ಸಿನಿಮಾ ಸ್ಟೈಲ್‌ನಲ್ಲಿ ಅಬ್ಬರಿಸುವ ಕಥೆಗಳಿಗಿಂತಲೂ ರೋಚಕವಾದ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಪ್ರೀತಿ, ಮದುವೆ ಹಾಗೂ ನಂಬಿಕೆಯ ಹೆಸರಲ್ಲಿ ಅಮಾಯಕ ಪುರುಷರಿಗೆ ಗಾಳ ಹಾಕಿ, ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿದ್ದ ‘ಮಾಯಾಂಗನೆ’ಯ ಅಸಲಿ (Fraud Woman) ಮುಖ ಈಗ ಬಯಲಾಗಿದೆ.

ಮದುವೆಯಾಗುವುದು, ಸಂಸಾರ ಮಾಡುವುದು, ಆಮೇಲೆ ಹಣದೊಂದಿಗೆ ಪರಾರಿಯಾಗುವುದು – ಇದು ಈಕೆಯ ‘ಬಿಸಿನೆಸ್ ಮಾಡೆಲ್’. ಈ ಕಿಲಾಡಿ ಮಹಿಳೆಯ ಹೆಸರು ಸುಧಾರಾಣಿ. ಈಗಾಗಲೇ ಈಕೆಯ ವಿರುದ್ಧ ಇಬ್ಬರು ಗಂಡಂದಿರು ಒಟ್ಟಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
Fraud Woman – ಕ್ಷುಲ್ಲಕ ಕಾರಣಕ್ಕೆ ಮೊದಲ ಪತಿಗೆ ಟಾಟಾ!
ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ಮೊದಲು ವೀರೆಗೌಡ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳೂ ಇದ್ದರು. ಆದರೆ ಸಂಸಾರ ಚೆನ್ನಾಗಿರುವಾಗಲೇ ವಿಚಿತ್ರ ತಕರಾರು ತೆಗೆದ ಸುಧಾರಾಣಿ, “ನನ್ನ ಗಂಡನಿಗೆ ಕಾರು ಮತ್ತು ಬುಲೆಟ್ ಓಡಿಸಲು ಬರಲ್ಲ” ಎಂಬ ಸಬೂಬು ನೀಡಿ, ಮಕ್ಕಳನ್ನೂ ಬಿಟ್ಟು ಮನೆಯಿಂದ ಹೊರಬಂದಿದ್ದಳು.
ಡೆಲಿವರಿ ಬಾಯ್‌ಗೆ 20 ಲಕ್ಷದ ಪಂಗನಾಮ!
ವೀರೆಗೌಡನಿಂದ ದೂರಾದ ಸುಧಾರಾಣಿ (Fraud Woman) ಕಣ್ಣು ಬಿದ್ದಿದ್ದು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅನಂತಮೂರ್ತಿ ಎಂಬಾತನ ಮೇಲೆ. “ನನ್ನ ಗಂಡ ತೀರಿಹೋಗಿದ್ದಾರೆ” ಎಂದು ಸುಳ್ಳು ಕಥೆ ಕಟ್ಟಿ ಅನಂತಮೂರ್ತಿಯನ್ನು ನಂಬಿಸಿದ ಸುಧಾರಾಣಿ, ಆತನೊಂದಿಗೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ. ಸುಮಾರು ಒಂದುಕಾಲು ವರ್ಷ ಸಂಸಾರ ಮಾಡಿದ ಈಕೆ, ಅಷ್ಟರಲ್ಲೇ ತನ್ನ ಬಣ್ಣದ ಮಾತುಗಳಿಂದ ಅನಂತಮೂರ್ತಿಯಿಂದ ಬರೋಬ್ಬರಿ 15 ರಿಂದ 20 ಲಕ್ಷ ರೂಪಾಯಿ ಹಣವನ್ನು ವಿವಿಧ ಕಾರಣ ನೀಡಿ ಸುಲಿಗೆ ಮಾಡಿದ್ದಾಳೆ. ಕೈಯಲ್ಲಿ ಹಣ ಖಾಲಿಯಾಗುತ್ತಿದ್ದಂತೆ ಆತನಿಗೂ ‘ಕೈ’ ಕೊಟ್ಟಿದ್ದಾಳೆ. Read this also : ವಯಾಗ್ರ ವ್ಯಸನ, ವಿಕೃತ ಕಾಮದಾಟಕ್ಕೆ ದಾರುಣ ಅಂತ್ಯ: ಪತಿಯನ್ನೇ ಕೊಂದ ಪತ್ನಿಯ ಕರುಣಾಜನಕ ಕಥೆ!
ಮೂರನೇ ಮದುವೆ ಬೆನ್ನಲ್ಲೇ ಕಳ್ಳಾಟ ಬಯಲು
ಅನಂತಮೂರ್ತಿಯನ್ನು ಬಿಟ್ಟ ಸುಧಾರಾಣಿ (Fraud Woman) ಈಗ ಕನಕಪುರ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎಂಬ ವಿಷಯ ತಿಳಿದು ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಮೊದಲ ಪತಿ ವೀರೆಗೌಡ ಮತ್ತು ಎರಡನೇ ಪತಿ ಅನಂತಮೂರ್ತಿ ಕೈಜೋಡಿಸಿದ್ದಾರೆ. ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ತೆರಳಿ ಈ ‘ಮಾಯಾಂಗನೆ’ಯ ವಿರುದ್ಧ ದೂರು ದಾಖಲಿಸಿದ್ದಾರೆ.

ಪೊಲೀಸರ ತನಿಖೆ ಚುರುಕು
ಸದ್ಯ ಇಬ್ಬರೂ ಪತಿಯರು ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಣಕ್ಕಾಗಿ ಸಂಸಾರಗಳನ್ನು ಹಾಳು ಮಾಡುತ್ತಿರುವ ಈ ‘ಕಿಲಾಡಿ’ ಸುಧಾರಾಣಿಯ (Fraud Woman) ಅಸಲಿ ಮುಖವಾಡ ಈಗ ಬಯಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
