“ಕೈತುಂಬಾ ಹಣ ಮಾಡಬೇಕು ಅನ್ನೋ ಆಸೆ ಯಾರಿಗೆ ಇರಲ್ಲ ಹೇಳಿ? ಆದರೆ ಅದೇ ಆಸೆಯೇ ವಂಚಕರಿಗೆ ಬಂಡವಾಳವಾದರೆ ಏನಾಗುತ್ತದೆ ಎಂಬುದಕ್ಕೆ ಹೈದರಾಬಾದ್ ನ ಈ ಘಟನೆಯೇ ಸಾಕ್ಷಿ. ಕಣ್ಣು ಮಿಟುಕಿಸುವುದರೊಳಗೆ 14 ಕೋಟಿ ರೂಪಾಯಿ ಲಾಭ ಬಂದಿದೆ ಎಂದು ನಂಬಿದ ಮಹಿಳೆಯೊಬ್ಬರು, ಕೊನೆಗೆ ಕಳೆದುಕೊಂಡಿದ್ದು (Cyber Crime) ಬರೋಬ್ಬರಿ 2.3 ಕೋಟಿ ರೂಪಾಯಿ! ನಕಲಿ ಟ್ರೇಡಿಂಗ್ ಆ್ಯಪ್ ಮೂಲಕ ನಡೆದ ಈ ಹೈಟೆಕ್ ಮೋಸದ ಕಥೆ ಕೇಳಿದರೆ ನೀವು ಬೆಚ್ಚಿಬೀಳುತ್ತೀರಿ.”

Cyber Crime – ಏನಿದು ಘಟನೆ?
ಡಿಸೆಂಬರ್ 2025ರ ಕೊನೆಯ ವಾರದಲ್ಲಿ, ಸಂತ್ರಸ್ತ ಮಹಿಳೆಗೆ ಸಾಮಾಜಿಕ ಜಾಲತಾಣದಲ್ಲಿ “ಸ್ಟಾಕ್ ಮಾರ್ಕೆಟ್ ತರಬೇತಿ ಮತ್ತು ಹೂಡಿಕೆ” ಎಂಬ ಜಾಹೀರಾತು ಕಾಣಿಸಿತ್ತು. ಅದನ್ನು ಕ್ಲಿಕ್ ಮಾಡಿ ನೋಂದಣಿ ಮಾಡಿಕೊಂಡ ಕೂಡಲೇ, ಅವರನ್ನು ಒಂದು ವಾಟ್ಸಾಪ್ ಗ್ರೂಪ್‌ಗೆ ಸೇರಿಸಲಾಯಿತು. ಅಲ್ಲಿ ಒಬ್ಬ ವ್ಯಕ್ತಿ ತನ್ನನ್ನು ‘ಪ್ರೊಫೆಸರ್’ ಎಂದು ಪರಿಚಯಿಸಿಕೊಂಡರೆ, ‘ಅನ್ಲಿ’ ಎಂಬ ಮಹಿಳೆ ತಾನು ಕಸ್ಟಮರ್ ಸರ್ವಿಸ್ ಮ್ಯಾನೇಜರ್ ಎಂದು ನಂಬಿಸಿದ್ದಳು.
ಆನ್ ಲೈನ್ ಆ್ಯಪ್ ಮೂಲಕ ಶುರುವಾದ ಮಾಯಾಜಾಲ
ವಂಚಕರು ಮಹಿಳೆಗೆ ಭಾರತೀಯ ಮತ್ತು ಅಮೆರಿಕನ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಪಾಠ ಮಾಡಿದ್ದರು. ಅವರಿಂದ ಒಂದು ನಕಲಿ ಟ್ರೇಡಿಂಗ್ ಆ್ಯಪ್ ಡೌನ್‌ಲೋಡ್ ಮಾಡಿಸಿ ಅಕೌಂಟ್ (Cyber Crime) ಓಪನ್ ಮಾಡಿಸಿದ್ದರು. ಈ ಅಕೌಂಟ್ ಮೂಲಕ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಬರುತ್ತದೆ ಎಂದು ನಂಬಿಸಿದ್ದರು.
- ಮೊದಲ ಹಂತ: ಡಿಸೆಂಬರ್ 23 ರಂದು ಮಹಿಳೆ ಮೊದಲು 50,000 ರೂ. ಹೂಡಿಕೆ ಮಾಡಿದ್ದರು. ಆ್ಯಪ್‌ನಲ್ಲಿ ಸ್ವಲ್ಪ ಲಾಭ ಕಾಣಿಸಿದ ತಕ್ಷಣ ಅವರಿಗೆ ನಂಬಿಕೆ ಬಂದಿತ್ತು.
- ಹೂಡಿಕೆಯ ಸುರಿಮಳೆ: ವಂಚಕರ ಮಾತು (Cyber Crime) ನಂಬಿದ ಮಹಿಳೆ, ಡಿಸೆಂಬರ್ 24 ರಿಂದ ಜನವರಿ 19 ರ ಅವಧಿಯಲ್ಲಿ ವಿವಿಧ 11 ಬ್ಯಾಂಕ್ ಖಾತೆಗಳಿಗೆ ಒಟ್ಟು 3 ಕೋಟಿ ರೂ. ವರ್ಗಾಯಿಸಿದ್ದರು. Read this also : ಡಿಜೆ ಹಾಡಿಗೆ ಸಂಭ್ರಮದಿಂದ ಕುಣಿಯುತ್ತಿದ್ದ ವೃದ್ಧೆಯನ್ನು ಕಾಲಿನಿಂದ ಒದ್ದ ಕಿರಾತಕ; ವಿಡಿಯೋ ನೋಡಿ ನೆಟ್ಟಿಗರು ಗರಂ!
14 ಕೋಟಿ ಲಾಭದ ಗ್ರಾಫ್!
ಅವರು ಬಳಸುತ್ತಿದ್ದ ಆ್ಯಪ್‌ನಲ್ಲಿ ಹೂಡಿಕೆಯ ಮೌಲ್ಯ ದಿನದಿಂದ ದಿನಕ್ಕೆ ಏರುತ್ತಲೇ ಇತ್ತು. ಒಂದು ಹಂತದಲ್ಲಿ ಆಕೆಯ ಹೂಡಿಕೆಗೆ 14.77 ಕೋಟಿ ರೂಪಾಯಿ ಲಾಭ ಬಂದಿರುವುದಾಗಿ (Cyber Crime) ಆ್ಯಪ್‌ನಲ್ಲಿ ತೋರಿಸಲಾಗಿತ್ತು. ಇದನ್ನು ಕಂಡು ಮಹಿಳೆ ಸಂಭ್ರಮಿಸಿದ್ದರು. ಆದರೆ ನಿಜವಾದ ಸಿನಿಮಾ ಶುರುವಾಗಿದ್ದೇ ಇಲ್ಲಿ!

ವಿತ್ ಡ್ರಾ ಮಾಡಲು ಹೋದಾಗ ಶಾಕ್!
ತನ್ನ ಖಾತೆಯಲ್ಲಿದ್ದ ಕೋಟ್ಯಂತರ ರೂಪಾಯಿ ಲಾಭವನ್ನು ಮಹಿಳೆ ವಿತ್ ಡ್ರಾ ಮಾಡಲು ಪ್ರಯತ್ನಿಸಿದಾಗ, ವಂಚಕರು ಹೊಸ ದಾಳ ಉರುಳಿಸಿದರು. “ಲಾಭದ ಮೊತ್ತವನ್ನು ಪಡೆಯಬೇಕಾದರೆ ಮೊದಲು 15% ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಬೇಕು” ಎಂದು ಕಂಡೀಷನ್ ಹಾಕಿದರು. ಇದರಿಂದ ಅನುಮಾನಗೊಂಡ (Cyber Crime) ಮಹಿಳೆ ಪ್ರಶ್ನಿಸಲು ಶುರು ಮಾಡಿದಾಗ, ಆ ವಾಟ್ಸಾಪ್ ಗ್ರೂಪ್ ಮಾಯವಾಯಿತು ಮತ್ತು ಫೋನ್ ನಂಬರ್‌ಗಳು ಸ್ವಿಚ್ ಆಫ್ ಆದವು. ತಾನು ವಂಚನೆಗೆ ಒಳಗಾಗಿರುವುದು ತಡವಾಗಿ ಅರಿವಿಗೆ ಬಂದ ಕೂಡಲೇ ಮಹಿಳೆ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಡಿಜಿಟಲ್ ಪುರಾವೆಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ.
ನೀವು ಇಂತಹ ಮೋಸದಿಂದ ಪಾರಾಗುವುದು ಹೇಗೆ?
- ಅಪರಿಚಿತ ಲಿಂಕ್‌ಗಳು ಬೇಡ: ಸೋಶಿಯಲ್ ಮೀಡಿಯಾದಲ್ಲಿ ಬರುವ ‘ಹಣ ದ್ವಿಗುಣ’ ಮಾಡುವ ಜಾಹೀರಾತುಗಳನ್ನು ನಂಬಬೇಡಿ.
- ವಾಟ್ಸಾಪ್ ಟ್ರೇಡಿಂಗ್ ಗ್ರೂಪ್: ಅಪರಿಚಿತರು ಸೇರಿಸುವ (Cyber Crime) ವಾಟ್ಸಾಪ್ ಅಥವಾ ಟೆಲಿಗ್ರಾಮ್ ಹೂಡಿಕೆ ಗ್ರೂಪ್‌ಗಳಿಂದ ತಕ್ಷಣ ಹೊರಬನ್ನಿ.
- ಅಧಿಕೃತ ಆ್ಯಪ್ ಮಾತ್ರ ಬಳಸಿ: ಸೆಬಿ (SEBI) ಮಾನ್ಯತೆ ಪಡೆದ ಬ್ರೋಕಿಂಗ್ ಆ್ಯಪ್‌ಗಳ ಮೂಲಕವೇ ಹೂಡಿಕೆ ಮಾಡಿ.
- ಸೈಬರ್ ಸಹಾಯವಾಣಿ: ಒಂದು ವೇಳೆ ನೀವು ವಂಚನೆಗೆ ಒಳಗಾದರೆ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಿ.
