ಆನೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರ ಗಾಂಭೀರ್ಯದ ನಡಿಗೆ, ಗುಂಡು ಕಣ್ಣುಗಳು ಮತ್ತು ಆ ತುಂಟಾಟಗಳನ್ನು ನೋಡುವುದೇ ಒಂದು ಚಂದ. ಆನೆಗಳು ಕೇವಲ ಪ್ರಾಣಿಗಳಲ್ಲ, ಅವು ಮನುಷ್ಯರಂತೆಯೇ ಭಾವನಾತ್ಮಕ ಜೀವಿಗಳು ಎಂಬುದು ನಮಗೆಲ್ಲ ತಿಳಿದೇ ಇದೆ. ಸಂಶೋಧನೆಗಳ ಪ್ರಕಾರ, ಆನೆಗಳಿಗೆ ಮನುಷ್ಯರು (Elephant Ice Cream Viral Video) ತುಂಬಾ ‘ಕ್ಯೂಟ್’ ಆಗಿ ಕಾಣುತ್ತಾರಂತೆ! ಇದೇ ಕಾರಣಕ್ಕೆ ಅವು ಮನುಷ್ಯರೊಂದಿಗೆ ಬೇಗನೇ ಸ್ನೇಹ ಬೆಳೆಸುತ್ತವೆ. ಇದಕ್ಕೆ ಪೂರಕವಾಗಿರುವಂತಹ ಒಂದು ಹೃದಯಸ್ಪರ್ಶಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

Elephant Ice Cream Viral Video – ಏನಿದೆ ಈ ವಿಡಿಯೋದಲ್ಲಿ?
ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಪುಟ್ಟ ಬಾಲಕಿಯೊಬ್ಬಳು ಬಹಳ ಪ್ರೀತಿಯಿಂದ ಆನೆಗೆ ಐಸ್‌ಕ್ರೀಂ ತಿನ್ನಿಸುವುದನ್ನು ಕಾಣಬಹುದು. ಸಾಮಾನ್ಯವಾಗಿ ಪ್ರಾಣಿಗಳು ಆಹಾರ ಕಂಡಾಗ ಮುಗಿಬೀಳುತ್ತವೆ, ಆದರೆ ಇಲ್ಲಿ ಈ ಗಜರಾಜ ಬಾಲಕಿ ನೀಡಿದ ಐಸ್‌ಕ್ರೀಂ ಅನ್ನು ಪ್ರೀತಿಯಿಂದ ಸ್ವೀಕರಿಸಿದ್ದಾನೆ. ಅಷ್ಟೇ ಅಲ್ಲ, ಐಸ್‌ಕ್ರೀಂ ನೀಡಿದ (Elephant Ice Cream Viral Video) ಖುಷಿಗೆ ಆ ಪುಟ್ಟ ಹುಡುಗಿಗೆ ತನ್ನ ಸೊಂಡಿಲಿನಿಂದ ಪ್ರೀತಿಯ ಮುತ್ತು ನೀಡಿ ಧನ್ಯವಾದ ತಿಳಿಸಿದ್ದಾನೆ. ಆನೆಯ ಈ ಮುದ್ದಾದ ನಡೆಯನ್ನು ಕಂಡು ಪುಟ್ಟ ಬಾಲಕಿ ಕಿಲಕಿಲನೆ ನಗುತ್ತಿರುವುದು ವಿಡಿಯೋದ ಹೈಲೈಟ್.
ನೆಟ್ಟಿಗರ ಮನಗೆದ್ದ ಮುಗ್ಧ ಗೆಳತನ
‘primepost07’ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಪ್ರಾಣಿ ಮತ್ತು ಮನುಷ್ಯನ ನಡುವಿನ ಈ ನಿಷ್ಕಲ್ಮಶ ಬಾಂಧವ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ವಿಡಿಯೋ ವೀಕ್ಷಿಸಿದ ಬಳಕೆದಾರರೊಬ್ಬರು, “ನೋಡಲು ತುಂಬಾನೇ ಮುದ್ದಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ. Read this also : ವ್ಯಕ್ತಿಯನ್ನು ಚೆಂಡಿನಂತೆ ಗಾಳಿಯಲ್ಲಿ ಎಸೆದು, ಕಾಲಿನಿಂದ ತುಳಿದು ಕೊಂದ ಆನೆ: ಮೈ ನಡುಗಿಸುವ ವಿಡಿಯೋ ವೈರಲ್!

ಇನ್ನೊಬ್ಬರು “ಐಸ್‌ಕ್ರೀಂ ಕೊಟ್ಟಿದ್ದಕ್ಕೆ ಈ ಗಜರಾಜನಿಗೆ ಎಷ್ಟು ಖುಷಿಯಾಗಿದೆ ನೋಡಿ” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು “ಇದು ಮುಗ್ಧ ಮನಸ್ಸುಗಳ ಶುದ್ಧ ಗೆಳತನ” ಎಂದು (Elephant Ice Cream Viral Video) ಬಣ್ಣಿಸಿದ್ದಾರೆ. ಒಟ್ಟಿನಲ್ಲಿ, ಪ್ರೀತಿ ಮತ್ತು ಕರುಣೆಗೆ ಭಾಷೆಯ ಹಂಗಿಲ್ಲ, ಅದು ಪ್ರಾಣಿಗಳಿಗೂ ಅರ್ಥವಾಗುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ನೀವೂ ಕೂಡ ಈ ಸುಂದರ ಕ್ಷಣವನ್ನು ಇಲ್ಲಿ ವೀಕ್ಷಿಸಬಹುದು.
ವೈರಲ್ ವಿಡಿಯೋ ಇಲ್ಲಿದೆ : Click Here
