S N Subbareddy : ಗುಡಿಬಂಡೆಯ ದಪ್ಪರ್ತಿ ಗ್ರಾಮದಲ್ಲಿ 2 ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಶಾಸಕ ಸುಬ್ಬಾರೆಡ್ಡಿ ಭೂಮಿ ಪೂಜೆ…!

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದ ಕೆರೆ ಕೋಡಿಗೆ ಅಡ್ಡಲಾಗಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಚೆಕ್ ಡ್ಯಾಂ ಹಾಗೂ ಸೇತುವೆ ಕಾಮಗಾರಿಗೆ (S N Subbareddy) ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.

S N Subbareddy launching ₹2 crore bridge and check dam project at Dapparti village in Gudibande taluk

S N Subbareddy – 2 ಕೋಟಿ ವೆಚ್ಚದ ಸೇತುವೆ ಕಾಮಗಾರಿ

ಈ ವೇಳೆ ಶಾಸಕ ಸುಬ್ಬಾರೆಡ್ಡಿ ಮಾತನಾಡಿ, ದಪ್ಪರ್ತಿ ಗ್ರಾಮದಿಂದ ಕೊಂಡವಳಹಳ್ಳಿ ಹಾಗೂ ಗುಡಿಬಂಡೆ ಭಾಗಗಳಿಗೆ ಹೋಗಲು ಸರಿಯಾದ ಸೇತುವೆ ಇಲ್ಲದೆ ಇಲ್ಲಿನ ಜನರು ಸಂಕಷ್ಟ ಪಡುತ್ತಿದ್ದರು. ಅದರಲ್ಲೂ ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತಿತ್ತು. ಇಲ್ಲಿ ಸೇತುವೆ ನಿರ್ಮಾಣ ಮಾಡಿಕೊಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಅದರಂತೆ ಸರ್ಕಾರದ ಜೊತೆಗೆ ಚರ್ಚೆ ನಡೆಸಿ  ಎರಡು ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಸೇತುವೆ ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ನಿರ್ವಹಿಸುವಂತೆ ಸೂಚಿಸಿದ್ದೇನೆ. ಆರು ತಿಂಗಳ ಒಳಗೆ ಕಾಮಗಾರಿ ಪೂರ್ಣ ಗೊಳಿಸುವಂತೆ ತಿಳಿಸಿದ್ದೇನೆ. ಜೊತೆಗೆ ಕೆರೆಯನ್ನು ಸಹ ಸ್ವಚ್ಚಗೊಳಿಸಿ ಸ್ಥಳೀಯರಿಗೆ ಅನುಕೂಲವಾಗುವಂತೆ ಅಭಿವೃದ್ದಿಪಡಿಸುತ್ತೇನೆ. ಕಾಮಗಾರಿಯನ್ನು ಸ್ಥಳೀಯರು ಸಹ ಪರಿಶೀಲನೆ ನಡೆಸುತ್ತಿರಬೇಕು ಎಂದರು. Read this also : ಉದ್ಯೋಗದಲ್ಲಿ ಬಡ್ತಿ, ವ್ಯಾಪಾರದಲ್ಲಿ ಲಾಭ: ಯುಗಾದಿ ಬಳಿಕ ಯಾವ ರಾಶಿಯವರಿಗೆ ಲಾಭ ಹೆಚ್ಚು?

ಮತ್ತಷ್ಟು ಕಾಮಗಾರಿಗೆ ಚಾಲನೆ ಶೀಘ್ರ

ಇನ್ನೂ ಗುಡಿಬಂಡೆಯ ಅಭಿವೃದ್ದಿಯ ಬಗ್ಗೆ ಮಾತನಾಡುತ್ತಾ, ಸಾರ್ವಜನಿಕರು ಎಲ್ಲೆಲ್ಲಿ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೋ ಅವುಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುತ್ತಿದೆ. ಈಗಾಗಲೇ ಹಂಪಸಂದ್ರ ಗ್ರಾಮದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದ ಬೃಹತ್ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಜೊತೆಗೆ ಗುಡಿಬಂಡೆ ಪಟ್ಟಣದ ಮಸೀದಿ ಹತ್ತಿರದ ಸೇತುವೆಗಾಗಿ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇನ್ನು ಕೇವಲ 15 ದಿನಗಳಲ್ಲಿ ಅಲ್ಲಿಯೂ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಲಿದೆ. ಗುಡಿಬಂಡೆ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಎರಡು ಕೋಟಿ ಅನುದಾನ ಬಂದಿದ್ದು, ಆ ಕಾಮಗಾರಿ ಸಹ ಶೀಘ್ರದಲ್ಲೇ ನೆರವೇರಲಿದೆ.

S N Subbareddy launching ₹2 crore bridge and check dam project at Dapparti village in Gudibande taluk

ಕ್ಷೇತ್ರದ ಸರ್ವತೋಮುಖ ಅಭಿವೃದ್ದಿ ನನ್ನ ಉದ್ದೇಶ

ಇದರ ಜೊತೆಗೆ ಬಜೆಟ್ ನಲ್ಲಿ ತಿಳಿಸಿರುವಂತೆ ಗುಡಿಬಂಡೆ ಕೆರೆ ಕೋಡಿಯ ಬಳಿ ಸೇತುವೆ ನಿರ್ಮಾಣಕ್ಕೆ ಶೀಘ್ರದಲ್ಲೇ ಟೆಂಡರ್‍ ಕರೆಯಲಾಗುತ್ತದೆ. ಕೆರೆಯ ಕಟ್ಟೆಯ ಮೇಲಿನ ರಸ್ತೆ ಸಹ ಅಭಿವೃದ್ದಿ ಮಾಡಲಾಗುತ್ತದೆ. ಬಸ್ ಡಿಪೋ ಕುರಿತು ಸಾರಿಗೆ ಸಚಿವರ ಬಳಿ ಮಾತನಾಡಿದ್ದು, ಈ ಬಾರಿ ಮಂಜೂರು ಮಾಡುವ ಭರವಸೆ ನೀಡಿದ್ದಾರೆ. ಗುಡಿಬಂಡೆಗೆ ಬಸ್ ಡಿಪೋ ನಿರ್ಮಾಣ ಮಾಡಿಸದೇ ಇದ್ದರೇ ಮುಂದಿನ ಚುನಾವಣೆಯಲ್ಲಿ ನಾನು ಗುಡಿಬಂಡೆಗೆ ಮತ ಕೇಳಲು ಬರುವುದಿಲ್ಲ. ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಯೇ ನನ್ನ ಮುಖ್ಯ ಉದ್ದೇಶ ಎಂದರು.

ಈ ಸಮಯದಲ್ಲಿ ಮುಖಂಡರಾದ ನಂಜುಂಡಪ್ಪ, ಆದಿನಾರಾಯಣಪ್ಪ, ನವೀನ್ ರಾಜ್, ಬಾಲೇನಹಳ್ಳಿ ರಮೇಶ್, ಕೆವಿ ನಾರಾಯಣಸ್ವಾಮಿ, ವಿಕಾಸ್, ಅಂಬರೀಶ್, ಕೃಷ್ಣೇಗೌಡ ಸೇರಿದಂತೆ ಹಲವರು ಇದ್ದರು.

Leave a Comment

Your email address will not be published. Required fields are marked *

Scroll to Top