ಹೆತ್ತ ಕರುಳೇ ಕಾಲನ ರೂಪದಲ್ಲಿ ಬಂದರೆ ಹೇಗಿರುತ್ತೆ? ಹಗಲಿರುಳು ಕಷ್ಟಪಟ್ಟು ಬೆಳೆಸಿದ ಮಗಳೇ ತನ್ನ ಪ್ರೀತಿಗಾಗಿ ತಂದೆ-ತಾಯಿಯ ಪ್ರಾಣ ತೆಗೆದ ಘೋರ ಘಟನೆಯೊಂದು ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದ ಪರಿಚಯ ಮತ್ತು ಮತಿಭ್ರಮಿತ ಪ್ರೀತಿ (Telangana Crime) ಎಂತಹ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

Telangana Crime – ಏನಿದು ಘಟನೆ?
ವಿಕಾರಾಬಾದ್ ಜಿಲ್ಲೆಯ ಬಂಟ್ವಾರಂ ಮಂಡಲದ ಯಾಚಾರಂ ಗ್ರಾಮದ ದಂಪತಿಗಳಾದ ದಶರಥ್ ಮತ್ತು ಲಕ್ಷ್ಮಿ ಅವರಿಗೆ ಒಬ್ಬ ಮಗ ಹಾಗೂ ಒಬ್ಬಳು ಮಗಳಿದ್ದರು. ಮಗ ಅಶೋಕ್ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಮಗಳು ಸುರೇಖಾ (25) ಬಿಎಸ್‌ಸಿ ನರ್ಸಿಂಗ್ ಮುಗಿಸಿ ಸಂಗಾರೆಡ್ಡಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಮಗಳ ಭವಿಷ್ಯಕ್ಕಾಗಿ ಪೋಷಕರು ಅದೆಷ್ಟೋ ಕನಸು ಕಂಡಿದ್ದರು, ಆದರೆ ಆಕೆಯ ತಲೆಯಲ್ಲಿ ಬೇರೆಯದೇ ಪ್ಲಾನ್ ಇತ್ತು.
ಇನ್‌ಸ್ಟಾಗ್ರಾಮ್ ಪ್ರೇಮ ಮತ್ತು ಹತ್ಯೆಯ ಸಂಚು
ಸುಮಾರು ಒಂದು ವರ್ಷದ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ಸುರೇಖಾಳಿಗೆ ಒಬ್ಬ ಯುವಕನ ಪರಿಚಯವಾಗಿತ್ತು. ಅದು ಪ್ರೇಮಕ್ಕೆ ತಿರುಗಿತು. ಈ ವಿಷಯವನ್ನು ಮನೆಯಲ್ಲಿ ತಿಳಿಸಿದಾಗ ಪೋಷಕರು ಆಕೆಯ ಪ್ರೇಮಕ್ಕೆ ಒಪ್ಪಿಗೆ ನೀಡಲಿಲ್ಲ. ಇದರಿಂದ ಕೆರಳಿದ ಸುರೇಖಾ, ತನ್ನ ಪ್ರೇಮಕ್ಕೆ ಅಡ್ಡಿಯಾಗಿರುವ ಹೆತ್ತವರನ್ನೇ ಹಾದಿಯಿಂದ ತಪ್ಪಿಸಲು (Telangana Crime) ನಿರ್ಧರಿಸಿದಳು.

ತಾನು ವೃತ್ತಿಯಲ್ಲಿ ನರ್ಸ್ ಆಗಿದ್ದರಿಂದ, ಅವರಿಗೆ ಅತಿಯಾದ ಡೋಸ್ ಇಂಜೆಕ್ಷನ್ ನೀಡಿ ಸಾಯಿಸಲು ಸ್ಕೆಚ್ ಹಾಕಿದಳು. ಇದಕ್ಕಾಗಿ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಿಂದಲೇ ಅಟ್ರಾಕ್ಯುರಿಯಮ್ (Atracurium) ಮತ್ತು ಅರ್ಟಾಸಿಲ್ (Artacil) ಎಂಬ ನಾಲ್ಕು ಬಾಟಲಿ ಅರಿವಳಿಕೆ (Anesthesia) ಇಂಜೆಕ್ಷನ್‌ಗಳನ್ನು ಕಳ್ಳತನ ಮಾಡಿದ್ದಳು.
ಆ ರಾತ್ರಿ ನಡೆದಿದ್ದೇನು?
ಜನವರಿ 24ರಂದು ಸುರೇಖಾ ತನ್ನ ಮನೆಗೆ ಬಂದಿದ್ದಳು. ಅಂದು ರಾತ್ರಿ ಪೋಷಕರೊಂದಿಗೆ ಮತ್ತೆ ಮದುವೆಯ ವಿಷಯ ಪ್ರಸ್ತಾಪಿಸಿದಾಗ ಅವರು ನಿರಾಕರಿಸಿದರು. ತಕ್ಷಣವೇ ತನ್ನ ಕ್ರೂರ ಬುದ್ಧಿ ಉಪಯೋಗಿಸಿದ ಸುರೇಖಾ, “ನಿಮ್ಮ ಮೊಣಕಾಲು ನೋವು ಕಡಿಮೆಯಾಗಲು ಇಂಜೆಕ್ಷನ್ ತಂದಿದ್ದೇನೆ” ಎಂದು ನಂಬಿಸಿ, ತಂದೆ-ತಾಯಿಗೆ (Telangana Crime) ಅತಿಯಾದ ಡೋಸ್ ಇಂಜೆಕ್ಷನ್ ನೀಡಿದ್ದಾಳೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. Read this also : ಆಗ್ರಾದಲ್ಲಿ ಘೋರ ಕೃತ್ಯ : ಮದುವೆ ನಿರಾಕರಿಸಿದ ಹೆಚ್.ಆರ್ ಮ್ಯಾನೇಜರ್ ಹ*ತ್ಯೆ; ತಲೆ ಕತ್ತರಿಸಿ ದೇಹ ತುಂಡು ಮಾಡಿದ ಪ್ರೇಮಿ!
ನಾಟಕವಾಡಿದ ಕಿರಾತಕಿ!
ಪೋಷಕರು ಮೃತಪಟ್ಟ ನಂತರ, ಏನೂ ಅರಿಯದವಳಂತೆ ಹೈದರಾಬಾದ್‌ನಲ್ಲಿದ್ದ ಅಣ್ಣ ಅಶೋಕ್‌ಗೆ ಕರೆ ಮಾಡಿ, “ಅಪ್ಪ-ಅಮ್ಮ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾರೆ, ನನಗೆ ಭಯವಾಗುತ್ತಿದೆ” ಎಂದು ಅಳುತ್ತಾ ನಾಟಕವಾಡಿದ್ದಾಳೆ. ಸಾಲದ ಬಾಧೆಯಿಂದ ಅವರು ಸತ್ತಿರಬಹುದು ಎಂದು ಕಥೆ ಕಟ್ಟಿದ್ದಳು. ಅಷ್ಟೇ ಅಲ್ಲದೆ, ಅವರು ಬಿದ್ದಾಗ ತಾನು ಸಿಪಿಆರ್ (CPR) ಮಾಡಿ ಉಳಿಸಲು ಪ್ರಯತ್ನಿಸಿದೆ ಎಂದೂ ಸುಳ್ಳು ಹೇಳಿದ್ದಳು.

ಪೊಲೀಸರ ತನಿಖೆಯಲ್ಲಿ ಬಯಲಾದ ಸತ್ಯ
ಅಶೋಕ್‌ಗೆ ತಂಗಿಯ ನಡವಳಿಕೆಯ (Telangana Crime) ಮೇಲೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಮನೆಯಲ್ಲಿ ಖಾಲಿ ಇಂಜೆಕ್ಷನ್ ಬಾಟಲಿಗಳು ಮತ್ತು ಸಿರಿಂಜ್‌ಗಳು ಪತ್ತೆಯಾದವು. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಸುರೇಖಾ ತಾನೇ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ. ಪ್ರಸ್ತುತ ಪೊಲೀಸರು ಆಕೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
