ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಸಮಸ್ಯೆಗಳಿಗೆ ಸಾವೊಂದೇ ಪರಿಹಾರವಲ್ಲ. ಆದರೆ, ಕ್ಷಣಿಕ ಆವೇಶ ಮತ್ತು ಕೌಟುಂಬಿಕ ಕಲಹವು ಒಂದು ಸುಂದರ ಸಂಸಾರವನ್ನು ಮಸಣಕ್ಕೆ ತಳ್ಳಿದ ಘಟನೆ ಮಂಡ್ಯ ಜಿಲ್ಲೆಯ (KR Pete Couple Case) ಕೆ.ಆರ್.ಪೇಟೆ ಪಟ್ಟಣದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಸಂಭವಿಸಿದೆ. ಪತಿ-ಪತ್ನಿ ಇಬ್ಬರೂ ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡಿದ್ದರೆ, ಎರಡು ವರ್ಷದ ಮಗು ಮಾತ್ರ ಪವಾಡದಂತೆ ಸಾವಿನ ದವಡೆಯಿಂದ ಪಾರುಗಾಣುವ ಮೂಲಕ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.

KR Pete Couple Case – ಯಾರೀ ದಂಪತಿ? ಏನಿದು ಹಿನ್ನೆಲೆ?
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಹೊಸಕೋಟೆ ಗ್ರಾಮದ ಮೂಲದ ದರ್ಶನ್ ಮತ್ತು ದಿವ್ಯಶ್ರೀ ಮೃತಪಟ್ಟ ದಂಪತಿಗಳು. ಕೇವಲ ಮೂರು ವರ್ಷಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಹೊಸ ಬದುಕು ಕಟ್ಟಿಕೊಳ್ಳಬೇಕಿದ್ದ ಈ ದಂಪತಿಗಳ ನಡುವೆ (KR Pete Couple Case) ಇತ್ತೀಚೆಗೆ ಸಣ್ಣಪುಟ್ಟ ವಿಚಾರಗಳಿಗೆ ಭಿನ್ನಾಭಿಪ್ರಾಯಗಳು ಮೂಡುತ್ತಿದ್ದವು ಎನ್ನಲಾಗಿದೆ. ಇದೇ ಕಲಹ ಇಂದು ವಿಕೋಪಕ್ಕೆ ತಿರುಗಿದೆ.
ಕಂದಮ್ಮನ ಪ್ರಾಣ ತೆಗೆಯಲು ಮುಂದಾದ ಪೋಷಕರು!
ಇಂದು ಮುಂಜಾನೆ ದಂಪತಿಗಳ ನಡುವೆ ಜಗಳ ತಾರಕಕ್ಕೇರಿತ್ತು. ಇದರಿಂದ ಮನನೊಂದ ದಂಪತಿಗಳು ತೀವ್ರ ನಿರ್ಧಾರ ಕೈಗೊಂಡಿದ್ದಾರೆ. ತಾವು ಸಾಯುವ ಮುನ್ನ ತಮ್ಮ ಎರಡು ವರ್ಷದ ಮಗುವನ್ನೂ ಜೊತೆಗೆ ಕರೆದೊಯ್ಯಲು ನಿರ್ಧರಿಸಿದ ಅವರು, ಮಗುವಿನ ಕತ್ತು ಹಿಸುಕಿ ಪ್ರಾಣ ತೆಗೆಯಲು ಯತ್ನಿಸಿದ್ದಾರೆ. ಮಗು ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದಾಗ, (KR Pete Couple Case) ಮಗು ಸಾವನ್ನಪ್ಪಿದೆ ಎಂದು ಭಾವಿಸಿದ ಪೋಷಕರು ಅಂತಿಮವಾಗಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. Read this also : ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ್ಲಾ ವಿವಾಹಿತೆ? ಪತಿ ಸೇರಿ ಮೂವರ ವಿರುದ್ಧ ಎಫ್.ಐ.ಆರ್ ದಾಖಲು
ಮಗುವಿನ ಅಳುವಿನ ಧ್ವನಿ ಕೇಳಿ ಓಡಿ ಬಂದ ನೆರೆಹೊರೆಯವರು
ದಂಪತಿಗಳು ಆತ್ಮಹತ್ಯೆ ಮಾಡಿಕೊಂಡ ಕೆಲ ಹೊತ್ತಿನ ನಂತರ ಮನೆಯೊಳಗೆ ಮಗುವಿನ ಅಳುವಿನ ಧ್ವನಿ ಕೇಳಿ ಬಂದಿದೆ. ಇದನ್ನು ಗಮನಿಸಿದ ಅಕ್ಕಪಕ್ಕದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕೆ.ಆರ್.ಪೇಟೆ ಟೌನ್ ಪೊಲೀಸರು ಮತ್ತು ಸ್ಥಳೀಯರು ಪರಿಶೀಲಿಸಿದಾಗ ದಂಪತಿಗಳು ಮೃತಪಟ್ಟಿದ್ದು ಕಂಡುಬಂದಿದೆ. ಆದರೆ, ಸಾವನ್ನಪ್ಪಿದೆ ಎಂದು ಪೋಷಕರು ಭಾವಿಸಿದ್ದ ಮಗು ಉಸಿರಾಡುತ್ತಿರುವುದು ಕಂಡುಬಂದಾಗ ಎಲ್ಲರಿಗೂ ಅಚ್ಚರಿಯಾಗಿದೆ. ತಕ್ಷಣವೇ (KR Pete Couple Case) ಅಸ್ವಸ್ಥಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಕಂದಮ್ಮ ಪ್ರಾಣಾಪಾಯದಿಂದ ಪಾರಾಗಿದೆ. ಆದರೆ ಕಣ್ಣೆದುರೇ ಪೋಷಕರನ್ನು ಕಳೆದುಕೊಂಡ ಈ ಮಗು ಈಗ ಅನಾಥವಾಗಿದೆ.

ಪೊಲೀಸ್ ತನಿಖೆ ಚುರುಕು
ವಿಷಯ ತಿಳಿಯುತ್ತಿದ್ದಂತೆಯೇ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ದಂಪತಿಗಳ ಈ ಕಠಿಣ ನಿರ್ಧಾರಕ್ಕೆ ನಿಖರವಾದ ಕಾರಣವೇನು? (KR Pete Couple Case) ಕೇವಲ ಕೌಟುಂಬಿಕ ಕಲಹವೋ ಅಥವಾ ಮತ್ಯಾವುದೇ ಒತ್ತಡವಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಜೀವನದಲ್ಲಿ ಸೋಲು, ಸಮಸ್ಯೆಗಳು ಹಾಗೂ ಮನಸ್ತಾಪಗಳು ಸಹಜ. ಆದರೆ ಅಂತಿಮವಾಗಿ ಸಾವಿನ ದಾರಿ ಹಿಡಿಯುವುದು ನಿಮ್ಮನ್ನು ನಂಬಿದವರನ್ನು ಅನಾಥರನ್ನಾಗಿ ಮಾಡುತ್ತದೆ. ಮಾನಸಿಕ ಒತ್ತಡ ಅಥವಾ ಸಮಸ್ಯೆಗಳಿದ್ದಲ್ಲಿ ದಯವಿಟ್ಟು ತಜ್ಞರ ಸಲಹೆ ಪಡೆಯಿರಿ.
