ಸಾಮಾನ್ಯವಾಗಿ ‘ಅಳಿಯ’ ಎಂದರೆ ಹೆಣ್ಣು ಹೆತ್ತವರಿಗೆ ಒಂಥರಾ ಹೆಮ್ಮೆ ಹಾಗೂ ಮಗನ ಸಮಾನ ಎಂಬ ಭಾವನೆ ಇರುತ್ತದೆ. ಆದರೆ, ಉತ್ತರ ಪ್ರದೇಶದ ನಹತೌರ್ನ ಕೈಪಟ್ಲಾದಲ್ಲಿ ನಡೆದಿರುವ (Crime News) ಈ ಘಟನೆ ಕೇಳಿದರೆ, ಸಂಬಂಧಗಳ ಮೇಲಿನ ನಂಬಿಕೆಯೇ ಅಲುಗಾಡುತ್ತದೆ. ಮಾಡಿದ ತಪ್ಪಿಗೆ ಕಣ್ಣೀರು ಹಾಕಿ, ಕ್ಷಮೆ ಕೇಳಿ ಮನೆಗೆ ಬಂದ ಅಳಿಯನೊಬ್ಬ, ಅವಕಾಶ ಸಿಕ್ಕೊಡನೆ ಅತ್ತೆ-ಮಾವ ಹಾಗೂ ತನ್ನ ವಿಕಲಚೇತನ ಪತ್ನಿಗೆ ಮದ್ದುಣಿಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ದೋಚಿ ಪರಾರಿಯಾಗಿದ್ದಾನೆ.

Crime News – ಕಣ್ಣೀರಿನ ನಾಟಕದ ಹಿಂದಿನ ಅಸಲಿ ಕಥೆ
ಸಂತೋಷ್ ವರ್ಮಾ ಎಂಬುವವರ ಮಗಳು ಕಿವುಡ ಮತ್ತು ಮೂಗ (ವಿಕಲಚೇತನೆ). ಆಕೆಗೆ ಜೀವನ ಪರ್ಯಂತ ಆಸರೆಯಾಗಿರುತ್ತಾನೆ ಎಂಬ ನಂಬಿಕೆಯಿಂದ ನವೀನ್ ಎಂಬಾತನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದ್ದರಲ್ಲದೆ, ತಮ್ಮ ಮನೆಯಲ್ಲೇ ಆಶ್ರಯ ನೀಡಿದ್ದರು. ಆದರೆ, ನವೀನ್ ಡ್ರಗ್ಸ್ (ಮಾದಕ ದ್ರವ್ಯ) ವ್ಯಸನಿಯಾಗಿದ್ದ ಕಾರಣ, ಆತನ ವರ್ತನೆ ಬೇಸರ ತರಿಸಿ ಎರಡು ತಿಂಗಳ ಹಿಂದೆಯಷ್ಟೇ ಆತನನ್ನು ಮನೆಯಿಂದ ಹೊರಹಾಕಲಾಗಿತ್ತು.
ಮನೆಯಲ್ಲಿ ಚಿನ್ನ, ಬೆಳ್ಳಿ ಎಲ್ಲಿದೆ ಎಂಬುದು ನವೀನ್ಗೆ ಚೆನ್ನಾಗಿ ತಿಳಿದಿತ್ತು. ಹೇಗಾದರೂ ಮಾಡಿ ಅದನ್ನು ದೋಚಬೇಕು ಎಂದು ಸ್ಕೆಚ್ ಹಾಕಿದ ಆತ, ‘ಕ್ಷಮೆ’ಯನ್ನೇ ಅಸ್ತ್ರವಾಗಿ ಬಳಸಿಕೊಂಡ. ಎಂಟು ದಿನಗಳ ಹಿಂದೆ (Crime News) ಕಣ್ಣೀರು ಹಾಕುತ್ತಾ ಅತ್ತೆ-ಮಾವನ ಬಳಿ ಕ್ಷಮೆ ಕೇಳಿ ಮತ್ತೆ ಮನೆಗೆ ಬಂದ. ಅವನ ಕಣ್ಣೀರಿನ ನಾಟಕಕ್ಕೆ ಮರುಗಿ, ಮಾವ ಸಂತೋಷ್ ವರ್ಮಾ ಮತ್ತೆ ಆತನಿಗೆ ಮನೆಯಲ್ಲಿ ಜಾಗ ನೀಡಿದರು. ಅದೇ ಅವರು ಮಾಡಿದ ಬಹುದೊಡ್ಡ ತಪ್ಪು.
ಮಂಪರು ಊಟ ನೀಡಿ ಕೋಟಿ ಕೋಟಿ ಲೂಟಿ
ಫೆಬ್ರವರಿ 25, ಬುಧವಾರದಂದು ನವೀನ್ ತನ್ನ ಅಸಲಿ ಆಟ ಶುರು ಮಾಡಿದ. ಮನೆಯವರೇ ತನ್ನನ್ನು ನಂಬಿದ್ದಾರೆ ಎಂಬ ಅವಕಾಶವನ್ನು ಬಳಸಿಕೊಂಡು ಇಡೀ ಕುಟುಂಬಕ್ಕೇ ಬೆನ್ನಿಗೆ ಚೂರಿ ಹಾಕಿದ. ರಾತ್ರಿ ಊಟ ಮತ್ತು ಪಾನೀಯಗಳಲ್ಲಿ ಅಮಲು ಬರುವ ಔಷಧಿಯನ್ನು (ಮದ್ದು) ಬೆರೆಸಿ, ಅತ್ತೆ-ಮಾವ ಹಾಗೂ ತನ್ನ ವಿಕಲಚೇತನ ಪತ್ನಿಗೆ ತಿನ್ನಿಸಿದ. ಕುಟುಂಬಸ್ಥರೆಲ್ಲರೂ (Crime News) ಪ್ರಜ್ಞೆ ತಪ್ಪಿ ಬಿದ್ದಾಗ, ಕಳ್ಳ ಅಳಿಯ ಮನೆಯ ಸೇಫ್ ಲಾಕರ್ಗಳನ್ನು ಜಾಲಾಡಿದ್ದಾನೆ. Read this also : ಬೆಡ್ ರೂಮ್ ನಲ್ಲಿ ಹೆಂಡತಿಯ ಬಣ್ಣದಾಟ: ಕಣ್ಣಾರೆ ಕಂಡ ಪತಿ ಶಾಕ್ನಿಂದ ಅಲ್ಲೇ ಕುಸಿದು ಬಿದ್ದ! ವೈರಲ್ ವಿಡಿಯೋ…!
ಬೆಳಿಗ್ಗೆ ಎದ್ದವರಿಗೆ ಕಾದಿತ್ತು ಶಾಕ್
ಆತ ಬರೋಬ್ಬರಿ ಅರ್ಧ ಕೆಜಿ ಚಿನ್ನ (ಬ್ರೇಸ್ಲೆಟ್, ಚೈನ್ಗಳು, 26 ಉಂಗುರಗಳು ಸೇರಿದಂತೆ) ಮತ್ತು 40 ಕೆಜಿ ಬೆಳ್ಳಿಯನ್ನು ದೋಚಿಕೊಂಡು ಪರಾರಿಯಾಗಿದ್ದಾನೆ. ಬೆಳಿಗ್ಗೆ ಮನೆಯವರು ಎಚ್ಚರಗೊಂಡು (Crime News) ನೋಡುವಷ್ಟರಲ್ಲಿ ನವೀನ್ ನಾಪತ್ತೆಯಾಗಿದ್ದ, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳೆಲ್ಲಾ ಖಾಲಿಯಾಗಿದ್ದವು.

ಪೊಲೀಸರ ಭೇಟೆ ಶುರು: ಆಘಾತದಲ್ಲಿ ಕುಟುಂಬ
ಮೋಸ ಹೋದ ಸಂತೋಷ್ ವರ್ಮಾ ಅವರ ಕುಟುಂಬ ದಿಕ್ಕುತೋಚದೆ (Crime News) ಕಣ್ಣೀರು ಹಾಕುತ್ತಾ ಪೊಲೀಸರ ಮೊರೆ ಹೋಗಿದೆ. ವರದಿಗಳ ಪ್ರಕಾರ, ಕಳ್ಳತನವಾದ ವಸ್ತುಗಳ ಒಟ್ಟು ಮೌಲ್ಯ ಬರೋಬ್ಬರಿ ಎರಡು ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಪರಾರಿಯಾಗಿರುವ ನವೀನ್ಗಾಗಿ ಪೊಲೀಸರ ವಿಶೇಷ ತಂಡಗಳು ಬಲೆ ಬೀಸಿದ್ದು, ತೀವ್ರ ಶೋಧ ಕಾರ್ಯ ನಡೆಸುತ್ತಿವೆ. ಇತ್ತ, ನಂಬಿ ಕೆಟ್ಟ ಆತನ ಪತ್ನಿ ಹಾಗೂ ಇಡೀ ಕುಟುಂಬ ತೀವ್ರ ಆಘಾತದಿಂದ ಇನ್ನೂ ಹೊರಬಂದಿಲ್ಲ.
