ಇಂದಿನ ಕಾಲದಲ್ಲಿ ಜೇಬಿನಲ್ಲಿ ನಗದು ಇಲ್ಲದಿದ್ದರೂ ಪರವಾಗಿಲ್ಲ, ಕೈಯಲ್ಲೊಂದು ಸ್ಮಾರ್ಟ್‌ಫೋನ್ ಇದ್ದರೆ ಸಾಕು. ಟೀ ಅಂಗಡಿಯಿಂದ ಹಿಡಿದು ದೊಡ್ಡ ಮಾಲ್‌ಗಳವರೆಗೆ ಎಲ್ಲೆಡೆ ಡಿಜಿಟಲ್ ಪಾವತಿ (Digital Payment) ಅಬ್ಬರ ಜೋರಾಗಿದೆ. ಆದರೆ, ಡಿಜಿಟಲ್ ವಹಿವಾಟು ಹೆಚ್ಚಾದಂತೆ ಸೈಬರ್ ವಂಚನೆಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ನಿಮ್ಮ ಹಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಈಗ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ಈ ಹೊಸ ನಿಯಮಗಳು ಪ್ರತಿಯೊಬ್ಬ ಆನ್‌ಲೈನ್ ಬಳಕೆದಾರರ ಮೇಲೆ ಪ್ರಭಾವ ಬೀರಲಿವೆ. ಹಾಗಾದರೆ ಆ ಬದಲಾವಣೆಗಳೇನು? ಇಲ್ಲಿವೆ ಸಂಪೂರ್ಣ ವಿವರ.
Digital Payment – ಏನಿದು ‘ಟೂ ಫ್ಯಾಕ್ಟರ್ ಅಥೆಂಟಿಕೇಶನ್’ (Two-Factor Authentication)?
ಈಗಿರುವ ವ್ಯವಸ್ಥೆಯಲ್ಲಿ ನಾವು ಪಾವತಿ ಮಾಡುವಾಗ ಹೆಚ್ಚಾಗಿ ಓಟಿಪಿ (OTP) ಮೇಲೆ ಅವಲಂಬಿತವಾಗಿದ್ದೇವೆ. ಆದರೆ ಇನ್ನು ಮುಂದೆ ಕೇವಲ ಒಂದು ಹಂತದ ಪರಿಶೀಲನೆ ಸಾಕಾಗುವುದಿಲ್ಲ. ಆರ್‌ಬಿಐ ಆದೇಶದಂತೆ, ಏಪ್ರಿಲ್ 1 ರಿಂದ ಎಲ್ಲಾ ಡಿಜಿಟಲ್ ಪಾವತಿಗಳಿಗೆ ‘ಟೂ ಫ್ಯಾಕ್ಟರ್ ಅಥೆಂಟಿಕೇಶನ್’ ಕಡ್ಡಾಯವಾಗಲಿದೆ.
ಇದರರ್ಥ, ನೀವು ಯಾವುದೇ ವಹಿವಾಟು ನಡೆಸಲು ಎರಡು ರೀತಿಯ ವಿಭಿನ್ನ ದೃಢೀಕರಣ ಪ್ರಕ್ರಿಯೆಗಳನ್ನು ಪೂರೈಸಬೇಕಾಗುತ್ತದೆ. ಇದಕ್ಕಾಗಿ ಬ್ಯಾಂಕುಗಳು ಮತ್ತು ಫಿನ್‌ಟೆಕ್ ಸಂಸ್ಥೆಗಳಿಗೆ ಆರ್‌ಬಿಐ ಈಗಾಗಲೇ (Digital Payment) ಸೂಚನೆ ನೀಡಿದೆ.
ಹೊಸ ನಿಯಮದ ಮುಖ್ಯಾಂಶಗಳು:
- ಎರಡು ಹಂತದ ಭದ್ರತೆ: ಪಾಸ್‌ವರ್ಡ್ ಅಥವಾ ಪಿನ್ ಹೊರತಾಗಿ, ಫಿಂಗರ್‌ಪ್ರಿಂಟ್ (Fingerprint), ಫೇಸ್ ಐಡಿ (Facial Recognition) ಅಥವಾ ಹಾರ್ಡ್‌ವೇರ್ ಟೋಕೆನ್‌ಗಳಂತಹ ಮತ್ತೊಂದು ಹಂತದ ಪರಿಶೀಲನೆ ಅಗತ್ಯವಿರುತ್ತದೆ.
- ಡೈನಾಮಿಕ್ ದೃಢೀಕರಣ: ಎರಡು ಹಂತಗಳಲ್ಲಿ ಒಂದು ಕಡ್ಡಾಯವಾಗಿ ‘ಡೈನಾಮಿಕ್’ ಆಗಿರಬೇಕು (ಅಂದರೆ ಪ್ರತಿ ಬಾರಿ ಬದಲಾಗುವಂತಿರಬೇಕು).
- ಗಡಿಯಾಚೆಗಿನ ವಹಿವಾಟು: ಅಕ್ಟೋಬರ್ 1, 2026 ರಿಂದ ಅಂತರಾಷ್ಟ್ರೀಯ ಪಾವತಿಗಳಿಗೂ (Cross-border transactions) ಈ ನಿಯಮ ಅನ್ವಯವಾಗಲಿದೆ. Read this also : UPI ಮೂಲಕ ತಪ್ಪಾಗಿ ಹಣ ವರ್ಗಾವಣೆಯಾಗಿದೆಯೇ? ಚಿಂತಿಸಬೇಡಿ, ನಿಮ್ಮ ಹಣ ಮರಳಿ ಪಡೆಯಲು ಹೀಗೆ ಮಾಡಿ..!
- ಬ್ಯಾಂಕುಗಳ ಜವಾಬ್ದಾರಿ: ಒಂದು ವೇಳೆ ಬ್ಯಾಂಕುಗಳು (Digital Payment) ಈ ಹೊಸ ಭದ್ರತಾ ನಿಯಮಗಳನ್ನು ಪಾಲಿಸದೆ ಗ್ರಾಹಕರಿಗೆ ವಂಚನೆಯಾದರೆ, ಅದರ ಸಂಪೂರ್ಣ ನಷ್ಟವನ್ನು ಬ್ಯಾಂಕುಗಳೇ ಭರಿಸಬೇಕಾಗುತ್ತದೆ.
ಈ ಬದಲಾವಣೆ ಏಕೆ ಅಗತ್ಯ?
ಯುಪಿಐ (UPI) ಬಂದ ಮೇಲೆ ಸೈಬರ್ ಕಳ್ಳರು ಸಿಮ್ ಸ್ವಾಪಿಂಗ್ ಮತ್ತು ಫಿಶಿಂಗ್‌ನಂತಹ ತಂತ್ರಗಳ ಮೂಲಕ ಓಟಿಪಿ ಕದ್ದು ಹಣ ಲೂಟಿ ಮಾಡುತ್ತಿದ್ದಾರೆ. ಕೇವಲ ಓಟಿಪಿ ನಂಬಿ ಕೂರುವುದು ಈಗ ಸುರಕ್ಷಿತವಲ್ಲ ಎಂಬುದು ಆರ್‌ಬಿಐ ಆಲೋಚನೆ. ಹೊಸ ವ್ಯವಸ್ಥೆಯು ಬಹು-ಹಂತದ ಭದ್ರತೆಯನ್ನು ಒದಗಿಸುವುದರಿಂದ, (Digital Payment) ನಿಮ್ಮ ಅನುಮತಿಯಿಲ್ಲದೆ ಯಾರೂ ಹಣ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ.
ಗಮನಿಸಿ: ಈ ನಿಯಮಗಳು ನಿಮ್ಮ ಸುರಕ್ಷತೆಗಾಗಿಯೇ ಜಾರಿಗೆ ಬರುತ್ತಿವೆ. ಆರಂಭದಲ್ಲಿ ಪಾವತಿ ಪ್ರಕ್ರಿಯೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎನಿಸಿದರೂ, ಇದು ನಿಮ್ಮ ಕಷ್ಟಪಟ್ಟು ದುಡಿದ ಹಣವನ್ನು ಸುರಕ್ಷಿತವಾಗಿಡಲು ಸಹಕಾರಿ.

