Thursday, January 29, 2026
HomeNationalBull Attack in Chhatarpur : ಛತ್ತರ್‌ ಪುರದಲ್ಲಿ ವೃದ್ಧನ ಮೇಲೆ ಗೂಳಿ ಅಟ್ಟಹಾಸ: ಸಿಸಿಟಿವಿಯಲ್ಲಿ...

Bull Attack in Chhatarpur : ಛತ್ತರ್‌ ಪುರದಲ್ಲಿ ವೃದ್ಧನ ಮೇಲೆ ಗೂಳಿ ಅಟ್ಟಹಾಸ: ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ!

ಮಧ್ಯಪ್ರದೇಶದ ಛತ್ತರ್‌ ಪುರದಲ್ಲಿ ಮೈ ಜುಂ ಎನಿಸುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಬೀದಿಯಲ್ಲಿ ಸಂಚರಿಸುತ್ತಿದ್ದ ಗೂಳಿಯೊಂದು ವೃದ್ಧರೊಬ್ಬರ ಮೇಲೆ ಭೀಕರವಾಗಿ ದಾಳಿ ನಡೆಸಿದ್ದು, ಅವರು (Bull Attack in Chhatarpur) ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಈ ಭೀಕರ ಘಟನೆಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

Bull attack on elderly man captured on CCTV in Chhatarpur, Madhya Pradesh

Bull Attack in Chhatarpur – ಏಕಾಏಕಿ ದಾಳಿ ಮಾಡಿದ ಮದವೇರಿದ ಗೂಳಿ

ನಗರದ ಕೋತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಹಿತಕರ ಘಟನೆ ನಡೆದಿದ್ದು, ಸಂತ್ರಸ್ತ ವ್ಯಕ್ತಿಯನ್ನು ಲಾಲ್ಜಿ ಪಟ್ಕರ್ (60) ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿ ಸಾಮಾನ್ಯರಂತೆ ನಡೆದು ಹೋಗುತ್ತಿದ್ದ ಲಾಲ್ಜಿ ಅವರಿಗೆ ಹಿಂದಿನಿಂದ ಬಂದ ಗೂಳಿ ಏಕಾಏಕಿ ತನ್ನ ಕೊಂಬುಗಳಿಂದ ಮೇಲಕ್ಕೆತ್ತಿ ನೆಲಕ್ಕೆ ಅಪ್ಪಳಿಸಿದೆ. ಅದೃಷ್ಟವಶಾತ್, ಗೂಳಿ ಮೊದಲ ಅಟ್ಯಾಕ್ ಮಾಡಿದ ನಂತರ ಮತ್ತೆ ದಾಳಿ ಮಾಡದೆ ಅಲ್ಲಿಂದ ತೆರಳಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತೀವ್ರ ಗಾಯ ಹಾಗೂ ಶಸ್ತ್ರಚಿಕಿತ್ಸೆ

ಗೂಳಿಯ ಭೀಕರ ದಾಳಿಯಿಂದಾಗಿ ಲಾಲ್ಜಿ ಅವರು ಎದ್ದು ನಿಲ್ಲಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಗಮನಿಸಿದ ತಕ್ಷಣ ಸ್ಥಳೀಯರು ಮತ್ತು ಕುಟುಂಬಸ್ಥರು ರಕ್ಷಣೆಗೆ ಧಾವಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಲಾಲ್ಜಿ ಅವರ ಸೊಂಟದ ಮೂಳೆ ಮತ್ತು ಒಂದು ಕೈ ಮುರಿದಿರುವುದು (Bull Attack in Chhatarpur) ಪತ್ತೆಯಾಗಿದೆ. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಸುಮಾರು 5 ರಿಂದ 7 ಹೊಲಿಗೆಗಳನ್ನು ಹಾಕಲಾಗಿದ್ದು, ಸದ್ಯ ಅವರಿಗೆ ಶಸ್ತ್ರಚಿಕಿತ್ಸೆ ಮುಂದುವರಿದಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here

ಆಡಳಿತ ಮಂಡಳಿಯ ವಿರುದ್ಧ ಸಾರ್ವಜನಿಕರ ಆಕ್ರೋಶ

ಈ ಘಟನೆಯಿಂದ ರೊಚ್ಚಿಗೆದ್ದಿರುವ ಸ್ಥಳೀಯ ನಿವಾಸಿಗಳು ನಗರಸಭೆ ಮತ್ತು ಸ್ಥಳೀಯ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬೀದಿದನಗಳ ಹಾವಳಿಯನ್ನು ತಡೆಯಲು ಅಧಿಕಾರಿಗಳು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಕಿಡಿಕಾರಿದ್ದಾರೆ. ಕೂಡಲೇ (Bull Attack in Chhatarpur) ಇಂತಹ ಪ್ರಾಣಿಗಳನ್ನು ಹಿಡಿದು ಸುರಕ್ಷಿತ ಗೋಶಾಲೆಗಳಿಗೆ ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. Read this also : ನಡು ರಸ್ತೆಯಲ್ಲಿ ಗೂಳಿಯ ರೌದ್ರಾವತಾರ, ಚೆಂಡಿನಂತೆ ಹಾರಿದ ಮಹಿಳೆ! ಎದೆ ನಡುಗಿಸುತ್ತೆ ಈ ಶಾಕಿಂಗ್ ವಿಡಿಯೋ

Bull attack on elderly man captured on CCTV in Chhatarpur, Madhya Pradesh

ಶಿಯೋಪುರದಲ್ಲಿ ಚಿರತೆ ದಾಳಿಯ ಭೀತಿ

ಇದೇ ದಿನ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಸಬಲ್‌ಗಢ ಪ್ರದೇಶದಲ್ಲೂ ಮತ್ತೊಂದು ವನ್ಯಜೀವಿ ದಾಳಿ ನಡೆದಿದೆ. ಬೇರೈ ಗ್ರಾಮದ ರಾಮರತಿ ಎಂಬ ವೃದ್ಧೆಯ ಮೇಲೆ ಚಿರತೆ ದಾಳಿ ಮಾಡಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಗ್ವಾಲಿಯರ್ ಆಸ್ಪತ್ರೆಗೆ ರವಾನಿಸಲಾಗಿದೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular