ಕಳೆದ ಕೆಲವು ದಿನಗಳಿಂದ ಎಲ್ಪಿಜಿ (LPG) ಗ್ರಾಹಕರಲ್ಲಿ ಒಂದು ರೀತಿಯ ಆತಂಕ ಶುರುವಾಗಿದೆ. ಗ್ಯಾಸ್ ಏಜೆನ್ಸಿಗಳ ಮುಂದೆ ಉದ್ದನೆಯ ಕ್ಯೂ ನಿಂತಿರುವುದು, ಮೊಬೈಲ್‌ಗೆ ಬರುತ್ತಿರುವ ಮೆಸೇಜ್‌ಗಳು ಗ್ರಾಹಕರನ್ನು ಕಂಗಾಲಾಗಿಸಿವೆ. “ಎಲ್ಲರೂ ಇ-ಕೆವೈಸಿ (LPG e-KYC) ಮಾಡಿಸಲೇಬೇಕಾ? ಇಲ್ಲದಿದ್ದರೆ ಸಬ್ಸಿಡಿ ಕಟ್ ಆಗುತ್ತಾ?” ಎಂಬ ಪ್ರಶ್ನೆಗೆ ಈಗ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟನೆ ನೀಡಿದೆ. ಈ ಲೇಖನದಲ್ಲಿ ಇ-ಕೆವೈಸಿ ಬಗ್ಗೆ ಇರುವ ಗೊಂದಲಗಳು ಮತ್ತು ಅದನ್ನು ಸುಲಭವಾಗಿ ಮಾಡುವ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

LPG e-KYC ಯಾರಿಗೆ ಕಡ್ಡಾಯ? ಸಚಿವಾಲಯದ ಸ್ಪಷ್ಟನೆ ಏನು?
ಎಲ್ಲಾ ಎಲ್ಪಿಜಿ ಗ್ರಾಹಕರು ಬಯೋಮೆಟ್ರಿಕ್ ಆಧಾರ್ ದೃಢೀಕರಣ (e-KYC) ಮಾಡಿಸುವುದು ಕಡ್ಡಾಯವೇನಲ್ಲ. ಈ ಕೆಳಗಿನ ಅಂಶಗಳನ್ನು ಗಮನಿಸಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟನೆಯ ಪೋಸ್ಟ್ ಇಲ್ಲಿದೆ ನೋಡಿ
- ಹೊಸ ನಿಯಮವಿಲ್ಲ: ಆಧಾರ್ ದೃಢೀಕರಣದ ವಿಚಾರದಲ್ಲಿ ಸರ್ಕಾರ ಯಾವುದೇ ಹೊಸ ಕಠಿಣ ನಿಯಮ ಹೊರಡಿಸಿಲ್ಲ. ಇದು ಕೇವಲ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವ ಒಂದು ಪ್ರಕ್ರಿಯೆ ಅಷ್ಟೆ.
- ಇದುವರೆಗೆ ಮಾಡಿಸದವರಿಗೆ ಮಾತ್ರ: ನೀವು ಈ ಹಿಂದೆ ಒಮ್ಮೆಯೂ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಮಾತ್ರ ಈಗ ಮಾಡಿಸುವುದು ಅನಿವಾರ್ಯ.
- ಪಿಎಂ ಉಜ್ವಲ ಯೋಜನೆ: ಈ ಯೋಜನೆಯ ಫಲಾನುಭವಿಗಳು ಪ್ರತಿ ಹಣಕಾಸು ವರ್ಷಕ್ಕೊಮ್ಮೆ ಇ-ಕೆವೈಸಿ ಅಪ್ಡೇಟ್ ಮಾಡಬೇಕು. ವಿಶೇಷವಾಗಿ 7 ಸಿಲಿಂಡರ್ ನಂತರ 8 ಮತ್ತು 9ನೇ ಸಿಲಿಂಡರ್ ಪಡೆಯುವಾಗ ಇದು ಅಗತ್ಯ.
- ಸಾಮಾನ್ಯ ಗ್ರಾಹಕರು: ಉಜ್ವಲ ಯೋಜನೆಗೆ (LPG e-KYC) ಒಳಪಡದ ಸಾಮಾನ್ಯ ಗ್ರಾಹಕರು ಈಗಾಗಲೇ ಒಮ್ಮೆ ಇ-ಕೆವೈಸಿ ಮಾಡಿಸಿದ್ದರೆ, ಮತ್ತೆ ಮತ್ತೆ ಮಾಡುವ ಅಗತ್ಯವಿಲ್ಲ.

ಮನೆಯಲ್ಲೇ ಕುಳಿತು 5 ನಿಮಿಷದಲ್ಲಿ ಇ-ಕೆವೈಸಿ ಮಾಡುವುದು ಹೇಗೆ?
ಗ್ಯಾಸ್ ಏಜೆನ್ಸಿಗೆ ಅಲೆದಾಡುವ ಬದಲು ನಿಮ್ಮ ಸ್ಮಾರ್ಟ್‌ಫೋನ್ ಮೂಲಕವೇ ಈ ಕೆಲಸ (LPG e-KYC) ಮುಗಿಸಬಹುದು. ಅದಕ್ಕಾಗಿ ಈ ಸರಳ ಹಂತಗಳನ್ನು ಅನುಸರಿಸಿ:
ಸಿದ್ಧತೆಗಳು:
- ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಇಟ್ಟುಕೊಳ್ಳಿ.
- ಗ್ಯಾಸ್ ಕನೆಕ್ಷನ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಚಾಲನೆಯಲ್ಲಿರಲಿ.
- ಪ್ಲೇ ಸ್ಟೋರ್‌ನಿಂದ ನಿಮ್ಮ ಗ್ಯಾಸ್ ಕಂಪನಿಯ ಅಧಿಕೃತ ಆ್ಯಪ್ (IndianOil One, HP Pay, ಅಥವಾ Hello BPCL) ಡೌನ್‌ಲೋಡ್ ಮಾಡಿ.
- ಜೊತೆಗೆ, ಫೇಸ್ ಸ್ಕ್ಯಾನಿಂಗ್‌ಗಾಗಿ ‘Aadhaar FaceRD’ ಎಂಬ ಸರ್ಕಾರಿ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ.
ಹಂತ ಹಂತವಾದ ಪ್ರಕ್ರಿಯೆ:
ಹಂತ 1: ಲಾಗಿನ್ ಆಗಿ ನಿಮ್ಮ (LPG e-KYC) ಗ್ಯಾಸ್ ಕಂಪನಿಯ ಆ್ಯಪ್ ಓಪನ್ ಮಾಡಿ, ರಿಜಿಸ್ಟರ್ಡ್ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ. ಪ್ರೊಫೈಲ್ ವಿಭಾಗದಲ್ಲಿ ಅಥವಾ ಮುಖಪುಟದಲ್ಲಿ ‘e-KYC’ ಅಥವಾ ‘Re-KYC’ ಎಂಬ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
ಹಂತ 2: ಆಧಾರ್ ದೃಢೀಕರಣ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಅಲ್ಲಿರುವ ನಿಯಮಗಳಿಗೆ ಒಪ್ಪಿಗೆ ಸೂಚಿಸಿ (Tick mark). ನಂತರ ‘Face Scan’ ಬಟನ್ ಒತ್ತಿ. Read this also : ಆಧಾರ್ ಕಾರ್ಡ್ (Aadhaar Card) ಬಳಕೆದಾರರೇ ಗಮನಿಸಿ: ಹೆಸರು, ವಿಳಾಸ ಬದಲಾವಣೆಗೆ ಕೇಂದ್ರದಿಂದ ಹೊಸ ರೂಲ್ಸ್!
ಹಂತ 3: ಫೇಸ್ ಸ್ಕ್ಯಾನಿಂಗ್ ಮ್ಯಾಜಿಕ್ ಈಗ ಆಧಾರ್ ಫೇಸ್ ಆ್ಯಪ್ ತಾನಾಗಿಯೇ ಓಪನ್ ಆಗುತ್ತದೆ. ಮುಖದ ಮೇಲೆ ಸಾಕಷ್ಟು ಬೆಳಕು ಇರುವಂತೆ ನೋಡಿಕೊಂಡು, ಸೆಲ್ಫಿ ಕ್ಯಾಮೆರಾ ಮುಂದೆ ಮುಖ ಹಿಡಿಯಿರಿ. ಒಮ್ಮೆ ಕಣ್ಣು ಮಿಟುಕಿಸಿದರೆ ನಿಮ್ಮ ಮುಖ ಸ್ಕ್ಯಾನ್ ಆಗುತ್ತದೆ.
ಹಂತ 4: ಸಬ್ಮಿಟ್ ಮಾಡಿ ನಿಮ್ಮ ವಿವರಗಳು (LPG e-KYC) ಪರದೆಯ ಮೇಲೆ ಮೂಡುತ್ತವೆ. ಎಲ್ಲವೂ ಸರಿಯಾಗಿದ್ದರೆ ‘Submit’ ಬಟನ್ ಒತ್ತಿ. ಅಷ್ಟೇ! ನಿಮ್ಮ ಇ-ಕೆವೈಸಿ ಯಶಸ್ವಿಯಾಗಿ ಪೂರ್ಣಗೊಂಡಿತು.
ಈ ಪ್ರಕ್ರಿಯೆ ಏಕೆ ಅಗತ್ಯ?
ಸತ್ತವರ ಹೆಸರಿನಲ್ಲಿ ಗ್ಯಾಸ್ ಪಡೆಯುವುದನ್ನು (LPG e-KYC) ತಡೆಯಲು, ಒಬ್ಬರೇ ವ್ಯಕ್ತಿ ಬೇರೆ ಬೇರೆ ಹೆಸರಿನಲ್ಲಿ ಹಲವು ಕನೆಕ್ಷನ್ ಹೊಂದುವುದನ್ನು ತಪ್ಪಿಸಲು ಮತ್ತು ನಿಜವಾದ ಫಲಾನುಭವಿಗಳಿಗೆ ಸಬ್ಸಿಡಿ ತಲುಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ತಂತ್ರಜ್ಞಾನದ ಸಹಾಯದಿಂದ ಮನೆಯಲ್ಲೇ ಈ ಕೆಲಸ ಮುಗಿಸಿ, ಅನಗತ್ಯ ಟೆನ್ಶನ್‌ನಿಂದ ದೂರವಿರಿ. ಆ್ಯಪ್ ಬಳಸುವುದು ಕಷ್ಟವೆನಿಸಿದರೆ ಮಾತ್ರ ಹತ್ತಿರದ ಗ್ಯಾಸ್ ವಿತರಕರ ಕಚೇರಿಗೆ ಭೇಟಿ ನೀಡಿ ಬೆರಳಚ್ಚು (Biometric) ನೀಡಿ ಕೆವೈಸಿ ಪೂರ್ಣಗೊಳಿಸಬಹುದು.

