Mahashivratri Miracle : ಶಿವ-ಪಾರ್ವತಿಯರ ಕಲ್ಯಾಣೋತ್ಸವದಲ್ಲಿ ಪ್ರತ್ಯಕ್ಷವಾದ ನಾಗಪ್ಪ! ತೆಲಂಗಾಣದ ಈ ಪವಾಡದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಮಹಾಶಿವರಾತ್ರಿಯ ಪುಣ್ಯಕಾಲದಲ್ಲಿ ಭಕ್ತರು ಶಿವನ ದರ್ಶನ ಪಡೆದು ಪುನೀತರಾಗುವುದು ಸಾಮಾನ್ಯ. ಆದರೆ, ಶಿವನ ಕಲ್ಯಾಣೋತ್ಸವ ನಡೆಯುವಾಗ ಸ್ವತಃ (Mahashivratri Miracle) ಆ ಪರಶಿವನ ಆಭರಣವಾದ ನಾಗರಾಜನೇ ಪ್ರತ್ಯಕ್ಷನಾಗಿ ದರ್ಶನ ನೀಡಿದರೆ? ಇಂತಹದ್ದೇ ಒಂದು ರೋಚಕ ಮತ್ತು ಭಕ್ತಿಪರವಶ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ.

Mahashivratri miracle with cobra appearing at Sri Rajarajeshwara Swamy Temple in Nirmal district during Shiva–Parvati Kalyanotsavam.

Mahashivratri Miracle – ಶಿವ ಪಾರ್ವತಿಯರ ಕಲ್ಯಾಣೋತ್ಸವದಲ್ಲಿ ನಡೆದ ಅಪರೂಪದ ಘಟನೆ

ತೆಲಂಗಾಣದ ನಿರ್ಮಲ್ ಜಿಲ್ಲೆಯ ದಸ್ತೂರಾಬಾದ್ ಮಂಡಲದ ಗೊಡಿಸೆರ್ಯಾಲ ಗ್ರಾಮದಲ್ಲಿರುವ ಶ್ರೀ ರಾಜರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಅದ್ಭುತ ಸಂಭವಿಸಿದೆ. ಮಹಾಶಿವರಾತ್ರಿಯ ಅಂಗವಾಗಿ ದೇವಾಲಯದಲ್ಲಿ ಶಿವ-ಪಾರ್ವತಿಯರ ಕಲ್ಯಾಣೋತ್ಸವವನ್ನು ಅತ್ಯಂತ ಸಡಗರದಿಂದ ಹಮ್ಮಿಕೊಳ್ಳಲಾಗಿತ್ತು. ವೇದಮಂತ್ರಗಳ ಘೋಷದೊಂದಿಗೆ ಮದುವೆ ಶಾಸ್ತ್ರಗಳು ನಡೆಯುತ್ತಿದ್ದ ಆ ಪವಿತ್ರ ಸಮಯದಲ್ಲಿ, ಎಲ್ಲಿಂದಲೋ ಬಂದ ನಾಗರಹಾವೊಂದು ಎಲ್ಲರ ಗಮನ ಸೆಳೆಯಿತು.

ಹೆಡೆಬಿಚ್ಚಿ ಕಲ್ಯಾಣೋತ್ಸವ ವೀಕ್ಷಿಸಿದ ನಾಗೇಂದ್ರ

ಕೇವಲ ಹಾವು ಪ್ರತ್ಯಕ್ಷವಾಗುವುದು ಮಾತ್ರವಲ್ಲದೆ, ಆ ನಾಗಪ್ಪ ದೀರ್ಘಕಾಲದವರೆಗೆ ಫಣಿಯೆತ್ತಿ ಶಾಂತವಾಗಿ ಕುಳಿತು ಕಲ್ಯಾಣೋತ್ಸವದ ವಿಧಿವಿಧಾನಗಳನ್ನು ವೀಕ್ಷಿಸಿದ್ದು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ಪುರೋಹಿತರು ಮಂತ್ರಗಳನ್ನು ಪಠಿಸುತ್ತಿದ್ದರೆ, ಈ ನಾಗರಹಾವು ಯಾವುದೇ ಭಯವಿಲ್ಲದೆ ಶಾಂತವಾಗಿ ಅಲ್ಲಿಯೇ ನೆಲೆಸಿತ್ತು. (Mahashivratri Miracle) ಈ ದೃಶ್ಯವನ್ನು ಕಂಡ ಭಕ್ತರು ಆ ಕ್ಷಣ ಬೆರಗಾಗಿ ಹೋದರು. ಇದನ್ನೂ ಓದಿ : ಲಿಂಗ ರೂಪವಲ್ಲ, ಇಲ್ಲಿ ಶಿವನು ಮನುಷ್ಯ ರೂಪದಲ್ಲಿ ದರ್ಶನ ನೀಡುತ್ತಾನೆ! ಹೇಮಾವತಿ ಶಿವನ ವಿಗ್ರಹದ ಅಪರೂಪದ ವೈಶಿಷ್ಟ್ಯಗಳು..!

ದೈವಿಕ ಪವಾಡ ಎಂದು ಸಂಭ್ರಮಿಸಿದ ಭಕ್ತಸಮೂಹ

ಸಾಮಾನ್ಯವಾಗಿ ಹಾವು ಕಂಡರೆ ಭಯಪಟ್ಟು ಓಡುವ (Mahashivratri Miracle) ಜನರು, ಈ ದೃಶ್ಯ ನೋಡಿ ಭಕ್ತಿಯಿಂದ ಕೈಮುಗಿದಿದ್ದಾರೆ. ಸ್ವತಃ ಆ ಶಿವನೇ ನಾಗೇಂದ್ರನ ರೂಪದಲ್ಲಿ ಬಂದು ತನ್ನ ಕಲ್ಯಾಣವನ್ನು ತಾನೇ ನೋಡುತ್ತಿದ್ದಾನೆ ಎಂದು ಭಕ್ತರು ಪುಳಕಿತರಾದರು. ಸುಮಾರು ಹೊತ್ತು ಕಲ್ಯಾಣೋತ್ಸವದ ಬಳಿಯೇ ಇದ್ದ ಹಾವು, ನಂತರ ಯಾರಿಗೂ ತೊಂದರೆ ನೀಡದೆ ಸಮೀಪದ ಪೊದೆಗಳ ಕಡೆಗೆ ತೆರಳಿದೆ.

Mahashivratri miracle with cobra appearing at Sri Rajarajeshwara Swamy Temple in Nirmal district during Shiva–Parvati Kalyanotsavam.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here 
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಭಾರಿ ವೈರಲ್

ಅಲ್ಲಿ ನೆರೆದಿದ್ದ ಭಕ್ತರು ಈ (Mahashivratri Miracle) ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. “ಓಂ ನಮಃ ಶಿವಾಯ” ಎಂಬ ಕಾಮೆಂಟ್‌ಗಳೊಂದಿಗೆ ಭಕ್ತರು ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದು, ಕಲಿಯುಗದಲ್ಲಿ ಇದು ಶಿವನ ಪವಾಡ ಎಂದು ಅನೇಕರು ನಂಬುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top