೆ ಪೂರ್ಣಗೊಳಿಸಲಾಗುವುದು ಎಂದರು.

5 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ?
ಇನ್ನೂ ಗುಡಿಬಂಡೆ ಪಟ್ಟಣದ ಹೊರವಲಯದ ಅಮಾನಿ ಬೈರಸಾಗರ ಕೆರೆಯ ಬಳಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನಕ್ಕೆ ಸದ್ಯ ೨ ಕೋಟಿ ಅನುದಾನ ಬಂದಿದೆ. ಮತ್ತಷ್ಟು ಉತ್ತಮವಾಗಿ ಭವನ ನಿರ್ಮಾಣ ಮಾಡಲು ೨ ಕೋಟಿ ಕಟ್ಟಡ ಕಾಮಗಾರಿಗೆ ಹಾಗೂ ೧ ಕೋಟಿ ಪೀಠೋಪಕರಣಗಳಿಗೆ ಬಿಡುಗಡೆ ಮಾಡಿಸುತ್ತೇನೆ. ಮುಂದಿನ ಅಂಬೇಡ್ಕರ್ ಜಯಂತಿಯ (Ambedkar Jayanti) ಪೂರ್ವಭಾವಿ ಸಭೆಯಲ್ಲಿ ಅದೇ ಭವನದಲ್ಲಿ ನಾವೆಲ್ಲರೂ ಸೇರಿ ಮಾಡೋಣ. ಅಂಬೇಡ್ಕರ್ ರವರ ಆಶಯಗಳನ್ನು ಪಾಲಿಸೋಣ ಎಂದರು.
ದಲಿತ ಮುಖಂಡರ ಮನವಿ
ಸಭೆಯಲ್ಲಿದ್ದ ಮುಖಂಡರು ಮಾತನಾಡಿ, ಈ ಹಿಂದೆ ನಡೆದಂತಹ ಯಾವುದೇ ಅನುಚಿತ ಘಟನೆಗಳು ನಡೆಯದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಎಲ್ಲಾ ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು. ಜೊತೆಗೆ ಏ.18 ರಂದು ನಡೆಯಲಿರುವ ತಾಲೂಕು ಮಟ್ಟದ ಅಂಬೇಡ್ಕರ್ ಜಯಂತಿಗೆ (Ambedkar Jayanti) ಎಲ್ಲಾ ಪಂಚಾಯತಿ ಗಳಿಂದ ಪಲ್ಲಕಿಗಳು ಬರಬೇಕು. ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮ ಮುಗಿಯುವ ತನಕ ಹಾಜರಿರಬೇಕು. ಅಂಬೇಡ್ಕರ್ ಜಯಂತಿಯಂದು ಹಕ್ಕು ಪತ್ರಗಳ ವಿತರಣೆ, ಸಾಗುವಳಿ ಚೀಟಿ ಹೀಗೆ ಸರ್ಕಾರದ ಸೌಲಭ್ಯಗಳನ್ನು ವಿತರಣೆ ಮಾಡಲು ಕ್ರಮ ವಹಿಸಬೇಕು ಎಂದು ದಲಿತ ಮುಖಂಡರುಗಳು ಮನವಿ ಮಾಡಿದರು. Read this also : ಎಟಿಎಂ ಬಳಸುವವರಿಗೆ ಶಾಕ್: ಏಪ್ರಿಲ್ 1 ರಿಂದ ಜಾರಿಯಾಗಲಿವೆ ಹೊಸ ನಿಯಮಗಳು; ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
ಸಭೆಯಲ್ಲಿದ್ದವರು
ಈ ವೇಳೆ (Ambedkar Jayanti) ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾಪಂ ಇಒ ನಾಗಮಣಿ, ಆರಕ್ಷಕ ವೃತ್ತ ನಿರೀಕ್ಷಕ ಮುನಿಕೃಷ್ಣ, ಬಿಇಒ ಕೃಷ್ಣಕುಮಾರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ, ಪಪಂ ಮುಖ್ಯಾಧಿಕಾರಿ ಆರತಿ, ಟಿ.ಹೆಚ್.ಒ ಡಾ.ಅಕ್ಷಯ್, ಕೋಚಿಮುಲ್ ಆದಿನಾರಾಯಣರೆಡ್ಡಿ, ದಲಿತ ಮುಖಂಡರಾದ ಗಂಗಪ್ಪ, ರಮಣ, ಆದಿನಾರಾಯಣಪ್ಪ, ಜೀವಿಕ ನಾರಾಯಣಸ್ವಾಮಿ, ಚೆನ್ನರಾಯಪ್ಪ, ಎಂ.ಸಿ.ಚಿಕ್ಕನರಸಿಂಹಪ್ಪ, ಗಂಗರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

