ಇಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಜಾರಿ ಮಾಡುವಂತಹ ಜನವಿರೋಧಿ ನೀತಿಗಳ ವಿರುದ್ದ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತಿರುತ್ತದೆ. ಅದಕ್ಕೆ ಜನರೂ ಸಹ ಬೆಂಬಲ ಕೊಟ್ಟಾಗ (Farmers Conference) ಹೋರಾಟಕ್ಕೆ ಜಯ ಸಿಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಹ ಸಂಚಾಲಕ ಜಯರಾಮರೆಡ್ಡಿ ತಿಳಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಬಾಗೇಪಲ್ಲಿಯಲ್ಲಿ ಫೆ.25, 26 ರಂದು ನಡೆಯಲಿರುವ ಜಿಲ್ಲಾ ರೈತ ಸಮ್ಮೇಳನದ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರಚಾರಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
Farmers Conference – ಜನವಿರೋಧಿ ನೀತಿಗಳಿಂದ ಜನರಿಗೆ ಸಮಸ್ಯೆ
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಸದಾ ರೈತ, ಜನ, ಬಡವರ ವಿರೋಧಿ ಕಾಯ್ದೆಗಳನ್ನು ಜಾರಿಗೆ ಮಾಡುವ ಮೂಲಕ ಬಂಡವಾಳಷಾಹಿ, ಉಳ್ಳವರು, ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತವೆ. ಸರ್ಕಾರಗಳು ಜಾರಿಗೆ ತರುವಂತಹ ಕಾಯ್ದೆಗಳಿಂದ ಇಂದು ಅನೇಕರು ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ. ಇತ್ತಿಚಿಗೆ ನರೇಗಾ ಯೋಜನೆಯನ್ನು ಬದಲಿಸಿದ್ದು, ಇದರಿಂದ ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ತುಂಬಾನೆ ಕಷ್ಟವಾಗುತ್ತದೆ.
ಈ ರೀತಿಯ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಕೆಪಿಆರ್‌ಎಸ್ ನಿರಂತರ ಹೋರಾಟ ಮಾಡುತ್ತದೆ. ಅದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಬಾಗೇಪಲ್ಲಿ ನಡೆಯಲಿರುವ ಜಿಲ್ಲಾ ರೈತ ಸಮ್ಮೇಳನಕ್ಕೆ ಹೆಚ್ಚು ಸಂಖ್ಯೆಯಲ್ಲಿ ಜನರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. Read this also : ಪರೀಕ್ಷೆಯಿಲ್ಲದೆ ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ! 608 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೃಷ್ಣಾ ನದಿ ನೀರು ಕೇಳಿದರೆ, ಕೊಳಚೆ ನೀರು ಕೊಡ್ತೀರಾ?
ಬಳಿಕ ಜಿಲ್ಲಾ ಮುಖಂಡ ಚೆನ್ನರಾಯಪ್ಪ ಮಾತನಾಡಿ, ಜಿಲ್ಲೆಯ ರೈತರು ಇಂದು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅಂತರ್ಜಲ ಕುಸಿತದಿಂದ ಕುಡಿಯುವ ನೀರಿಗೂ ಸಂಚಕಾರ ಬಂದಿದೆ. ಸರ್ಕಾರವು ಕೃಷ್ಣಾ ನದಿ ನೀರನ್ನು ಹಂಚಿಕೆ ಮಾಡುವ ಬದಲು ಬೆಂಗಳೂರಿನ ಕೊಳಚೆ ನೀರನ್ನು ನೀಡುತ್ತಿರುವುದು (Farmers Conference) ಖಂಡನೀಯ. ಈಗಾಗಲೇ ಹೆಚ್.ಎನ್. ವ್ಯಾಲಿ ನೀರು ಕುಡಿಯಲು ಯೋಗ್ಯವಲ್ಲ ಎಂದು ಹೇಳಲಾಗಿತ್ತು. ಇದೀಗ ಆ ನೀರು ಬಾಗೇಪಲ್ಲಿಯ ಚಿತ್ರಾವತಿ ಡ್ಯಾಂ ಸೇರುತ್ತಿದ್ದು, ನಾವೆಲ್ಲರೂ ಉಚ್ಚೆ ನೀರು ಕುಡಿಯಬೇಕಿದೆ.
ನಮ್ಮ ಪಾಲಿಗೆ ಸಿಗಬೇಕಾದ ಕೃಷ್ಣ ನದಿ ನೀರನ್ನು ತರವು ಬದಲು ಈ ರೀತಿಯ ಕೊಳಚೆ ನೀರನ್ನು ಪೂರೈಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ, ಇನ್ನೂ ದಶಕಗಳಿಂದ ಭೂಮಿ ಸಾಗುವಳಿ ಮಾಡುತ್ತಿರುವ ಬಗರ್ ಹುಕುಂ ರೈತರಿಗೆ ಇನ್ನೂ ಹಕ್ಕುಪತ್ರ ಸಿಗದಿರುವುದು ಸರ್ಕಾರದ ವೈಫಲ್ಯವಾಗಿದೆ. ಈ ಅನ್ಯಾಯಗಳ ವಿರುದ್ಧ ಧ್ವನಿ (Farmers Conference) ಎತ್ತಲು ಫೆಬ್ರವರಿಯಲ್ಲಿ ನಡೆಯುವ ಜಿಲ್ಲಾ ಸಮ್ಮೇಳನವು ನಮಗೆ ದೊಡ್ಡ ವೇದಿಕೆಯಾಗಲಿದೆ ಎಂದರು.

ರೈತ ಸಮ್ಮೇಳನಕ್ಕೆ ಆಹ್ವಾನ
ಫೆಬ್ರವರಿ 25 ಮತ್ತು 26 ರಂದು ನಡೆಯಲಿರುವ ಈ ರೈತ (Farmers Conference) ಸಮ್ಮೇಳನಕ್ಕೆ ಜಿಲ್ಲೆಯಾದ್ಯಂತ ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮುಖಂಡರು ಮನವಿ ಮಾಡಿದರು. ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಮುಖರಾದ ಎಂ.ಎ. ಆದಿನಾರಾಯಣ, ಉಪ್ಪಾರಹಳ್ಳಿ ಶ್ರೀನಿವಾಸ್, ನರೇಗಾ ಸೀನಪ್ಪ, ಆದಿನಾರಾಯಣಸ್ವಾಮಿ, ರವಣ, ಪುರಷೋತ್ತಮ್, ಲಕ್ಷ್ಮೀನಾರಾಯಣ ರಾಮು ಸೇರಿದಂತೆ ಹಲವು ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.
