ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರ ಘಟನೆಗಳ ವಿಡಿಯೋಗಳೇ ಹೆಚ್ಚು ಸದ್ದು ಮಾಡುತ್ತಿವೆ. ಅದರಲ್ಲೂ ವಿಶೇಷವಾಗಿ ಗಂಡ-ಹೆಂಡತಿಯರ ನಡುವಿನ ಜಗಳಗಳು ಬೀದಿಗೆ ಬರುತ್ತಿರುವುದು ಆತಂಕಕಾರಿ (Viral Video) ಸಂಗತಿ. ಹಳೆಯ ಕಾಲದಲ್ಲಿ ಏನೇ ಮನಸ್ತಾಪವಿದ್ದರೂ ನಾಲ್ಕು ಗೋಡೆಯಲ್ಲಿ ಮುಗಿಯುತ್ತಿತ್ತು. ಆದರೆ ಈಗ ಪಬ್ಲಿಕ್ ಪ್ಲೇಸ್‌ಗಳೇ ಇವರ ರಣರಂಗವಾಗುತ್ತಿವೆ. ಅಂತಹದ್ದೇ ಒಂದು ಶಾಕಿಂಗ್ ವಿಡಿಯೋ ಈಗ ಭಾರಿ ವೈರಲ್ ಆಗಿದೆ.
Viral Video – ಏನಿದು ಘಟನೆ?
ರೈಲ್ವೆ ನಿಲ್ದಾಣವೊಂದರಲ್ಲಿ ದಂಪತಿಗಳಿಬ್ಬರ ನಡುವೆ ಜೋರಾಗಿ ವಾಗ್ವಾದ ನಡೆದಿದೆ. ಇಬ್ಬರ ನಡುವೆ ಯಾವ ವಿಷಯಕ್ಕೆ ಕಿರಿಕಿರಿ ಶುರುವಾಯಿತೋ ತಿಳಿದಿಲ್ಲ, ಆದರೆ ಇಬ್ಬರೂ ಪರಸ್ಪರ ಬೈದಾಡಿಕೊಳ್ಳಲು ಶುರುಮಾಡಿದ್ದಾರೆ. ಸುತ್ತಮುತ್ತ ನೂರಾರು ಜನರಿದ್ದರೂ ಯಾವುದನ್ನೂ ಲೆಕ್ಕಿಸದೆ ಇಬ್ಬರೂ ಕಿರುಚಾಡುತ್ತಿದ್ದರು.
ಚಪ್ಪಲಿಯಲ್ಲಿ ಹೊಡೆದುಕೊಂಡ ಪತಿ!
ಜಗಳ ತಾರಕಕ್ಕೇರಿದಾಗ ಪತಿ ಮಾಡಿದ ಕೆಲಸ ಕಂಡು ಅಲ್ಲಿನ ಜನರೇ ದಬಾಬಾ ಎಂದು ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. ಕೋಪ ನೆತ್ತಿಗೇರಿದ ಪತಿ, ತನ್ನ ಕಾಲುಗಳಲ್ಲಿದ್ದ ಎರಡೂ ಚಪ್ಪಲಿಗಳನ್ನು ಕೈಗೆತ್ತಿಕೊಂಡು ತನ್ನ ಕೆನ್ನೆಗೆ ತಾನೇ (Viral Video) ಜೋರಾಗಿ ಹೊಡೆದುಕೊಳ್ಳಲು ಶುರುಮಾಡಿದ್ದಾನೆ. Read this also : ಮಹಾರಾಷ್ಟ್ರದಲ್ಲಿ ಅಮಾನವೀಯ ಅಟ್ಟಹಾಸ: ಯುವತಿಯನ್ನು ನಡುರಸ್ತೆಯಲ್ಲೇ ಎಳೆದಾಡಿ ವಿಕೃತಿ ಮೆರೆದ ಕಾಮಾಂಧ
ಪತಿಯ ಈ ವರ್ತನೆಯಿಂದ ಗಾಬರಿಯಾದ ಪತ್ನಿ, “ಎಲ್ಲರೂ ನೋಡುತ್ತಿದ್ದಾರೆ ಸುಮ್ಮನಿರು” ಎಂದು ಸಮಾಧಾನಿಸಲು ಹೋದರೂ ಆತ ಕೇಳಲಿಲ್ಲ. ಉಲ್ಟಾ ಅವಳ ಮೇಲೆಯೇ ಕೂಗಾಡುತ್ತಾ, “ನನ್ನನ್ನು ಹೊಡಿ” ಎಂದು ರೇಗಿದ್ದಾನೆ. ಈ ಹೈಡ್ರಾಮಾವನ್ನು ಅಲ್ಲಿದ್ದವರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?
ಟ್ವಿಟ್ಟರ್ (X) ನಲ್ಲಿ ಹರಿದಾಡುತ್ತಿರುವ ಈ (Viral Video) ವಿಡಿಯೋ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ:
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
- “ಸಂಸಾರ ಅಂದಮೇಲೆ ಸಣ್ಣಪುಟ್ಟ ಜಗಳ ಸಹಜ, ಆದರೆ ಹೀಗೆ ಸಾರ್ವಜನಿಕವಾಗಿ ಮಾಡುವುದು ಸರಿನಾ?” ಎಂದು ಕೆಲವರು ಪ್ರಶ್ನಿಸಿದ್ದಾರೆ.
- “ಕೋಪ ಮನುಷ್ಯನನ್ನು ಎಷ್ಟು ಕೆಳಮಟ್ಟಕ್ಕೆ ಇಳಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ” ಎಂದು ಮತ್ಯಾರೋ ಬೇಸರ ವ್ಯಕ್ತಪಡಿಸಿದ್ದಾರೆ.
ಗಮನಿಸಿ: ಜೀವನದಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಸಂಯಮದಿಂದ ಮತ್ತು ಖಾಸಗಿಯಾಗಿ ಬಗೆಹರಿಸಿಕೊಳ್ಳುವುದು ಗೌರವದ ಲಕ್ಷಣ. ಇಂತಹ ಘಟನೆಗಳು ಸಮಾಜದಲ್ಲಿ ಮದುವೆ ಎಂಬ ಪವಿತ್ರ ಬಂಧದ ಬಗ್ಗೆ ತಪ್ಪು ಕಲ್ಪನೆ ಮೂಡಿಸುವಂತಿದೆ.


