ನೀವು ಪದೇ ಪದೇ ಎಟಿಎಂನಿಂದ ಹಣ ಡ್ರಾ ಮಾಡುವ ಅಭ್ಯಾಸ ಹೊಂದಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಮುಂಬರುವ ಏಪ್ರಿಲ್ 1 ರಿಂದ ಬ್ಯಾಂಕಿಂಗ್ ಲೋಕದಲ್ಲಿ ದೊಡ್ಡ ಬದಲಾವಣೆಗಳು ಆಗುತ್ತಿವೆ. ಪ್ರಮುಖ ಬ್ಯಾಂಕ್‌ಗಳಾದ HDFC, PNB ಮತ್ತು ಬಂಧನ್ ಬ್ಯಾಂಕ್ ತಮ್ಮ ಎಟಿಎಂ ಸೇವಾ ಶುಲ್ಕಗಳನ್ನು (ATM Charges) ಹೆಚ್ಚಿಸಲು ನಿರ್ಧರಿಸಿವೆ. ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಹಾಗಾದರೆ ಯಾವ ಬ್ಯಾಂಕ್‌ನಲ್ಲಿ ಎಷ್ಟು ಹಣ ಕಟ್ ಆಗಲಿದೆ?

ATM Charges – ಯಾವ ಬ್ಯಾಂಕ್‌ನಲ್ಲಿ ಏನೇನು ಬದಲಾವಣೆ?
1. HDFC ಬ್ಯಾಂಕ್: UPI ಮೂಲಕ ಹಣ ತೆಗೆದರೂ ಲೆಕ್ಕಕ್ಕೆ ಬದ್ಧ!
ದೇಶದ ಖಾಸಗಿ ವಲಯದ ದೈತ್ಯ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.
- ಇನ್ನು ಮುಂದೆ ನೀವು ಎಟಿಎಂನಲ್ಲಿ ಕಾರ್ಡ್ ಬದಲಿಗೆ UPI ಬಳಸಿ ಹಣ ತೆಗೆದರೂ ಸಹ, ಅದನ್ನು ನಿಮ್ಮ ತಿಂಗಳ ‘ಉಚಿತ ವಹಿವಾಟು’ (Free Transactions) ಪಟ್ಟಿಯಲ್ಲೇ ಸೇರಿಸಲಾಗುತ್ತದೆ.
- ನಿಗದಿಪಡಿಸಿದ ಉಚಿತ ಮಿತಿ ಮುಗಿದ ನಂತರ, ಪ್ರತಿ ವಹಿವಾಟಿಗೆ (ATM Charges) ನೀವು ಬರೋಬ್ಬರಿ 23 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.
2. ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB): ವಿತ್‌ಡ್ರಾ ಮಿತಿ ಅರ್ಧಕ್ಕೆ ಇಳಿಕೆ
ಪಿಎನ್‌ಬಿ ತನ್ನ ವಿವಿಧ ಡೆಬಿಟ್ ಕಾರ್ಡ್‌ಗಳ ಮೇಲೆ ಪ್ರತಿದಿನ ಹಣ ಹಿಂಪಡೆಯುವ ಮಿತಿಯನ್ನು ಗಣನೀಯವಾಗಿ ಕಡಿತಗೊಳಿಸಿದೆ.
- ಹಿಂದೆ ದಿನಕ್ಕೆ 1 ಲಕ್ಷ ರೂ. ವರೆಗೆ ಡ್ರಾ ಮಾಡುವ (ATM Charges) ಅವಕಾಶವಿದ್ದ ಕಾರ್ಡ್ಗಳಿಗೆ ಈಗ ಮಿತಿಯನ್ನು 50,000 ರೂಪಾಯಿಗೆ ಇಳಿಸಲಾಗಿದೆ. (ಉದಾಹರಣೆಗೆ: ಮಾಸ್ಟರ್ ಪ್ಲಾಟಿನಂ, ವೀಸಾ ಗೋಲ್ಡ್, ರೂಪೇ ಬಿಜಿನೆಸ್ ಕಾರ್ಡ್ಗಳು).
- ಉನ್ನತ ಶ್ರೇಣಿಯ ಕಾರ್ಡ್ಗಳಾದ ವೀಸಾ ಸಿಗ್ನೇಚರ್ ಮತ್ತು ರೂಪೇ ಸೆಲೆಕ್ಟ್ ಕಾರ್ಡ್‌ಗಳ ಮಿತಿಯನ್ನು50 ಲಕ್ಷದಿಂದ 75,000 ರೂಪಾಯಿಗೆ ಇಳಿಕೆ ಮಾಡಲಾಗಿದೆ. Read this also : ATM ಮಷಿನ್ನಲ್ಲಿ ಕಾರ್ಡ್ ಸಿಕ್ಕಿಹಾಕಿಕೊಂಡರೆ ಈ ತಪ್ಪು ಮಾಡ್ಬೇಡಿ: ಅಕೌಂಟ್ ಸೇಫ್ ಆಗಿರಬೇಕಂದ್ರೆ ತಕ್ಷಣ ಹೀಗೆ ಮಾಡಿ..!
3. ಬಂಧನ್ ಬ್ಯಾಂಕ್: ವಿಫಲ ವಹಿವಾಟುಗಳಿಗೂ ದಂಡ!
ಬಂಧನ್ ಬ್ಯಾಂಕ್ ಕೂಡ ತನ್ನ ಶುಲ್ಕಗಳಲ್ಲಿ ಭಾರಿ ಬದಲಾವಣೆ ತಂದಿದೆ.
- ಉಚಿತ ಮಿತಿ ಮೀರಿದ ನಂತರ ಪ್ರತಿ (ATM Charges) ಹಣಕಾಸಿನ ವಹಿವಾಟಿಗೆ 23 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.
- ಹಣೇತರ ವಹಿವಾಟುಗಳಿಗೆ (Balance Enquiry ಇತ್ಯಾದಿ) 10 ರೂಪಾಯಿ ಶುಲ್ಕವಿರುತ್ತದೆ.
- ಅತಿ ಮುಖ್ಯವಾಗಿ, ನಿಮ್ಮ ಖಾತೆಯಲ್ಲಿ ಹಣವಿಲ್ಲದೆ ಅಥವಾ ತಾಂತ್ರಿಕ ಕಾರಣದಿಂದ ಎಟಿಎಂ ವಹಿವಾಟು ತಿರಸ್ಕೃತಗೊಂಡರೆ (Transaction Decline), ಅದಕ್ಕೂ ಸಹ 25 ರೂಪಾಯಿ ದಂಡ ತೆರಬೇಕಾಗುತ್ತದೆ!
ಮೆಟ್ರೋ ನಗರಗಳಲ್ಲಿ ಎಚ್ಚರ!
ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈ, ದೆಹಲಿ ಮತ್ತು ಕೋಲ್ಕತ್ತಾದಂತಹ ಮೆಟ್ರೋ ನಗರಗಳಲ್ಲಿ ವಾಸಿಸುವವರಿಗೆ ಉಚಿತ ವಹಿವಾಟುಗಳ ಮಿತಿ ನಾನ್-ಮೆಟ್ರೋ ನಗರಗಳಿಗಿಂತ (ATM Charges) ಭಿನ್ನವಾಗಿರುತ್ತದೆ ಎಂಬುದು ನೆನಪಿರಲಿ. ಸಾಮಾನ್ಯವಾಗಿ ಇಲ್ಲಿ ಉಚಿತ ವಹಿವಾಟುಗಳ ಸಂಖ್ಯೆ ಕಡಿಮೆ ಇರುತ್ತದೆ.
ಗಮನಿಸಿ: ಅನಗತ್ಯ ಶುಲ್ಕಗಳಿಂದ ಪಾರಾಗಲು ನಿಮ್ಮ ಬ್ಯಾಂಕಿನ ಮೊಬೈಲ್ ಆಪ್ ಬಳಸಿ ಅಥವಾ ತಿಂಗಳ ಉಚಿತ ವಹಿವಾಟುಗಳ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಎಟಿಎಂ ಬಳಸಿ.
