Mainpuri Teacher Attack : ಪ್ರೀತಿ ನಿರಾಕರಿಸಿದ್ದಕ್ಕೆ ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ! ಉತ್ತರ ಪ್ರದೇಶದ ಭೀಕರ ಘಟನೆ..!

“ಪ್ರೀತಿ” ಎಂಬ ಪವಿತ್ರ ಭಾವನೆ ಇಂದು ವಿಕೃತ ರೂಪ ತಾಳುತ್ತಿದೆಯೇ? ಎಂಬ ಅನುಮಾನ ಮೂಡಿಸುವಂತಹ ಘಟನೆಯೊಂದು ಉತ್ತರ ಪ್ರದೇಶದ ಮೈನ್ ಪುರಿಯಲ್ಲಿ ನಡೆದಿದೆ. ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಒಂದೇ ಕಾರಣಕ್ಕೆ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಶಿಕ್ಷಕಿಯ ಮೇಲೆ ಅಮಾನುಷವಾಗಿ (Mainpuri Teacher Attack) ಹಲ್ಲೆ ನಡೆಸಿ, ಆಕೆಯ ತುಟಿಗಳನ್ನೇ ಕಚ್ಚಿ ತುಂಡರಿಸಿರುವ ಘೋರ ಕೃತ್ಯ ಎಸಗಿದ್ದಾನೆ.

Mainpuri teacher attack case where student assaulted teacher after love rejection in Uttar Pradesh

Mainpuri Teacher Attack – ಘಟನೆಯ ಹಿನ್ನೆಲೆ

ಮೈನ್ ಪುರಿಯ ಕೊಟ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿ ವಿದ್ಯಾರ್ಥಿ ಅಖಂಡ್ ಪ್ರತಾಪ್ ಸಿಂಗ್, ತಾನು ಓದುತ್ತಿದ್ದ ಕಾಲೇಜಿನ ಶಿಕ್ಷಕಿಯ ಮೇಲೆ ಕಣ್ಣು ಹಾಕಿದ್ದ. ಪದೇ ಪದೇ ಆಕೆಗೆ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ. ಶಿಕ್ಷಕಿ ಈತನ ವರ್ತನೆಯನ್ನು ವಿರೋಧಿಸಿ, ಆತನ ಪೋಷಕರಿಗೆ ದೂರು ನೀಡಿದ್ದರು. ಆ ಸಮಯದಲ್ಲಿ ಆತನ ತಾಯಿ “ಮತ್ತೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ” ಎಂದು ಭರವಸೆ ನೀಡಿದ್ದರು. ಆದರೆ, ಆರೋಪಿಯ ವಿಕೃತ ಮನಸ್ಸು ಮಾತ್ರ ಬದಲಾಗಲಿಲ್ಲ.

ಕಾಲೇಜು ಬದಲಿಸಿದರೂ ಬಿಡದ ಕಿರಾತಕ

ವಿದ್ಯಾರ್ಥಿಯ ಕಿರುಕುಳ ತಾಳಲಾರದೆ ಶಿಕ್ಷಕಿ ತಾನು ಕೆಲಸ ಮಾಡುತ್ತಿದ್ದ ಆಗ್ರಾ ರಸ್ತೆಯ ಕಾಲೇಜನ್ನು ಬಿಟ್ಟು, ಜ್ಯೋತಿ ರಸ್ತೆಯಲ್ಲಿರುವ ಮತ್ತೊಂದು ಕಾಲೇಜಿಗೆ ಸೇರಿಕೊಂಡಿದ್ದರು. ಆದರೆ ಕಾಮುಕ (Mainpuri Teacher Attack)  ವಿದ್ಯಾರ್ಥಿ ಅಖಂಡ್ ಪ್ರತಾಪ್ ಅಲ್ಲಿಗೂ ಬೆನ್ನತ್ತಿ ಬಂದಿದ್ದಾನೆ. ರಸ್ತೆಯಲ್ಲಿ ಹೋಗುವಾಗ ಅಡ್ಡಗಟ್ಟಿ ಅನೈತಿಕ ಸಂಬಂಧಕ್ಕೆ ಒತ್ತಾಯಿಸುತ್ತಿದ್ದ ಎಂದು ತಿಳಿದುಬಂದಿದೆ.

Read this also : ರೈಲಿನಲ್ಲಿ ಯುವತಿಯರ ‘ಜಿದ್ದಾಜಿದ್ದಿ’: ಕೂದಲು ಹಿಡಿದು ಬಡಿದಾಡಿಕೊಂಡ ವಿಡಿಯೋ ಫುಲ್ ವೈರಲ್!

ರಸ್ತೆಯಲ್ಲೇ ನಡೆದ ಭೀಕರ ಕೃತ್ಯ

ಶಿಕ್ಷಕಿ ಈತನ ಬೇಡಿಕೆಗೆ ಮಣಿಯದಿದ್ದಾಗ ರೊಚ್ಚಿಗೆದ್ದ ವಿದ್ಯಾರ್ಥಿ, ರಸ್ತೆಯಲ್ಲೇ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದೆ ಕ್ರೌರ್ಯದ ಮಿತಿ ಮೀರಿದ ಆತ, ಶಿಕ್ಷಕಿಯ ಎರಡು ತುಟಿಗಳನ್ನು ಬಲವಾಗಿ ಕಚ್ಚಿ ತುಂಡರಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಶಿಕ್ಷಕಿಯನ್ನು ತಕ್ಷಣವೇ ಚಿಕಿತ್ಸೆಗಾಗಿ ಆಗ್ರಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, (Mainpuri Teacher Attack) ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Mainpuri teacher attack case where student assaulted teacher after love rejection in Uttar Pradesh

ಸಂಬಂಧಿಸಿದ ವಿಡಿಯೋ ಇಲ್ಲಿದೆ ನೋಡಿ : Click Here
ಪೊಲೀಸ್ ಕ್ರಮ ಮತ್ತು ತನಿಖೆ

ಶಿಕ್ಷಕಿಯ ಸಹೋದರ ನೀಡಿದ (Mainpuri Teacher Attack)  ದೂರಿನ ಮೇರೆಗೆ ಕೊತ್ವಾಲಿ ಪೊಲೀಸರು ಆರೋಪಿ ಅಖಂಡ್ ಪ್ರತಾಪ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. “ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಅಧಿಕಾರಿ ಫತೇ ಬಹದ್ದೂರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top