HomeNationalDelhi Mukherjee Nagar Child Murder : ದೆಹಲಿಯಲ್ಲಿ ಘೋರ ಕೃತ್ಯ: ಎರಡೇ ವರ್ಷದ ಮಗುವಿನ...

Delhi Mukherjee Nagar Child Murder : ದೆಹಲಿಯಲ್ಲಿ ಘೋರ ಕೃತ್ಯ: ಎರಡೇ ವರ್ಷದ ಮಗುವಿನ ಗಂಟಲು ಸೀಳಿ ಕೊಂದ ಅತ್ತೆ, ಅಸಲಿ ಕಾರಣವೇನು?

ದೆಹಲಿಯ ಮುಖರ್ಜಿ ನಗರದಲ್ಲಿ ಇತ್ತೀಚೆಗೆ ನಡೆದ ಈ ಹೃದಯವಿದ್ರಾವಕ ಘಟನೆ ನಾಗರಿಕರನ್ನು ಆತಂಕಕ್ಕೆ ತಳ್ಳಿದೆ. ಅತ್ತೆಯೊಬ್ಬಳು ತನ್ನ ಎರಡು ವರ್ಷದ ಮಗುವನ್ನು (Delhi Mukherjee Nagar Child Murder) ಅತ್ಯಂತ ಕ್ರೂರವಾಗಿ ಕೊಂದಿದ್ದಾಳೆ. ಕೇವಲ ಅಷ್ಟೇ ಅಲ್ಲ, ಮಗುವಿನ ಶವವನ್ನು ತನ್ನ ಮಡಿಲಲ್ಲಿಟ್ಟುಕೊಂಡು ಸಾರ್ವಜನಿಕ ಉದ್ಯಾನವನದಲ್ಲಿ (ಪಾರ್ಕ್) ಗಂಟೆಗಟ್ಟಲೆ ಕುಳಿತಿದ್ದಾಳೆ.

Shocking Delhi Mukherjee Nagar child murder case: Woman arrested after allegedly killing a two-year-old in a park. Police investigation underway.

Delhi Mukherjee Nagar Child Murder – ಏನಿದು ಘಟನೆ?

ದೆಹಲಿ ಪೊಲೀಸರ ಮಾಹಿತಿ ಪ್ರಕಾರ, ಶುಕ್ರವಾರ ಮಧ್ಯಾಹ್ನ ಸುಮಾರು 1:30 ರ ಸುಮಾರಿಗೆ ಮುಖರ್ಜಿ ನಗರ ಪೊಲೀಸ್ ಠಾಣೆಗೆ ಒಂದು ಕರೆಯನ್ನು ಸ್ವೀಕರಿಸಲಾಯಿತು. SFS ಫ್ಲಾಟ್ಸ್ ಸಮೀಪದ ಪಾರ್ಕ್‌ನಲ್ಲಿ ಅಜ್ರಾ (30) ಎಂಬ ಮಹಿಳೆ ಮಗುವಿನ ಶವದೊಂದಿಗೆ ಕುಳಿತಿದ್ದಾಳೆ ಎಂಬ ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದರು.  ಘಟನಾ ಸ್ಥಳಕ್ಕೆ ಹೋದ ಪೊಲೀಸರಿಗೂ ಅಲ್ಲಿನ ದೃಶ್ಯ ನೋಡಿ ಅಘಾತವಾಯಿತು. ಅಜ್ರಾ ತನ್ನ ಪುಟ್ಟ ಸೋದರಳಿಯನ ಗಂಟಲು ಸೀಳಿ ಕೊಲೆ ಮಾಡಿದ್ದಳು. ಆಕೆಯ ಬಟ್ಟೆಯ ಮೇಲೆಲ್ಲಾ ರಕ್ತದ ಕಲೆಗಳಿದ್ದವು, ಆದರೂ ಏನೂ ಅರಿಯದವಳಂತೆ ಮಗುವಿನ ದೇಹವನ್ನು ಹಿಡಿದು ಪಾರ್ಕ್‌ನಲ್ಲಿ ಕುಳಿತಿದ್ದಳು.

ಪೊಲೀಸರ ಕಾರ್ಯಾಚರಣೆ ಮತ್ತು ಮಗುವಿನ ಗುರುತು

ಪಾರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದ ಮಾಲಿ (ಗಾರ್ಡನರ್) ಈ ಕೃತ್ಯವನ್ನು ಕಣ್ಣಾರೆ ಕಂಡಿದ್ದಾನೆ. ಕೂಡಲೇ ಆತ ಬೊಬ್ಬೆ ಹೊಡೆದಾಗ ಜನರು ನೆರೆದಿದ್ದಾರೆ. ಸ್ಥಳೀಯರೊಬ್ಬರು ತಕ್ಷಣ ಮಗುವನ್ನು ಆಕೆಯ ಬಳಿಯಿಂದ ಕಿತ್ತುಕೊಂಡು ಹತ್ತಿರದ ನ್ಯೂ ಲೈಫ್ ಆಸ್ಪತ್ರೆಗೆ (Delhi Mukherjee Nagar Child Murder) ಕರೆದೊಯ್ದಿದ್ದಾರೆ. ಆದರೆ, ಮಗು ಆಗಲೇ ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದರು. Read this also : ಬೆಳೆಸಿದ ಮಗ, ಹುಟ್ಟಿದ ತಂಗಿಯೇ ಯಮನಾದರು! ಸರ್ಕಾರಿ ನೌಕರಳ ಕೊಲೆ ಹಿಂದಿನ ಕರಾಳ ರಹಸ್ಯವೇನು?

ಕೊಲೆಯಾದ ಮಗುವನ್ನು ಸೀಲಂಪುರ ನಿವಾಸಿ ಆದಿಲ್ ಎಂಬುವವರ ಪುತ್ರ ಹಾದಿ (2 ವರ್ಷ) ಎಂದು ಗುರುತಿಸಲಾಗಿದೆ. ಹಾದಿ ಮತ್ತು ಆತನ ತಾಯಿ ಉಜ್ಮಾ, SFS ಫ್ಲಾಟ್ಸ್‌ನಲ್ಲಿ ವಾಸವಿರುವ ತಮ್ಮ ಮಾವನ ಮನೆಗೆ ಅತಿಥಿಗಳಾಗಿ ಬಂದಿದ್ದರು. ಇದೇ ಸಮಯದಲ್ಲಿ(Delhi Mukherjee Nagar Child Murder)  ಅತ್ತೆ ಅಜ್ರಾ ಈ ಕೃತ್ಯ ಎಸಗಿದ್ದಾಳೆ.

ಶವ ಬಿಟ್ಟುಕೊಡಲು ನಿರಾಕರಿಸಿದ ಮಹಿಳೆ!

ಪೊಲೀಸರು ಬಂದಾಗ ಅಜ್ರಾ ಮಗುವಿನ (Delhi Mukherjee Nagar Child Murder) ಮೃತದೇಹವನ್ನು ಬಿಟ್ಟುಕೊಡಲು ಸುತಾರಾಂ ಒಪ್ಪಲಿಲ್ಲ. ಆಕೆಯನ್ನು ಅರೆಸ್ಟ್ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೊನೆಗೂ ಆಕೆಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲಾಗಿದೆ. ಆಕೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

Shocking Delhi Mukherjee Nagar child murder case: Woman arrested after allegedly killing a two-year-old in a park. Police investigation underway.

ಕೊಲೆಗೆ ಕಾರಣವೇನು?

ಒಬ್ಬ ಸೋದರತ್ತೆ ಮಗುವಿನ ಮೇಲೆ ಇಷ್ಟು ಕ್ರೂರವಾಗಿ ನಡೆದುಕೊಳ್ಳಲು ಕಾರಣವೇನು ಎಂಬುದು ಇನ್ನೂ ನಿಗೂಢವಾಗಿದೆ. ಕುಟುಂಬದ ಆಂತರಿಕ ಕಲಹಗಳು ಇದಕ್ಕೆ ಕಾರಣವಿರಬಹುದೇ? ಅಥವಾ ಆಕೆ ಮಾನಸಿಕ ಅಸ್ವಸ್ಥಳೇ? ಎಂಬ ದಿಕ್ಕಿನಲ್ಲಿ (Delhi Mukherjee Nagar Child Murder) ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಹೆಚ್ಚಿನ ವಿವರಗಳು ಲಭ್ಯವಾಗಲಿವೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular