ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಿವಿಧ ಕಡೆ ಅಕ್ರಮವಾಗಿ ಗ್ಯಾಸ್ ಸಿಲಂಡರ್ ಗಳ ದಾಸ್ತಾನು ಮಾಡಿರುವ ಬಗ್ಗೆ ಮಾಹಿತಿ ಪಡೆದ ತಹಸೀಲ್ದಾರ್ ಸಿಗ್ಬತ್ತುಲ್ಲಾ ರವರ ತಂಡ ದಿಢೀರ್ ದಾಳಿ ನಡೆಸಿ ಸುಮಾರು 64 ಸಿಲಂಡರ್ (Gas Cylinder Raid) ಗಳನ್ನು ಜಪ್ತಿ ಮಾಡಿ ಮುಂದಿನ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ.

Gas Cylinder Raid – ಅಕ್ರಮ ದಾಸ್ತಾನು ಗೋಡನ್ ಗಳ ಮೇಲೆ ದಾಳಿ
ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ದದ ಕಾರಣದಿಂದ ಭಾರತದಲ್ಲೂ ಸಿಲಂಡರ್ ಸಮಸ್ಯೆ ತಾಂಡವವಾಡುತ್ತಿದ್ದು, ಇದನ್ನು ಬಂಡವಾಳ ಮಾಡಿಕೊಂಡ ಹಲವರು ಅಕ್ರಮವಾಗಿ ಸಿಲಂಡರ್ ಗಳನ್ನು ದಾಸ್ತಾನು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಜಿಲ್ಲೆಯಾದ್ಯಂತ ಗ್ಯಾಸ್ ಸಿಲಂಡರ್ ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಕುರಿತು ಹಾಗೂ ಅಂತಹ ಗ್ಯಾಸ್ ಸಿಲಂಡರ್ ಗಳನ್ನು ಸೀಜ್ ಮಾಡುವಂತೆ ಆಯಾ ತಾಲೂಕು ತಹಸೀಲ್ದಾರ್ ರರಿಗೆ ಸೂಚನೆ ನೀಡಿದ್ದರು. ಅದರಂತೆ ಖಚಿತ ಮಾಹಿತಿಯ ಮೇರೆಗೆ ಗುಡಿಬಂಡೆ ಪಟ್ಟಣದ ಹಲವು ಕಡೆ ದಾಳಿ ನಡೆಸಿ 64 ಸಿಲಂಡರ್ ಗಳನ್ನು ವಶಕ್ಕೆ ಪಡೆದು ಸೀಜ್ ಮಾಡಿದ್ದಾರೆ.

ಮನೆಯ ಪಕ್ಕದ ಗೋಡೌನ್ ಕಂಡು ಅಧಿಕಾರಿಗಳೇ ಶಾಕ್
ಪಟ್ಟಣದ 1ನೇ ವಾರ್ಡ್ ನಲ್ಲಿ ಹೆಚ್.ಪಿ ಗ್ಯಾಸ್ ಸಿಲಂಡರ್ ಗಳನ್ನು ಜನವಸತಿ ಪ್ರದೇಶದಲ್ಲೇ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತಹಸೀಲ್ದಾರ್ ರವರ ತಂಡ ಮನೆಯ ಪಕ್ಕದಲ್ಲೇ ಇರುವ ಗೋಡನ್ ನಲ್ಲಿರುವ ಸಿಲಂಡರ್ ಗಳನ್ನು ಕಂಡು ಶಾಕ್ ಆಗಿದ್ದಾರೆ. ಅಲ್ಲಿ 31 ಗೃಹಬಳಕೆ ಖಾಲಿ ಸಿಲಂಡರ್, 15 ಗೃಹಬಳಕೆ ತುಂಬಿದ ಸಿಲಂಡರ್ ಹಾಗೂ 8 ವಾಣಿಜ್ಯ ಬಳಕೆಯ ಖಾಲಿ ಸಿಲಂಡರ್ ಗಳು ಪತ್ತೆ ಯಾಗಿದೆ. ಶಂಕರ್ ನಾಯಕ್ ಎಂಬುವವರ ಮನೆಯ ಬಳಿ ಈ ಸಿಲಂಡರ್ ಗಳು (Gas Cylinder Raid) ಪತ್ತೆಯಾಗಿದ್ದು, ತಾವು ಗ್ಯಾಸ್ ಸಿಲಂಡರ್ ಡಿಲವರಿ ಮಾಡುವ ಕೆಲಸ ಮಾಡುವುದಾಗಿ, ಗ್ಯಾಸ್ ಬುಕ್ ಮಾಡಿದ ಗ್ರಾಹಕರಿಗೆ ಗೌರಿಬಿದನೂರು ಹೆಚ್.ಪಿ. ಏಜೆನ್ಸಿ ಕಡೆಯಿಂದ ಗ್ಯಾಸ್ ತಂದು ಕೊಡುವುದಾಗಿ ಹೇಳಿದ್ದಾರೆ. ಇನ್ನೂ ಪಟ್ಟಣದ ಬಾಪೂಜಿ ನಗರದಲ್ಲಿ ಗೋಡನ್ ನಲ್ಲಿ ಸಹ ಜಯಚಂದ್ರ ಎಂಬುವವರಿಗೆ ಸೇರಿದ 10 ಖಾಲಿ ಗೃಹ ಬಳಕೆ ಸಿಲಂಡರ್ ಗಳನ್ನು ಸೀಜ್ ಮಾಡಲಾಗಿದೆ. Read this also : ಗ್ಯಾಸ್ ಗ್ರಾಹಕರಿಗೆ ಬಿಗ್ ಶಾಕ್: ಇನ್ನು ಮುಂದೆ ಸಿಲಿಂಡರ್ ಬುಕಿಂಗ್‌ಗೆ ಹೊಸ ರೂಲ್ಸ್!
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ
ಇನ್ನೂ ಈ ಕುರಿತು ತಹಸೀಲ್ದಾರ್ ಸಿಗ್ಬತ್ತುಲ್ಲಾ ಮಾತನಾಡಿ, ಜಿಲ್ಲಾಧಿಕಾರಿಗಳ ಸೂಚನೆಯಂತೆ ನಾವು ಕಳೆದ ಮೂರು ದಿನಗಳಿಂದ ಅಕ್ರಮವಾಗಿ ಸಿಲಂಡರ್ ಗಳ ದಾಸ್ತಾನು ಮಾಡಿರುವ ಬಗ್ಗೆ ತಾಲೂಕಿನಾದ್ಯಂತ ಹುಡುಕಾಟ ನಡೆಸಿದ್ದೆವು. ಅದರಂತೆ ಇದೀಗ ಖಚಿತ ಮಾಹಿತಿಯ ಮೇರೆಗೆ ಅಕ್ರಮವಾಗಿ ದಾಸ್ತಾನು ಮಾಡಿದ ಸ್ಥಳಗಳ ಮೇಲೆ (Gas Cylinder Raid) ದಾಳಿ ನಡೆಸಲಾಗಿದೆ. ಪಟ್ಟಣದ ಒಂದನೇ ವಾರ್ಡ್ ನಲ್ಲಿ ಶಂಕರ್ ನಾಯ್ಕ್ ಎಂಬುವವರಿಗೆ ಸೇರಿದ ಮನೆಯಲ್ಲಿ ಹೆಚ್.ಪಿ. ಗ್ಯಾಸ್ ಸಿಲಂಡರ್ ಗಳು ಪತ್ತೆಯಾಗಿದೆ.

ಬಾಪೂಜಿ ನಗರದಲ್ಲೂ 10 ಸಿಲಂಡರ್ ಗಳು ಪತ್ತೆಯಾಗಿದ್ದು, ಎಲ್ಲವನ್ನೂ ಸೀಜ್ ಮಾಡಲಾಗಿದೆ. ಆಹಾರ ಇಲಾಖೆಯ ಅಧಿಕಾರಿಗಳಿಗೆ ಈ ಸಿಲಂಡರ್ ಗಳನ್ನು ಒಪ್ಪಿಸಲಾಗಿದ್ದು, ಈ ಸಂಬಂಧ ಮುಂದಿನ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದರು. ಈ ಕಾರ್ಯಾಚರಣೆಯಲ್ಲಿ (Gas Cylinder Raid) ಶಿರಸ್ತೇದಾರ್ ನಟರಾಜ್, ಕಂದಾಯ ನಿರೀಕ್ಷಕ ಸುರೇಶ್ ನಾಯ್ಕ್, ಆಹಾರ ನಿರೀಕ್ಷಕಿ ಪುಷ್ಪಾ ಹಾಗೂ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಗಣೇಶ್ ಸೇರಿದಂತೆ ಹಲವು ಸಿಬ್ಬಂದಿಗಳು ಭಾಗವಹಿಸಿದ್ದರು.
