ಜೀವನದಲ್ಲಿ ಎಲ್ಲ ಸೌಕರ್ಯಗಳಿದ್ದರೂ ಸಾವು ಮಾತ್ರ ಅನಿರೀಕ್ಷಿತವಾಗಿ ಬಾಗಿಲು ತಟ್ಟುತ್ತದೆ ಎಂಬುದು ಈ ಘಟನೆಯನ್ನು ನೋಡಿದರೆ ಅರಿವಾಗುತ್ತದೆ. ಹೈದರಾಬಾದ್‌ನ ಹೊರವಲಯದಲ್ಲಿ ಸಾಫ್ಟ್‌ವೇರ್ (Hyderabad Mother) ಎಂಜಿನಿಯರ್ ಮಹಿಳೆಯೊಬ್ಬರು ತನ್ನಿಬ್ಬರು ಹದಿಹರೆಯದ ಮಕ್ಕಳನ್ನು ಹಾಸ್ಟೆಲ್‌ನಿಂದ ಕರೆತಂದು ರೈಲಿಗೆ ತಲೆಕೊಟ್ಟು ಪ್ರಾಣ ಕಳೆದುಕೊಂಡಿರುವ ಘಟನೆ ಇಡೀ ರಾಜ್ಯವನ್ನೇ ನಡುಗಿಸಿದೆ.

Hyderabad Mother – ಹಾಸ್ಟೆಲ್‌ನಿಂದ ಸಾವಿನ ಹಾದಿಗೆ ಪಯಣ
ತೆಲಂಗಾಣದ ಮೆಡ್ಚಲ್-ಮಲ್ಕಜ್‌ಗಿರಿ ನಿವಾಸಿಯಾಗಿದ್ದ 38 ವರ್ಷದ ವಿಜಯಶಾಂತಿ ರೆಡ್ಡಿ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು. ಅವರ ಇಬ್ಬರು ಮಕ್ಕಳು, 18 ವರ್ಷದ ಚೇತನಾ ರೆಡ್ಡಿ ಮತ್ತು 17 ವರ್ಷದ ವಿಶಾಲ್ ರೆಡ್ಡಿ ಸ್ಥಳೀಯ ಕಾಲೇಜುಗಳಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಶುಕ್ರವಾರ ಸಂಜೆ ಮಕ್ಕಳನ್ನು ಕರೆತರುವುದಾಗಿ ಹೇಳಿ ಮನೆಯಿಂದ ಹೊರಟ ವಿಜಯಶಾಂತಿ, ಮಕ್ಕಳನ್ನು ಕರೆದುಕೊಂಡು ನೇರವಾಗಿ ಚೆರ್ಲಪಲ್ಲಿ ಮತ್ತು ಘಟ್ಕೇಸರ್ ನಿಲ್ದಾಣಗಳ ನಡುವಿನ ರೈಲ್ವೆ ಹಳಿಗಳ ಬಳಿ ಬಂದಿದ್ದಾರೆ. ಅಲ್ಲಿ ಕಾರನ್ನು ನಿಲ್ಲಿಸಿ, ಮಕ್ಕಳೊಂದಿಗೆ ಹಳಿಗಳ ಮೇಲೆ ನಡೆಯತೊಡಗಿದ್ದಾರೆ.
ಚಾಲಕ ಹಾರ್ನ್ ಮಾಡಿದರೂ ಸರಿಯದ ಅಮ್ಮ-ಮಕ್ಕಳು
ಆ ಸಮಯದಲ್ಲಿ ಅದೇ ಹಳಿಯ ಮೇಲೆ ವೇಗವಾಗಿ ಸರಕು ರೈಲು (Goods Train) ಬರುತ್ತಿತ್ತು. ಹಳಿಯ ಮೇಲೆ ಮೂವರು ವ್ಯಕ್ತಿಗಳು ಇರುವುದನ್ನು ಗಮನಿಸಿದ ರೈಲು ಚಾಲಕ, ಅವರನ್ನು ಎಚ್ಚರಿಸಲು ಪದೇ ಪದೇ ಹಾರ್ನ್ ಮಾಡಿದ್ದಾರೆ. ಆದರೆ, ಸಾವು ನಿರ್ಧರಿಸಿದ್ದ ಈ ಅಮ್ಮ-ಮಕ್ಕಳು ಹಳಿಯಿಂದ ಒಂದಿಂಚೂ ಕದಲಿಲ್ಲ. ರೈಲು ಡಿಕ್ಕಿ (Hyderabad Mother) ಹೊಡೆದ ರಭಸಕ್ಕೆ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸಿಕಂದರಾಬಾದ್ ರೈಲ್ವೆ ಪೊಲೀಸರು ತಿಳಿಸಿದ್ದಾರೆ. Read this also : ಬಾಗಲಕೋಟೆಯಲ್ಲಿ ಬೆಚ್ಚಿಬೀಳಿಸುವ ಘಟನೆ: ಅತ್ತೆ ಕಿರುಕುಳಕ್ಕೆ ಮೂರು ಮಕ್ಕಳನ್ನು ಬಲಿಪಡೆದ ತಾಯಿ; ನಂತರ ಮಾಡಿದ್ದೇನು?
ಡೆತ್‌ನೋಟ್‌ನಲ್ಲಿ ವ್ಯಕ್ತವಾದ ಆ ಒಂದು ಭಯ
ಘಟನಾ ಸ್ಥಳದಲ್ಲಿದ್ದ ವಿಜಯಶಾಂತಿ ಅವರ ಕಾರಿನಲ್ಲಿ ಪೊಲೀಸರಿಗೆ ಒಂದು ಡೆತ್‌ನೋಟ್ ಪತ್ತೆಯಾಗಿದೆ. ಅದರಲ್ಲಿ ಅವರು ತನ್ನ ಸಂಬಂಧಿಕರಲ್ಲಿ ಕ್ಷಮೆಯಾಚಿಸಿದ್ದಾರೆ. ತನಗೆ (Hyderabad Mother) ಇನ್ನು ಮುಂದೆ ಬದುಕಲು ಇಷ್ಟವಿಲ್ಲ ಎಂದು ಅವರು ಬರೆದಿದ್ದಾರೆ. ಆದರೆ ಅತ್ಯಂತ ನೋವಿನ ಸಂಗತಿಯೆಂದರೆ, ತಾನು ಸತ್ತ ಮೇಲೆ ಮಕ್ಕಳು ಈ ಜಗತ್ತಿನಲ್ಲಿ ಒಂಟಿಯಾಗಿ ಬಿಡುತ್ತಾರೆ ಎಂಬ ಭಯ ವಿಜಯಶಾಂತಿ ಅವರನ್ನು ಕಾಡಿತ್ತು. ಇದೇ ಕಾರಣಕ್ಕೆ ಅವರು ಮಕ್ಕಳ ಮನವೊಲಿಸಿ, ತಮ್ಮ ಜೊತೆಗೇ ಸಾವಿನ ಹಾದಿಗೆ ಕರೆತಂದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ನಿಗೂಢವಾಗಿ ಉಳಿದ ಸಾವಿನ ನೈಜ ಕಾರಣ
ವಿಜಯಶಾಂತಿ ಅವರ ಪತಿ ವಿಜಯ್ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಆರ್ಥಿಕವಾಗಿ ಈ ಕುಟುಂಬ ಸುಸ್ಥಿತಿಯಲ್ಲಿತ್ತು. ನೆರೆಹೊರೆಯವರು ಅಥವಾ ಸಂಬಂಧಿಕರ ಪ್ರಕಾರ ಅವರ (Hyderabad Mother) ನಡುವೆ ಯಾವುದೇ ದೊಡ್ಡ ಜಗಳಗಳಾಗಲಿ ಅಥವಾ ಸಂಘರ್ಷಗಳಾಗಲಿ ನಡೆದ ಬಗ್ಗೆ ಸುಳಿವಿರಲಿಲ್ಲ. ದುಬೈನಿಂದ ಮರಳಿದ ಪತಿ ಪೊಲೀಸರಿಗೆ ಹೇಳಿಕೆ ನೀಡಿದ್ದು, ಈ ಹಠಾತ್ ಸಾವು ಎಲ್ಲರನ್ನೂ ಅಘಾತಕ್ಕೀಡು ಮಾಡಿದೆ. ವಿಜಯಶಾಂತಿ ಅವರು ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸಿದ ಅಂಶ ಯಾವುದು ಎಂಬ ಬಗ್ಗೆ ಪೊಲೀಸರು ಈಗ ಅವರ ಮೊಬೈಲ್ ಕರೆಗಳು ಮತ್ತು ಇತರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
