HomeNationalBuldhana Crime : 3 ಬಾರಿ ವಿಷ ಹಾಕಿದ್ರೂ ಸಾಯಲಿಲ್ಲ; 4ನೇ ಬಾರಿಗೆ ಗಂಡ ಹಾಕಿದ...

Buldhana Crime : 3 ಬಾರಿ ವಿಷ ಹಾಕಿದ್ರೂ ಸಾಯಲಿಲ್ಲ; 4ನೇ ಬಾರಿಗೆ ಗಂಡ ಹಾಕಿದ ಆ ‘ಮಾಸ್ಟರ್ ಸ್ಕೆಚ್‌’ಗೆ ಪತ್ನಿ ಬಲಿ!

ಪತಿ-ಪತ್ನಿ ಸಂಬಂಧ ಅಂದಮೇಲೆ ಅಲ್ಲಿ ನೂರು ಜಗಳ, ಸಾವಿರ ಪ್ರೀತಿ ಇರುವುದು ಸಹಜ. ಆದರೆ ಮಹಾರಾಷ್ಟ್ರದ ಬುಲ್ಧಾನದಲ್ಲಿ ನಡೆದ ಈ ಘಟನೆ ಮಾತ್ರ ಮನುಕುಲವೇ ತಲೆತಗ್ಗಿಸುವಂತಿದೆ. ತನ್ನ (Buldhana Crime) ಹೆಂಡತಿ ಮೇಲಿನ ಅನಗತ್ಯ ಅನುಮಾನ ಒಬ್ಬ ವ್ಯಕ್ತಿಯನ್ನು ಎಷ್ಟರಮಟ್ಟಿಗೆ ಕ್ರೂರಿಯನ್ನಾಗಿ ಮಾಡಬಹುದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಮೂರು ಬಾರಿ ಹೆಂಡತಿಯನ್ನು ಕೊಲ್ಲಲು ವಿಫಲ ಯತ್ನ ನಡೆಸಿದ ಗಂಡ, ನಾಲ್ಕನೇ ಬಾರಿ ರೂಪಿಸಿದ ಮಾಸ್ಟರ್ ಪ್ಲಾನ್ ಕೊನೆಗೂ ಆಕೆಯನ್ನು ಬಲಿಪಡೆದಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದಾದರೂ ಏನು? ಇಲ್ಲಿದೆ ಸಂಪೂರ್ಣ ವಿವರ.

Buldhana Crime case where husband allegedly hired killers to murder his wife in Maharashtra

Buldhana Crime – ಅನುಮಾನದ ಬೆಂಕಿ ಮತ್ತು ನಟನೆಯ ಪ್ರೀತಿ

ಬುಲ್ಧಾನ ನಿವಾಸಿ ಪ್ರಕಾಶ್ ಗವಂಡೆ ಎಂಬಾತನಿಗೆ ತನ್ನ ಪತ್ನಿ ವೃಶಾಲಿ ಮೇಲೆ ವಿಪರೀತ ಅನುಮಾನ. ವೃಶಾಲಿ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು. “ನನ್ನ ಪತ್ನಿ ನನಗಿಂತ ಚೆನ್ನಾಗಿದ್ದಾಳೆ, ಎಲ್ಲರ ಜೊತೆ ನಗುನಗುತ್ತಾ ಮಾತನಾಡುತ್ತಾಳೆ” ಎಂಬುದೇ ಈತನ ದೊಡ್ಡ ಸಮಸ್ಯೆಯಾಗಿತ್ತು. ಹೊರಗಡೆ ಪತ್ನಿಯ ಮೇಲೆ ಅತೀವ ಪ್ರೀತಿ ತೋರಿಸುತ್ತಿದ್ದ ಪ್ರಕಾಶ್, ಒಳಗೊಳಗೆ ಆಕೆಯನ್ನು ಮುಗಿಸಲು ಹವಣಿಸುತ್ತಿದ್ದ. ಹಲ್ಲೆ ಮಾಡಿದಾಗಲೆಲ್ಲಾ “ಸಾರಿ, ಇನ್ಯಾವತ್ತೂ ಹೀಗೆ ಮಾಡಲ್ಲ” ಎಂದು ನಟಿಸಿ ವೃಶಾಲಿಯ ನಂಬಿಕೆ ಗಳಿಸಿದ್ದ.

ಊಟದಲ್ಲಿ ವಿಷ: ಮೂರು ಬಾರಿ ಬಚಾವ್!

ಪತ್ನಿಯನ್ನ ಮುಗಿಸಲೇಬೇಕು ಎಂದು ನಿರ್ಧರಿಸಿದ ಪ್ರಕಾಶ್, ಮೊದಲಿಗೆ ಆರಿಸಿಕೊಂಡಿದ್ದು ವಿಷದ ದಾರಿ. ಕಳೆದ ಆರು ತಿಂಗಳಲ್ಲಿ ಬರೋಬ್ಬರಿ ಮೂರು ಬಾರಿ ಆಕೆಯ ಊಟದಲ್ಲಿ ವಿಷ ಬೆರೆಸಿದ್ದ. ಆದರೆ ವಿಧಿಯಾಟ ಬೇರೆಯೇ ಇತ್ತು. ಪ್ರತಿ ಬಾರಿಯೂ ವೃಶಾಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಒಮ್ಮೆ ವಾಂತಿಯಾಗಿ ಆಸ್ಪತ್ರೆಗೆ ದಾಖಲಾದರೂ, (Buldhana Crime) ಅದು ತನ್ನ ಗಂಡನೇ ಮಾಡಿದ ಕೆಲಸ ಎಂದು ಆಕೆ ಕನಸಿನಲ್ಲೂ ಯೋಚಿಸಿರಲಿಲ್ಲ. Read this also : ಗಂಡನಿಗೆ ಹೊಡೆದು ಚಿನ್ನ, ಹಣದೊಂದಿಗೆ ಎಸ್ಕೇಪ್ ಆದ್ಲಾ ಪತ್ನಿ? ಯುಪಿ ವಿಡಿಯೋ ವೈರಲ್

4ನೇ ಬಾರಿಗೆ ಬದಲಾಯಿತು ‘ಡೆಡ್ಲಿ ಪ್ಲಾನ್’

ತಾನು ನೇರವಾಗಿ ವಿಷ ಹಾಕಿದರೆ ಕೆಲಸ ಆಗುತ್ತಿಲ್ಲ ಎಂದು ಅರಿತ ಪ್ರಕಾಶ್, ಈ ಬಾರಿ ವೃತ್ತಿಪರ ಕಿಲೆರ್‌ಗಳ ಮೊರೆ ಹೋದ. ಸಣ್ಣಪುಟ್ಟ ರೌಡಿಗಳ ಸಂಪರ್ಕ ಬೆಳೆಸಿ 1 ಲಕ್ಷ ರೂಪಾಯಿಗೆ ಪತ್ನಿಯನ್ನು ಹತ್ಯೆ ಮಾಡಲು ಸುಪಾರಿ ನೀಡಿದ. ಹಣವನ್ನೂ ನಗದು ರೂಪದಲ್ಲೇ ಪಾವತಿಸಿದ್ದ. ಒಂದು ದಿನ ವೃಶಾಲಿ ಎಂದಿನಂತೆ ಶಾಲೆಗೆ ಹೊರಟಿದ್ದರು. ಈ ವೇಳೆ ಸುಪಾರಿ ಕಿಲ್ಲರ್‌ಗಳು (Buldhana Crime) ಹೊಂಚು ಹಾಕಿ ಕುಳಿತಿದ್ದರು. ಆಕೆ ಹೋಗುತ್ತಿದ್ದ ದಾರಿಯಲ್ಲಿ ಅತೀ ವೇಗವಾಗಿ ಬಂದ ಕಾರೊಂದು ವೃಶಾಲಿಗೆ ಡಿಕ್ಕಿ ಹೊಡೆಯಿತು. ಈ ಭೀಕರ ಅಪಘಾತದಲ್ಲಿ ವೃಶಾಲಿ ಸ್ಥಳದಲ್ಲೇ ಮೃತಪಟ್ಟರು. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ರಸ್ತೆ ಅಪಘಾತದಂತೆ ಕಂಡಿತ್ತು.

Buldhana Crime case where husband allegedly hired killers to murder his wife in Maharashtra

ಸಿಸಿಟಿವಿ ಬಿಚ್ಚಿಟ್ಟ ರಹಸ್ಯ!

ಪೊಲೀಸರು ಆರಂಭದಲ್ಲಿ ಇದನ್ನು ಆಕಸ್ಮಿಕ ಅಪಘಾತ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ತನಿಖೆ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸತ್ಯ ಬಯಲಿಗೆ ಬಂತು. ಆ ಒಂದು ಕಾರು ವೃಶಾಲಿಯನ್ನು ಸತತವಾಗಿ ಹಿಂಬಾಲಿಸುತ್ತಿರುವುದು ಪತ್ತೆಯಾಯಿತು. ಅನುಮಾನಗೊಂಡು (Buldhana Crime) ಕಾರಿನ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, “ನಿಮ್ಮ ಪತಿಯೇ ನಮಗೆ ಸುಪಾರಿ ಕೊಟ್ಟಿದ್ದು” ಎಂದು ಆತ ಬಾಯ್ಬಿಟ್ಟಿದ್ದಾನೆ. ಸದ್ಯ ಪೊಲೀಸರು ಕಿರಾತಕ ಪತಿ ಪ್ರಕಾಶ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರೀತಿ ಮಾಡಬೇಕಾದವನೇ ಹಂತಕನಾದ ಈ ಕಥೆ ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular